Karnataka CoronaVirus: ಕರ್ನಾಟಕದಲ್ಲಿ ಮಿತಿಮೀರಿದ ಕೊರೋನಾ ಸೋಂಕು ಮತ್ತು ಸಾವಿನ ಪ್ರಕರಣ!

ಬುಧವಾರ ಕರ್ನಾಟಕದಲ್ಲಿ 34,281 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಅಲ್ಲದೆ, ಒಂದೇ ದಿನ ಬರೋಬ್ಬರಿ 468 ಜನ ಕೊರೋನಾಗೆ ಬಲಿಯಾಗಿದ್ದಾರೆ. ಈ ಪೈಕಿ  ಬೆಂಗಳೂರಿನಲ್ಲಿ ಇಂದು 11,772 ಕೇಸ್ ಪತ್ತೆಯಾಗಿದ್ದರೆ, ಬರೋಬ್ಬರಿ 218 ಮಂದಿ ಸಾವನ್ನಪ್ಪಿದ್ದಾರೆ.

ಮೃತ ಸೋಂಕಿತರ ಅಂತ್ಯಕ್ರಿಯೆ.

ಮೃತ ಸೋಂಕಿತರ ಅಂತ್ಯಕ್ರಿಯೆ.

 • Share this:
  ಬೆಂಗಳೂರು (ಮೇ 19); ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಅಪಾಯದ ಮಟ್ಟ ಮೀರಿದೆ. ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್ 5 ಜಿಲ್ಲೆಗಳ ಪೈಕಿ ಕರ್ನಾಟಕದ 2 ಜಿಲ್ಲೆಗಳು ಗುರುತಿಸಿ ಕೊಂಡಿವೆ. ಬಳ್ಳಾರಿ ಮತ್ತು ಉತ್ತರ ಕನ್ನಡದಲ್ಲಿ ಅತಿಹೆಚ್ಚು ಕೊರೋನಾ ಪಾಸಿಟಿವಿಟಿ ರೇಟ್ ಇರುವುದು ಪತ್ತೆಯಾಗಿದೆ. ಇದರ ನಡುವೆ ಕೊರೋನಾ ಸೋಂಕು ಹೆಚ್ಚಳದಿಂದ ಒತ್ತಡಕ್ಕೆ ಒಳಗಾಗಿ ಕಡಿಮೆ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೈನಂದಿನ ಟೆಸ್ಟ್​ ಪ್ರಮಾಣ 1 ಲಕ್ಷಕ್ಕೂ ಕಡಿಮೆಯಾಗಿದೆ.

  ಬುಧವಾರ ಕರ್ನಾಟಕದಲ್ಲಿ 34,281 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಅಲ್ಲದೆ, ಒಂದೇ ದಿನ ಬರೋಬ್ಬರಿ 468 ಜನ ಕೊರೋನಾಗೆ ಬಲಿಯಾಗಿದ್ದಾರೆ. ಈ ಪೈಕಿ  ಬೆಂಗಳೂರಿನಲ್ಲಿ ಇಂದು 11,772 ಕೇಸ್ ಪತ್ತೆಯಾಗಿದ್ದರೆ, ಬರೋಬ್ಬರಿ 218 ಮಂದಿ ಸಾವನ್ನಪ್ಪಿದ್ದಾರೆ.

  ಕರ್ನಾಟಕದ ಕೊರೋನಾ ಪಾಸಿಟಿವಿಟಿ ರೇಟ್ 39.70ಗೆ ಏರಿಕೆಯಾಗಿದೆ. ಕರ್ನಾಟಕ ಸರ್ಕಾರ ಮಾಡುತ್ತಿರುವ ಎಡವಟ್ಟು ಅನಾಹುತದಿಂದ ಟೆಸ್ಟ್ ಸಂಖ್ಯೆ ಇಳಿಮುಖವಾದರೆ ಸಾವು, ಸೋಂಕು ಎರಡೂ ಉಲ್ಬಣಿಸುತ್ತಿದೆ.

  ಸೋಂಕು ಪತ್ತೆ ವಿಳಂಬದಿಂದ ಇನ್ನಷ್ಟು ಮಂದಿಗೆ ಸೋಂಕು ಅಂಟುತ್ತದೆ. ಬೇಗ ಕೊರೋನಾ ಸೋಂಕು ಪತ್ತೆಯಾಗದಿದ್ದರೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತದೆ. ಸೋಂಕು ಉಲ್ಬಣಿಸಿದಾಗ ಸೋಂಕು ಪತ್ತೆಯಾದರೆ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರಲಿದೆ.

  ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಹೆಚ್ಚಾಗಿದೆ. ಈ 2 ಜಿಲ್ಲೆಗಳಲ್ಲಿ ಟೆಸ್ಟ್ ಮಾಡಿಸಿದ 100 ಜನರ ಪೈಕಿ 47 ಜನರಿಗೆ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತರಿಯಾಗುತ್ತಿದೆ. ಹೀಗಾಗಿ, ಮೊದಲ ಅಲೆಯಿಂದಲೂ ಟೆಸ್ಟ್ ಹೆಚ್ಚಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಆದರೆ, ಸರ್ಕಾರ ಎರಡನೇ ಅಲೆ ವೇಳೆ ಟೆಸ್ಟ್ ಸಂಖ್ಯೆ ಇಳಿಕೆ ಮಾಡಿದೆ. ಟೆಸ್ಟ್ ರಿಪೋರ್ಟ್ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಟೆಸ್ಟ್ ಸಂಖ್ಯೆ ಇಳಿಕೆಯಾಗಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ. ಇದರಿಂದ ಲಕ್ಷಕ್ಕೂ ಕಡಿಮೆ ಪ್ರಮಾಣದಲ್ಲಿ ದೈನಂದಿನ ಟೆಸ್ಟ್ ಮಾಡಲಾಗುತ್ತಿದೆ.  ಭಾರತದಲ್ಲಿ ಕೊರೋನಾ ಆರ್ಭಟ:

  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕಿಂತಲೂ ಕಡಿಮೆ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಆದರೆ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲಿ ಮಾತ್ರ ಇಳಿಮುಖ ಆಗಿಲ್ಲ.

  ಇದನ್ನೂ ಓದಿ :Black Fungus: ಮಾರಕ ಬ್ಲಾಕ್ ಫಂಗಸ್​ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ರಾಜಸ್ಥಾನ

  ಮಂಗಳವಾರ 2,67,334 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,54,96,330ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಮಂಗಳವಾರವಾರವೂ 4,529 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,83,248ಕ್ಕೆ ಏರಿಕೆ ಆಗಿದೆ. ಈವರೆಗೆ 2,19,86,363ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 32,26,719 ಆಕ್ಟಿವ್ ಕೇಸುಗಳಿವೆ.

  ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
  Published by:MAshok Kumar
  First published: