HOME » NEWS » Coronavirus-latest-news » EXPENSIVE TREATMENT FOR DEADLY BLACK FUNGUS A NEW CHALLENGE FOR INDIA KVD

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಅತ್ಯಂತ ದುಬಾರಿಯೇ? ಏನಂತಾರೆ ತಜ್ಞ ವೈದ್ಯರು?

ಆಪರೇಷನ್​ ಮೂಲಕ ಸತ್ತ ಮಾಂಸಖಂಡ, ಸೋಂಕಿಗೆ ಒಳಗಾದ ಮಾಂಸವನ್ನು ತೆಗೆಯಬೇಕಾಗುತ್ತದೆ. ಆಂಟಿ ಫಗಲ್​ ಥೆರಪಿಯನ್ನು ನೀಡಬೇಕಾಗುತ್ತದೆ. ಇವೆಲ್ಲಾ ಚಿಕಿತ್ಸೆ ಅತ್ಯಂತ ದುಬಾರಿ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯ.

Kavya V | news18-kannada
Updated:May 13, 2021, 3:39 PM IST
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಅತ್ಯಂತ ದುಬಾರಿಯೇ? ಏನಂತಾರೆ ತಜ್ಞ ವೈದ್ಯರು?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಕೋವಿಡ್​-19ನಿಂದ ಈಗಾಗಲೇ ದೇಶ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಸೋಂಕು, ಸಾವಿನಿಂದ ಎಲ್ಲೆಲ್ಲೂ ವಿಷಮಸ್ಥಿತಿ ನಿರ್ಮಾಣವಾಗಿದೆ. ಹೆಮ್ಮಾರಿ ಸೋಂಕಿನ ವಿರುದ್ಧ ಹೋರಾಡಲು ಹೆಣಗಾಡುತ್ತಿರುವಾಗಲೇ ಬ್ಲ್ಯಾಕ್​ ಫಂಗಸ್​ ಎಂಬ ಭಯಾನಕ ಕಾಯಿಲೆ ಬೆನ್ನೇರಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಈ ಬ್ಲ್ಯಾಕ್​ ಫಂಗಸ್​​ ಕಾಣಿಸಿಕೊಳ್ಳುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ, ಮಧುಮೇಹಿಗಳಲ್ಲಿ ಹೆಚ್ಚಾಗಿ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಕೊರೋನಾ ವಿರುದ್ಧ ಲಸಿಕೆ ಇದೆ. ಆದರೆ ಈ ಬ್ಲ್ಯಾಕ್​ ಫಂಗಸ್​​ಗೆ ಚಿಕಿತ್ಸೆ ಏನು? ಎಷ್ಟು ದಿನಗಳ ಚಿಕಿತ್ಸೆಯಿಂದ ಗುಣಮುಖರಾಗಬಹುದು? ಚಿಕಿತ್ಸಾ ವೆಚ್ಚ ದುಬಾರಿಯೇ? ಎಂಬ ಆತಂಕಕಾರಿ ಪ್ರಶ್ನೆಗಳು ಕಾಡುತ್ತಿವೆ.

ಮ್ಯೂಕೋರ್ ಮಯೋಸಿಸ್ (MUCORMYCOSIS) ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಈ ಕಪ್ಪು ಶಿಲೀಂದ್ರಿ ಅತ್ಯಂತ ಅಪಾಯಕಾರಿ ಎನ್ನಲಾಗುತ್ತೆ. ಅಪರೂಪದ ಈ ಕಾಯಿಲೆ ಕಣ್ಣು, ಮೆದುಳು ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಈ ಬ್ಲ್ಯಾಕ್ ಫಂಗಸ್ 8 ಜನರಲ್ಲಿ ಕಾಣಿಸಿಕೊಂಡಿತ್ತು, ಇದರಲ್ಲಿ 6 ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ ಇಬ್ಬರು ಶಾಶ್ವತ ಅಂಧತ್ವಕ್ಕೆ ತುತ್ತಾಗಿದ್ದಾರೆ.

ಬ್ಲ್ಯಾಕ್​ ಫಂಗಸ್​ ಗುಣಲಕ್ಷಣಗಳೇನು?

  • ಮೂಗಿನ‌ ಸುತ್ತಲೂ ಕಪ್ಪಾಗುವುದು

  • ಕೆನ್ನೆಯ ಮೂಳೆಯಲ್ಲಿ ನೋವು

  • ಮುಖದ ಒಂದು ಭಾಗದಲ್ಲಿ ನೋವು
  • ಮುಖದ ಮಾಂಸಖಂಡ ಮರಗಟ್ಟುವಿಕೆ

  • ಹಲ್ಲುಗಳು ಸಡಿಲವಾಗುವುದು

  • ಉಸಿರಾಟದಲ್ಲಿ ಏರಿಳಿತ ಹೆಚ್ಚಾಗುವುದು


ಬ್ಲ್ಯಾಕ್​ ಫಂಗಸ್​ ಯಾರಿಗೆ ಬರುತ್ತೆ?

  • ಸೋಂಕಿತರಾಗಿ ದೀರ್ಘಕಾಲ ಚಿಕಿತ್ಸೆ ಪಡೆದವರು

  • ಚಿಕಿತ್ಸೆ ವೇಳೆ ಹೆಚ್ಚಾಗಿ ಸ್ಟಿರಾಯ್ಡ್​ ಯುಕ್ತ ಔಷಧಿ ಸೇವಿಸಿದವರು

  • ದೀರ್ಘ ಕಾಲದವರೆಗೆ ವೆಂಟಿಲೇಟರ್​ನಲ್ಲಿದ್ದವರು

  • ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ




ಈ ಬ್ಲ್ಯಾಕ್​ ಫಂಗಸ್​ ಒಮ್ಮೆ ಕಾಣಿಸಿಕೊಂಡರೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಈ ಕಾಯಿಲೆಯಿಂದ ಗುಣಮುಖರಾದವರ ಸಂಖ್ಯೆ ಅತ್ಯಂತ ಕಡಿಮೆ ಎನ್ನಲಾಗುತ್ತದೆ. ಇನ್ನು ಬ್ಲ್ಯಾಕ್​ ಫಂಗಸ್​ ಚಿಕಿತ್ಸೆ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಆಪರೇಷನ್​ ಮೂಲಕ ಸತ್ತ ಮಾಂಸಖಂಡ, ಸೋಂಕಿಗೆ ಒಳಗಾದ ಮಾಂಸವನ್ನು ತೆಗೆಯಬೇಕಾಗುತ್ತದೆ. ಆಂಟಿ ಫಗಲ್​ ಥೆರಪಿಯನ್ನು ನೀಡಬೇಕಾಗುತ್ತದೆ. ಇವೆಲ್ಲಾ ಚಿಕಿತ್ಸೆ ಅತ್ಯಂತ ದುಬಾರಿ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯ. ಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ಭಾರತದಂತೆ ದೇಶದಲ್ಲಿ ಈ ರೀತಿ ಬ್ಲ್ಯಾಕ್​ ಫಂಗಸ್​ ತೆಗೆದು ಹಾಕುವ ಶಸ್ತ್ರಚಿಕಿತ್ಸೆ ಕೈಗೆಟುಕುವ ಚಿಕಿತ್ಸೆ ಅಲ್ಲ ಎನ್ನಲಾಗುತ್ತಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬ್ಲ್ಯಾಕ್​ ಫಂಗಸ್​​ ತೆಗೆಸಿಕೊಂಡು ಗುಣಮುಖರಾಗುವುದು ಆರ್ಥಿಕ ಹೊರೆಯಾಗಲಿದೆ. ಶಸ್ತ್ರಚಿಕಿತ್ಸೆ ಬಳಿಕ ರೋಗಿಗೆ ನೀಡುವ ಔಷಧಗಳೂ ದುಬಾರಿಯಾಗಿವೆಯಂತೆ. ಈಗಾಗಲೇ ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡಲು ಪರದಾಡುತ್ತಿರುವ ಸರ್ಕಾರಗಳು ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಯಾವುದೇ ರೀತಿ ತಯಾರಿಲ್ಲ ಅಂತಲೂ ಹೇಳಲಾಗುತ್ತಿದೆ. ರೋಗನಿರೋಧ ಶಕ್ತಿಯನ್ನು ಹೆಚ್ಚಿಸಿಕೊಂಡು, ಕೊರೋನಾ ಸೋಂಕಿಗೆ ಒಳಗಾಗದೇ ಇರುವುದೇ ಬಡ ಜನರಿಗೆ ಇರುವ ಅತ್ಯುತ್ತಮ ಆಯ್ಕೆ ಅನ್ನೋದು ಬಹುತೇಕರ ಅಭಿಪ್ರಾಯ.
Published by: Kavya V
First published: May 13, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories