HOME » NEWS » Coronavirus-latest-news » EX MINISTER MB PATIL PROMISES TO HELP DESTITUTE GIRL WHOSE STORY NEWS18 KANNADA CARRIED SNVS

ನ್ಯೂಸ್18 ವರದಿ ಪ್ರಕಟವಾದ ಹತ್ತೇ ನಿಮಿಷದಲ್ಲಿ ಸ್ಪಂದಿಸಿದ ಎಂಬಿ ಪಾಟೀಲ; ಮಾತೃಹೃದಯಿ ಅನಾಥೆಯ ಸಹಾಯಕ್ಕೆ ವ್ಯವಸ್ಥೆ

ಈ ಯುವತಿಗೆ ಸೂರು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುತ್ತೇನೆ. ಅವರಿಗೆ ತ್ರಿಚಕ್ರ ಬೈಸಿಕಲ್​ನ ವ್ಯವಸ್ಥೆ ಮಾಡುತ್ತೇನೆ ಎಂದು ಎಂಬಿ ಪಾಟೀಲ ಹೇಳಿದ್ದಾರೆ.

news18-kannada
Updated:April 30, 2020, 6:28 PM IST
ನ್ಯೂಸ್18 ವರದಿ ಪ್ರಕಟವಾದ ಹತ್ತೇ ನಿಮಿಷದಲ್ಲಿ ಸ್ಪಂದಿಸಿದ ಎಂಬಿ ಪಾಟೀಲ; ಮಾತೃಹೃದಯಿ ಅನಾಥೆಯ ಸಹಾಯಕ್ಕೆ ವ್ಯವಸ್ಥೆ
ಎಂ.ಬಿ. ಪಾಟೀಲ್.
  • Share this:
ವಿಜಯಪುರ(ಏ. 30): ಸ್ವತಃ ಅನಾಥ, ಅಂಗವಿಕಲೆ, ನಿರ್ಗತಿಕಳಾಗಿದ್ದರೂ ಯುವತಿಯೊಬ್ಬಳು ವಿಜಯಪುರ ಜಿಲ್ಲೆಯ ಸಾರವಾಡದಲ್ಲಿ ಮಾಡುತ್ತಿರುವ ಹೃದಯಸ್ಪರ್ಷಿ ಕಾರ್ಯದ ಕುರಿತು ನ್ಯೂಸ್ 18 ಕನ್ನಡ ವರದಿ ಪ್ರಕಟಿಸಿತ್ತು. ಈ ವರದಿಯನ್ನು ನೋಡಿದ ಸ್ಥಳೀಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಎಂ.ಬಿ. ಪಾಟೀಲ ಯುವತಿಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಆಕೆಗೆ ವಿವಿಧ ರೀತಿಯಲ್ಲಿ ನೆರವು ಒದಗಿಸುವುದಾಗಿ ಅವರು ಭರವಸೆ ನೀಡಿದ್ಧಾರೆ.

ಸಾರವಾಡ ಗ್ರಾಮದ ಮಹಾದೇವಿ ತಳವಾರ ಎಂಬ ಯುವತಿ ತನಗೆ ಬರುವ ಅಂಗವಿಲಕರ ವೇತನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಬೀದಿ ನಾಯಿಗಳಿಗೆ ಹಾಲು ಖರೀದಿಸಿ ನೀಡುತ್ತಿದ್ದಾಳೆ. ತನಗೆ ಇರಲು ಸ್ವಂತ ಸೂರಿಲ್ಲದಿದ್ದರೂ, ನಡೆಯಲೂ ಆಗದಿದ್ದರೂ ಬೀದಿ ನಾಯಿಗಳೆಡೆಗಿನ ಇವಳ ಪ್ರೀತಿ ಮಾತ್ರ ಎಂಥವರಿಗೂ ಮಾದರಿಯಾಗಿದೆ. ಈಕೆಯ ಮಾತೃ ಹೃದಯ ಮಾತ್ರ ಎಂಥವರನ್ನೂ ಮಂತ್ರಮುಗ್ದರನ್ನಾಗಿಸುವಂತಿದೆ. ಈಕೆ ಪಡುತ್ತಿರುವ ಪಡಿಪಾಟಲಿನ ಮಧ್ಯೆಯೂ ಲಾಕ್​ಡೌನ್ ಸಮಯದಲ್ಲಿಯೂ ಬೀದಿ ನಾಯಿಗಳಿಗೆ ತನ್ನ ಕೈಲಾದಷ್ಟು ಹಾಲು ಹಾಕುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದಾಳೆ.

ಈ ಕುರಿತು ನ್ಯೂಸ್ 18 ಕನ್ನಡ ವರದಿ ಪ್ರಕಟಿಸುತ್ತಿದ್ದಂತೆ ಬರದ ನಾಡಿನ ಭಗೀರಥ ಎಂದೇ ಹೆಸರು ಮಾಡಿರುವ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಹಾಲಿ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ಅನಾಥೆ, ಅಂಗವಿಕಲೆಯಾದರೂ ವಿಜಯಪುರದ ಈ ಯುವತಿಯ ಮಾನವೀಯತೆಗೆ ಒಂದು ದೊಡ್ಡ ಸಲಾಂ

ಈ ಯುವತಿಗೆ ಸೂರು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುತ್ತೇನೆ. ಅವರಿಗೆ ತ್ರಿಚಕ್ರ ಬೈಸಿಕಲ್​ನ ವ್ಯವಸ್ಥೆ ಮಾಡುತ್ತೇನೆ. ಈ ಯುವತಿಯ ಅಂಗವಿಕಲರ ವೇತನದ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತೇನೆ. ಈ ಯುವತಿಗೊಂದು ನನ್ನ ಸಲಾಂ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಆಪ್ತ ಸಹಾಯಕ ಮತ್ತು ಸಾರವಾಡ ಗ್ರಾಮದವರೇ ಆದ ಸಂತೋಷ ಲೋಕೂರೆ ಅವರಿಂದ ಯುವತಿಯನ್ನು ಭೇಟಿ ಮಾಡಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ತಕ್ಷಣ ಸ್ಪಂದಿಸುವುದಾಗಿ ನ್ಯೂಸ್ 18 ಕನ್ನಡಕ್ಕೆ ಭರವಸೆ ನೀಡಿದ್ದಾರೆ.

ನ್ಯೂಸ್ 18 ಕನ್ನಡ ಈ ಕುರಿತು ವರದಿ ಪ್ರಕಟ ಮಾಡಿದ 10 ನಿಮಿಷದಲ್ಲಿ ಶಾಸಕ ಎಂ. ಬಿ. ಪಾಟೀಲ ಸ್ಪಂದಿಸುವ ಮೂಲಕ ತ್ವರಿತವಾಗಿ ಕ್ರಮ ಕೈಗೊಂಡಿದ್ದು ಶ್ಲಾಘನೀಯವಾಗಿದೆ.

ವರದಿ: ಮಹೇಶ ವಿ. ಶಟಗಾರ
Youtube Video
First published: April 30, 2020, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories