ರಾಜ್ಯದಲ್ಲಿ ಕೊರೋನಾ ಹೆಚ್ಚಳಕ್ಕೆ ಅನಿಯಂತ್ರಿತ ವಲಸೆ ಕಾರಣ: ತಜ್ಞರ ಸಮಿತಿ ಅಭಿಪ್ರಾಯ

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಮಿತಿಮೀರಲು ಅನಿಯಂತ್ರಿತ ವಲಸೆಗಳೇ ಕಾರಣ. ಆದರೆ ಕಾನೂನಿನ ಮೂಲಕ ಅಂತರಜಿಲ್ಲಾ ವಲಸೆಗಳನ್ನ ನಿಯಂತ್ರಿಸುವುದು ಕಷ್ಟ ಎಂದು ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.

news18-kannada
Updated:July 11, 2020, 2:30 PM IST
ರಾಜ್ಯದಲ್ಲಿ ಕೊರೋನಾ ಹೆಚ್ಚಳಕ್ಕೆ ಅನಿಯಂತ್ರಿತ ವಲಸೆ ಕಾರಣ: ತಜ್ಞರ ಸಮಿತಿ ಅಭಿಪ್ರಾಯ
ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು(ಜುಲೈ 11): ಉದ್ಯಾನ ನಗರಿಯಲ್ಲಿ ಕೊರೋನಾ ಸೋಂಕು ಹೆಚ್ಚಳಕ್ಕೆ ಅನಿಯಂತ್ರಿತ ವಲಸೆಯೇ ಕಾರಣ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಅಭಿಪ್ರಾಯ ಪಟ್ಟಿದೆ. ಆದರೆ ಆ ವರದಿಯ ಪ್ರಕಾರ ವಲಸೆ ತಡೆಯಲು ಮುಂದಾಗಿದ್ದ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಯಾಕೆಂದರೆ ಅನಿಯಂತ್ರಿತ ವಲಸೆ ತಪ್ಪಿಸಲು ಅಧಿಕಾರಿಗಳು ಕಷ್ಟ ಎನ್ನುತ್ತಿದ್ದಾರೆ. ಅನಿಯಂತ್ರಿತ ವಲಸೆ ತಪ್ಪಿಸಲು ಜನರಿಗೆ ಮನವಿ ಮಾಡೋದು ಬಿಟ್ಟರೆ ಬೇರೆ ಏನು ಮಾರ್ಗಗಳಿಲ್ಲ ಎಂದು ಸಿಎಂ ಬಿಎಸ್​ವೈಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನಿನ ಮೂಲಕ ವಲಸೆಗಾರರನ್ಮು ಕಟ್ಟಿ ಹಾಕುವುದು ಕಷ್ಟ ಎಂದಿದ್ದಾರೆ. ಪ್ರಮುಖವಾಗಿ ಅಧಿಕಾರಿಗಳು ಈ ರೀತಿಯ ಮಾಡಿದ್ರೆ ಅನಿಯಂತ್ರಿತ ವಲಸೆ ತಡೆಯಬಹುದು ಎಂದು ಈ ಅಧಿಕಾರಿಗಳು ಕೆಲ ಸಲಹೆಗಳನ್ನ ನೀಡಿದ್ದಾರೆ.

ವರದಿಯಲ್ಲಿ ನೀಡಿರುವ ಪ್ರಮುಖ ಸಲಹೆಗಳು:

1) ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರೋಂದಲನಕ್ಕೆ ಕೈಜೋಡಿಸಬೇಕು
2) ಸಚಿವರು ಮತ್ತು ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯ
3) ಬೆಂಗಳೂರು ಬಿಟ್ಟು ಹೊರಗೆ ಹೋಗಬೇಡಿ ಅಂತ ಮನವರಿಕೆ ಮಾಡಬೇಕು
4) ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಿದಲ್ಲಿ ಮಾತ್ರ ಒಂದಷ್ಟು ಮಟ್ಟದ ವಲಸೆಗೆ ಕಡಿವಾಣಇದನ್ನೂ ಓದಿ: ‘ಹಿರಿಯರನ್ನು ಕೋವಿಡ್​​-19 ವೈರಸ್​​ನಿಂದ ಕಾಪಾಡಿ‘ - ಯುವಕರಿಗೆ ಸಚಿವ ಡಾ. ಸುಧಾಕರ್​​ಗೆ ಮನವಿ

ಇವಿಷ್ಟು ಸಲಹೆಗಳನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಪ್ರಮುಖವಾಗಿ ಅಂತರ್ ಜಿಲ್ಲಾ ಓಡಾಟ ನಿರ್ಬಂಧದ ಬಗ್ಗೆಯೂ ಸಲಹೆ ನೀಡಿದ್ದಾರೆ. ಆದರೆ ಅಂತರ್ ಜಿಲ್ಲೆ ನಿರ್ಬಂಧ ಮಾಡೋದು ಸರ್ಕಾರಕ್ಕೆ ಕಷ್ಟ ಆಗಿದೆ. ಯಾಕೆಂದರೆ ಅಂತರಜಿಲ್ಲಾ ಓಡಾಟ ನಿಂತರೆ ಆರ್ಥಿಕ ಹೊಡೆತ ನೀಡುತ್ತದೆ. ಕಾರ್ಮಿಕರು ವಾಪಸ್ ಬರದಿದ್ದರೆ ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ. ಹೀಗಾಗಿ ಅನಿಯಂತ್ರಿತ ವಲಸೆ ತಡೆ ಕಷ್ಟ ಎಂದು ಅಧಿಕಾರಿಗಳು ನಿರ್ಧಾರಕ್ಕೆ ಬಂದಿದ್ದು, ವಲಸೆ ತಡೆಯುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆ ಆಗಿರುವುದು ಖಚಿತವಾಗಿದೆ.ರಾಜ್ಯದಲ್ಲಿ ಈವರೆಗೆ ದಾಖಲಾದ ಕೊರೋನಾ ಪ್ರಕರಣಗಳ ಸಂಖ್ಯೆ 33 ಸಾವಿರ ದಾಟಿ ಹೋಗಿದೆ. ಬೆಂಗಳೂರು ನಗರದಲ್ಲೇ ಹೆಚ್ಚಿನ ಕೊರೋನಾ ಕೇಸ್​ಗಳು ಇವೆಯಾದರೂ ಬೇರೆ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಹರಡುತ್ತಿದೆ. ನಿನ್ನೆ ಮೊದಲ ಬಾರಿಗೆ ಬೆಂಗಳೂರೇತರ ಜಿಲ್ಲೆಯೊಂದರಲ್ಲಿ ಒಂದೇ ದಿನ ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಬರೋಬ್ಬರಿ 139 ಮಂದಿಗೆ ಸೋಂಕು ಪತ್ತೆಯಾಗಿತ್ತು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಟಿವ್ ಕೇಸ್​ಗಳ ಸಂಖ್ಯೆ ಕೂಡ ಸಾವಿರ ದಾಟಿದೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 12 ಸಾವಿರದ ಗಡಿಯತ್ತ ದಾವಿಸುತ್ತಿದೆ.
Published by: Vijayasarthy SN
First published: July 11, 2020, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading