ಲಾಕ್​​ಡೌನ್ ಇದ್ದರೂ ಮದ್ಯ ಮಾರಾಟ; ಬಿಜೆಪಿ ಮುಖಂಡನ ಬೆಂಬಲಿಗನಿಗೆ ಸೇರಿದ ಬಾರ್ ಮೇಲೆ ದಾಳಿ

ದಾಳಿ ಮಾಡಿದಾಗ ಬಾರ್​ನಲ್ಲಿ ಯಾವುದೇ ದಾಸ್ತಾನು ಸಂಗ್ರಹ ಮತ್ತು ವಿತರಣೆಯ ಬಗ್ಗೆ ದಾಸ್ತಾನು ಪುಸ್ತಕದಲ್ಲಿ ಎಂಟ್ರಿ ಮಾಡಿಲ್ಲರುವುದು ಪತ್ತೆಯಾಗಿದೆ.

news18-kannada
Updated:April 4, 2020, 12:11 PM IST
ಲಾಕ್​​ಡೌನ್ ಇದ್ದರೂ ಮದ್ಯ ಮಾರಾಟ; ಬಿಜೆಪಿ ಮುಖಂಡನ ಬೆಂಬಲಿಗನಿಗೆ ಸೇರಿದ ಬಾರ್ ಮೇಲೆ ದಾಳಿ
ಹಾಸನದಲ್ಲಿ ಬಾರ್ ಮೇಲೆ ಅಧಿಕಾರಿಗಳ ರೇಡ್
  • Share this:
ಹಾಸನ: ಲಾಕ್ ಡೌನ್ ಆದೇಶ ಉಲ್ಲಂಘಿಸಿ‌ ಮದ್ಯ ಮಾರಾಟ ಮಾಡುತ್ತಿದ್ದ ಹಾಸನದ ಕ್ವಾಲಿಟಿ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ‌‌ ನಡೆಸಿದರು. ಬಿ.ಎಂ. ರಸ್ತೆಯಲ್ಲಿರುವ ಈ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಜಿಲ್ಲಾಧಿಕಾರಿ ಗಿರೀಶ್ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ ನವೀನ್ ಭಟ್ ನೇತೃತ್ವದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ‌ ನಡೆಸಿ‌ ದಾಸ್ತಾನು ಸಂಗ್ರಹ ಬಗ್ಗೆ ದಾಖಲೆ ಪರಿಶೀಲನೆ ನಡೆಸಿದರು.

ಬಾರ್ ಮಾಲೀಕ ಶರತ್​ನನ್ನು ಅಧಿಕಾರಿಗಳು ವಿಚಾರಣೆ ನಡೆಸಿ  ಕೂಲಂಕಷವಾಗಿ ತನಿಖೆ ನಡೆಸಿದರು. ಇಡೀ ದೇಶವೇ ಲಾಕ್ ಡೌನ್ ಆಗಿದ್ರೂ ಕೂಡ ಬಾರ್ ತೆರೆದಿದ್ದಾರೆ. ದಾಳಿ ಮಾಡಿದಾಗ ಬಾರ್​ನಲ್ಲಿ ಯಾವುದೇ ದಾಸ್ತಾನು ಸಂಗ್ರಹ ಮತ್ತು ವಿತರಣೆಯ ಬಗ್ಗೆ ದಾಸ್ತಾನು ಪುಸ್ತಕದಲ್ಲಿ ಎಂಟ್ರಿ ಮಾಡಿಲ್ಲರುವುದು ಪತ್ತೆಯಾಗಿದೆ. ಈ ಬಾರ್​ನಲ್ಲಿ ಲಾಕ್ ಡೌನ್ ಅನ್ನೇ ಬಂಡವಾಳ ಮಾಡಿಕೊಂಡ ಮಾಲೀಕ ಮದ್ಯದ ಪ್ರತೀ ಬಾಟಲಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಲಾಕ್​ಡೌನ್ ನಡುವೆಯೂ ಮಂಡ್ಯದಲ್ಲಿ ಬೇಕರಿ, ಸೆಲೂನ್ ತೆರೆಯಲು ಅನುಮತಿ ಕೊಟ್ಟ ಜಿಲ್ಲಾಡಳಿತ

ಲಾಕ್ ಡೌನ್ ಸಂದರ್ಭದಲ್ಲಿ ಬಾರ್ ತೆರೆದಿರುವುದರಿಂದ ಕಾನೂನಿನ ಪ್ರಕಾರ ಈ ಬಾರ್​ನ ಲೈಸೆನ್ಸ್ ರದ್ದುಪಡಿಸಬೇಕು. ಆದರೆ, ಈವರೆಗೂ ದಾಳಿಯಾದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕೆಲ ಮೂಲಗಳ ಪ್ರಕಾರ ಈ ಬಾರ್​ನ ಮಾಲೀಕರು ಬಿಜೆಪಿ ರಾಜಕಾರಣಿಯೊಬ್ಬರ ಬೆಂಬಲಿಗನೆಂಬ ಮಾಹಿತಿ ಇದೆ. ಈ ಕಾರಣಕ್ಕೆ ಅಧಿಕಾರಿಗಳು ಈತನ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈತ ರಾಜಕಾರಣಿಯ ಬೆಂಬಲಿಗನೋ, ಸಾಮಾನ್ಯ ವ್ಯಕ್ತಿಯೋ ಕಾನೂನು ಎಲ್ಲರಿಗೂ ಒಂದೆಯೇ. ಕೊರೋನಾ ವೈರಸ್ ಕೂಡ ಈತ ಎಷ್ಟು ಪ್ರಭಾವಶಾಲಿ ಎಂಬುದನ್ನು ನೋಡುವುದಿಲ್ಲ. ಕೊರೊನಾ ಸೋಂಕು ನಿಗ್ರಹಿಸಲು ಪ್ರಧಾನ ಮಂತ್ರಿಯವರೇ ಇಡೀ ದೇಶಕ್ಕೆ ಲಾಕ್ ಡೌನ್ ಘೋಷಿಸಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿಯವರ ಕೈ ಬಲಪಡಿಸುವ ಬದಲು ಈ ರೀತಿ ದುರಾಸೆತನ ತೋರುತ್ತಿರುವ ಇಂಥ ಬಾರ್ ಮಾಲೀಕರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ವರದಿ: ಡಿಎಂಜಿ ಹಳ್ಳಿ ಅಶೋಕ್

First published: April 4, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading