ಉತ್ತರ ಅಮೆರಿಕಾ ದೇಶಗಳ ವಿಮಾನಯಾನ ಸಂಸ್ಥೆ ಟ್ರಾನ್ಸ್ಪೋರ್ಟ್ ಕೆನಡಾ, ಭಾರತದಿಂದ ನೇರ ವಿಮಾನಗಳ ಹಾರಾಟದ ನಿಷೇಧವನ್ನು ಸಪ್ಟೆಂಬರ್ 21 ರವರೆಗೆ ಮತ್ತಷ್ಟು ವಿಸ್ತರಿಸಿವೆ. ಭಾರತೀಯ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಸಡಿಲಗೊಳಿಸುವ ಸಂದರ್ಭದಲ್ಲಿಯೇ ನಿಷೇಧ ವಿಸ್ತರಣೆಯು ಜಾರಿಗೊಂಡಿದ್ದು ಇದರಿಂದ ಕೆನಡಾದಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೀಸಾಗಳಿಗೆ ಅರ್ಜಿ ಸಲ್ಲಿಸುವವರು ಸಂಕಷ್ಟಕ್ಕೆ ಒಳಗಾಗಬೇಕಾಗಿ ಬಂದಿದೆ.
ವಿಮಾನ ನಿಷೇಧವನ್ನು ಕೆನಡಾ ವಿಸ್ತರಿಸಿರುವುದೇಕೆ?
ಕೆನಡಾ ಸಾರಿಗೆ ಯಾನವು ಹೇಳಿಕೆಯಲ್ಲಿ ತಿಳಿಸಿರುವಂತೆ ಗಡಿ ಕ್ರಮಗಳನ್ನು ಸರಾಗಗೊಳಿಸುವ ದೇಶದ ವಿಧಾನದಿಂದ ಲಭ್ಯವಿರುವ ಡೇಟಾ ಮತ್ತು ವೈಜ್ಞಾನಿಕ ಪುರಾವೆಗಳ ನಿರಂತರ ಮೇಲ್ವಿಚಾರಣೆಯು ಕೆನಡಿಯನ್ನರ ವ್ಯಾಕ್ಸಿನೇಷನ್ ದರ ಮತ್ತು ಸುಧಾರಣೆಯ ಸಾಂಕ್ರಾಮಿಕ ರೋಗ ಪರಿಸ್ಥಿತಿಗಳನ್ನು ತಿಳಿಸುತ್ತದೆ. ಹಾಗಾಗಿ ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಲಹೆಯ ಆಧಾರದ ಮೇಲೆ, ಸಾರಿಗೆ ಇಲಾಖೆಯು ಭಾರತದಿಂದ ನೇರ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸಿದೆ.
ಕೆನಡಾಕ್ಕೆ ಪ್ರಯಾಣಿಸಲು ಭಾರತೀಯರಿಗೆ ಏನಾದರೂ ಆಯ್ಕೆ ಇದೆಯೇ?
ಕೆನಡಾವು ಭಾರತದಿಂದ ನೇರ ವಿಮಾನಗಳನ್ನು ನಿರ್ಬಂಧಿಸಿದ್ದರೂ ದೇಶವು ಭಾರತೀಯ ಪ್ರಯಾಣಿಕರಿಗೆ ಪರೋಕ್ಷ ದಾರಿಯ ಮೂಲಕ ಗಡಿ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ. ಆದರೆ ಮೂರನೇ ರಾಷ್ಟ್ರದ ಮೂಲಕ ಕೆನಡಾಕ್ಕೆ ಪ್ರವೇಶಿಸುವ ಯಾರಾದರೂ ಪ್ರಯಾಣವನ್ನು ಮುಂದುವರಿಸುವ ಮೊದಲು ಕೋವಿಡ್ 19 ಪರೀಕ್ಷೆಯನ್ನು ನಡೆಸಿರಬೇಕು ಎಂಬುದು ಷರತ್ತಾಗಿದೆ. ಹೆಚ್ಚುವರಿಯಾಗಿ, ಕೆನಡಾದ ಸಾರಿಗೆ ಇಲಾಖೆ ತಿಳಿಸಿರುವಂತೆ ದೇಶದ ಸರಕಾರವು ಸಾಂಕ್ರಾಮಿಕ ರೋಗಶಾಸ್ತ್ರದ ಅಂಕಿಅಂಶದ ಮೂಲಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಭಾರತ ಸರಕಾರ ಮತ್ತು ವಾಯುಯಾನ ಆಪರೇಟರ್ಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದು, ಷರತ್ತುಗಳಿಗೆ ಅನ್ವಯವಾಗುವಂತೆ ಕೂಡಲೇ ನೇರ ವಿಮಾನಗಳ ಸುರಕ್ಷಿತ ವಾಪಸಾತಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೆನಡಾವನ್ನು ಹೊರತುಪಡಿಸಿ, ಕೋವಿಡ್ ಎರಡನೇ ಅಲೆ ಏರಿಕೆಯ ಹಿನ್ನೆಲೆಯಲ್ಲಿ ಭಾರತೀಯ ಪ್ರಯಾಣಿಕರಿಗೆ ತಮ್ಮ ಗಡಿಗಳನ್ನು ಮುಚ್ಚಿದ ಅನೇಕ ದೇಶಗಳು ಈಗ ತಮ್ಮ ನಿಯಮಗಳನ್ನು ಭಾಗಶಃ ಸಡಿಲಿಸಿವೆ. ಇವುಗಳಲ್ಲಿ ಅಮೇರಿಕಾ, ಈಗ ವಿದ್ಯಾರ್ಥಿಗಳಿಗೆ ತನ್ನ ದೇಶಕ್ಕೆ ಪ್ರವೇಶವನ್ನು ಅನುವು ಮಾಡಿಕೊಡುತ್ತಿದೆ, ಅದೇ ರೀತಿ ಇಂಗ್ಲೆಂಡ್, ಭಾರತವನ್ನು ತನ್ನ 'ಕೆಂಪು' ಪಟ್ಟಿಯಿಂದ ವರ್ಗಾಯಿಸಿದೆ (ಲಸಿಕೆ ಪಡೆದ ಭಾರತೀಯರಿಗೆ ಕ್ವಾರಂಟೈನ್ ಕಡ್ಡಾಯವಲ್ಲ) ಅದೇ ರೀತಿ ದುಬೈ ನಿವಾಸಿ ವೀಸಾ ಹೊಂದಿರುವವರಿಗೆ ಮತ್ತು ಭಾರತದಿಂದ ಪ್ರಯಾಣಿಕರಿಗೆ ಅವಕಾಶ ನೀಡುತ್ತಿದೆ. ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್ ಮತ್ತು ಸ್ಪೇನ್ ಕೂಡ ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ತೆರೆದಿದೆ.
ಆದರೆ ಕೆನಡಾ ದೇಶವು ವಿದ್ಯಾರ್ಥಿಗಳಿಗೆ ಗಡಿಯೊಳಗೆ ಪ್ರವೇಶವನ್ನು ನೀಡಿದ್ದು ಉತ್ತಮ ವಿಚಾರವಾಗಿದ್ದು ಇದರಿಂದ ಕೆನಡಾದಲ್ಲಿ ಶಿಕ್ಷಣ ಪಡೆಯಬೇಕೆಂದಿರುವ ವಿದ್ಯಾರ್ಥಿಗಳಿಗೆ ನೆರವು ದೊರೆಯಲಿದೆ. ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿರುವ ಮೊದಲ ದೇಶ ಕೆನಡಾ ಮಾತ್ರವಲ್ಲ. ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಹಾಗೂ ವಿಶೇಷವಾಗಿ ಈ ಮೊದಲು ಕೊರೋನಾ ಸೋಂಕಿಗೆ ತುತ್ತಾದವರಿಗೆ ಪ್ರವೇಶ ಹಾಗೂ ಸಾರಿಗೆಯನ್ನು ನಿರ್ಬಂಧಿಸುವ ಹಲವು ದೇಶಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ