ಮಾಜಿ ಪ್ರಧಾನಿ ದೇವೇಗೌಡರಿಂದ ಸಿಎಂ ಗೆ ಮತ್ತೊಂದು ಸುದೀರ್ಘ ಪತ್ರ; ಕೊರೋನಾ ತಡೆಯಲು ಜೆಡಿಎಸ್ ಸಂಪೂರ್ಣ ಬೆಂಬಲ

ಕೆಎಂಎಫ್ ಲಾಭಾಂಶದಲ್ಲಿರುವ 150 ಕೋಟಿ ಹಣವನ್ನು 14 ಹಾಲು ಒಕ್ಕೂಟಕ್ಕೆ ನೀಡಿ ಬಲ ಪಡಿಸಿ. ರೈತ ಬೆಳೆದಿರುವ ತರಕಾರಿ ಮತ್ತು ಹಣ್ಣುಗಳನ್ನು ಸರ್ಕಾರವೇ ಖರೀದಿ ಮಾಡಬೇಕು. ಕೊರೋನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಬಿ.ಎಸ್. ಯಡಿಯೂರಪ್ಪ- ಹೆಚ್​.ಡಿ. ದೇವೇಗೌಡ.

ಬಿ.ಎಸ್. ಯಡಿಯೂರಪ್ಪ- ಹೆಚ್​.ಡಿ. ದೇವೇಗೌಡ.

  • Share this:
ಬೆಂಗಳೂರು (ಏಪ್ರಿಲ್ 06); ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮತ್ತೊಂದು ಸುದೀರ್ಘ ಪತ್ರ ಬರೆದಿರುವ ಮಾಜಿ ಪ್ರಧಾನಿ ದೇವೇಗೌಡ "ಕೊರೋನಾ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ನಾನು , ಮತ್ತು ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ" ಎಂದು ಘೋಷಿಸಿದ್ದಾರೆ.

ಈ ಹಿಂದೆ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರೆಯನ್ನು ರೋಗಿಗಳಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ದೇವೇಗೌಡ ಪತ್ರ ಬರೆದಿದ್ದರು. ಅದರ ಬೆನ್ನಿಗೆ ಇಂದು ಸಹ ಪತ್ರ ಬರೆದಿರುವ ದೇವೇಗೌಡ, "ನಿಜಾಮುದ್ದೀನ್ ಸಭೆಗೆ ಹೋಗಿದ್ದವರನ್ನ ಗುರುತಿಸಿ , ಕ್ವಾಂರಟೈನ್ ಮಾಡುತ್ತಿರುವದಕ್ಕೆ ಅಭಿನಂದನೆಗಳು. ಆದರೆ, ಅಲ್ಪಸಂಖ್ಯಾತ ಸಮುದಾಯವನ್ನ ಗುರುಯಾಗಿಸಿಕೊಂಡು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ.

ಇಂತಹ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ ಮಾಡುತ್ತೇನೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತ ಮೇಲಿನ ಹಲ್ಲೆ ಧೃತಿಗೆಡಿಸಿದೆ. ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಸರ್ಕಾರ ಮುಂದಾಗಬೇಕು. ಕಟ್ಟಡ ಕೂಲಿ ಕಾರ್ಮಿಕರ ರಕ್ಷಣೆ ಗೆ ನೀಡುತ್ತಿರುವ ಹಣಕಾಸು ಸಹಾಯವನ್ನು ಎರಡು ಸಾವಿರದಿಂದ ಐದು ಸಾವಿರ ಹೆಚ್ಚಿಸಿ" ಎಂದು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ರೈತರ ಪರವಾಗಿಯೂ ಮಾತನಾಡಿರುವ ಅವರು, "ಹೈನುಗಾರಿಕೆಯನ್ನು ನಂಬಿರುವ ರೈತರನ್ನು ಬಲ ಪಡಿಸಲು ಒತ್ತಾಯಿಸಿದ್ದಾರೆ. ಅಲ್ಲದೆ, ಕೆಎಂಎಫ್ ಲಾಭಾಂಶದಲ್ಲಿರುವ 150 ಕೋಟಿ ಹಣವನ್ನು 14 ಹಾಲು ಒಕ್ಕೂಟಕ್ಕೆ ನೀಡಿ ಬಲ ಪಡಿಸಿ. ರೈತ ಬೆಳೆದಿರುವ ತರಕಾರಿ ಮತ್ತು ಹಣ್ಣುಗಳನ್ನು ಸರ್ಕಾರವೇ ಖರೀದಿ ಮಾಡಬೇಕು. ಕೊರೋನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು" ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ : ಕೊರೋನಾ ದೇಣಿಗೆ; ಸಿಎಂ ಪರಿಹಾರ ನಿಧಿಗೆ 2 ಕೋಟಿ-ಪಿಎಂ ನಿಧಿಗೆ 1 ಕೋಟಿ ಹಣಕೊಟ್ಟ ಬಲಿಜ ಸಮಾಜ
First published: