• Home
 • »
 • News
 • »
 • coronavirus-latest-news
 • »
 • ಕೊರೋನಾ ಸಂತ್ರಸ್ತರಿಗೆ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣರಿಂದ 25 ಸಾವಿರ ಚೆಕ್; ಪ್ರತೀ ತಿಂಗಳೂ ಸಹಾಯದ ಆಶ್ವಾಸನೆ

ಕೊರೋನಾ ಸಂತ್ರಸ್ತರಿಗೆ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣರಿಂದ 25 ಸಾವಿರ ಚೆಕ್; ಪ್ರತೀ ತಿಂಗಳೂ ಸಹಾಯದ ಆಶ್ವಾಸನೆ

ಚೆಕ್ ನೀಡುತ್ತಿರುವ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ

ಚೆಕ್ ನೀಡುತ್ತಿರುವ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ

ಮಾಗಡಿ ನಗರದ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪಿಎಸ್​ಐ ವೆಂಕಟೇಶ್ ಅವರಿಗೆ 25 ಸಾವಿರ ರೂ ಚೆಕ್ ಹಸ್ತಾಂತರ ಮಾಡಿದರು.

 • News18
 • Last Updated :
 • Share this:

  ರಾಮನಗರ: ಕೊರೋನಾ ಭೀತಿಯಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದಾಗಿ ಬೀದಿಬದಿಯಲ್ಲಿದ್ದ ಅದೆಷ್ಟೋ ಭಿಕ್ಷುಕರ ಪಾಡು ಆ ದೇವರಿಗೆ ಪ್ರೀತಿ. ಊಟದ ಸಮಸ್ಯೆಯಿಂದಾಗಿ ಅದೆಷ್ಟೋ ಜನರು ದಿನನಿತ್ಯ ಬಳಲುತ್ತಿದ್ದಾರೆ. ಅದಕ್ಕಾಗಿ ರಾಮನಗರ ಜಿಲ್ಲೆ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಇಂದು ಅಂತಹವರ ಅನುಕೂಲಕ್ಕಾಗಿ 25 ಸಾವಿರ ರೂಪಾಯಿಯ ಚೆಕ್ ವಿತರಣೆ ಮಾಡಿದ್ದಾರೆ.

  ಮಾಗಡಿ ನಗರದ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪಿಎಸ್​ಐ ವೆಂಕಟೇಶ್ ಅವರಿಗೆ 25 ಸಾವಿರ ರೂ ಚೆಕ್ ಹಸ್ತಾಂತರ ಮಾಡಿದರು. ಜೊತೆಗೆ ಸಮಸ್ಯೆ ಬಗೆಹರಿಯವವರೆಗೂ ಪ್ರತಿ ತಿಂಗಳು ಅಂತಹವರ ಅನುಕೂಲಕ್ಕಾಗಿ ತಾನು ಹಣ ನೀಡುತ್ತೇನೆಂದು ಭರವಸೆ ನೀಡಿದರು. ಜೊತೆಗೆ ರಾಜ್ಯ ಸರ್ಕಾರ ಕೂಡ ಅಂತಹವರ ಅನುಕೂಲಕ್ಕೆ ಯೋಜನೆ ರೂಪಿಸಬೇಕೆಂದೂ ಮನವಿ ಮಾಡಿದರು.

  ಇದನ್ನೂ ಓದಿ: ಹಾಸನದಲ್ಲೊಂದು ದುರಂತ ಘಟನೆ; ಹೋಂ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

  ಈ ಸಂದರ್ಭದಲ್ಲಿ ಬಾಲಕೃಷ್ಣ ಅವರ ಪತ್ನಿ ರಾಧಾ ಸೇರಿದಂತೆ ಬೆಂಬಲಿಗರು, ಅಭಿಮಾನಿಗಳು ಉಪಸ್ಥಿತರಿದ್ದರು.

  ವರದಿ: ಎ.ಟಿ. ವೆಂಕಟೇಶ್

  First published: