‘ನನ್ನ ಯಾರಾದ್ರೂ ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಕರೆದೊಯ್ಯಬಾರದಾ!’ – ಕಿವೀಸ್ ನಾಡಿಗೆ ಬಂತು ಡಿಮ್ಯಾಂಡ್

ಕೊರೋನಾ ವಿರುದ್ಧದ ಹೋರಾಟದಲ್ಲಿ ನ್ಯೂಜಿಲೆಂಡ್ ಜಯಿಸಿದ ಸುದ್ದಿ ಬರುತ್ತಲೇ ವಿಶ್ವದ ಅನೇಕ ರಾಷ್ಟ್ರಗಳ ಜನರು ಕಿವೀಸ್ ನಾಡಿನತ್ತ ಕಣ್ಣೆತ್ತಿ ನೋಡುತ್ತಿದ್ದಾರೆ.

news18
Updated:April 29, 2020, 6:04 PM IST
‘ನನ್ನ ಯಾರಾದ್ರೂ ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಕರೆದೊಯ್ಯಬಾರದಾ!’ – ಕಿವೀಸ್ ನಾಡಿಗೆ ಬಂತು ಡಿಮ್ಯಾಂಡ್
ನ್ಯೂಜಿಲ್ಯಾಂಡ್​ ಪ್ರಧಾನ ಮಂತ್ರಿ ಜಸಿಂದಾ ಆರ್ಡೆನ್​
  • News18
  • Last Updated: April 29, 2020, 6:04 PM IST
  • Share this:
“ನ್ಯೂಜಿಲೆಂಡ್ ಅತ್ಯುತ್ತಮ ದೇಶ”…; “ಓ ಪ್ರಿಯ ಏಲಿಯನ್​ಗಳೇ, ನನ್ನನ್ನು ಕಿಡ್ನಾಪ್ ಮಾಡಿ ನ್ಯೂಜಿಲೆಂಡ್​ಗೆ ಒಗೆಯಿರಿ ಬೇಗ. ನಮ್ಮ ಕೆಟ್ಟ ವ್ಯವಸ್ಥೆ ಸಾಕಾಗಿಹೋಗಿದೆ”…..; “ನ್ಯೂಜಿಲೆಂಡ್​ಗೆ ಹೋಗಿ ಸೇರಿಕೊಳ್ಳೋಣ ಎನಿಸುತ್ತಿದೆ” - ಹೀಗೆ ಸೋಷಿಯಲ್ ಮೀಡಿಯಾದಲ್ಲಿ ನ್ಯೂಜಿಲೆಂಡ್ ಬಗ್ಗೆ ಪುಂಖಾನುಪುಂಖವಾಗಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ, ಇಡೀ ಜಗತ್ತೆಲ್ಲಾ ಕೊರೊನಾದಿಂದಾಗಿ ಲಾಕ್ ಡೌನ್ ಆಗಿದ್ದರೆ, ನ್ಯೂಜಿಲೆಂಡ್ ಸಹಜ ಸ್ಥಿತಿಗೆ ಮರಳುತ್ತಿದೆ.

ನ್ಯೂಜಿಲೆಂಡ್​ನಲ್ಲಿ ಅಪಾಯಕಾರಿ ಮಟ್ಟಕ್ಕೆ ಸೋಂಕು ಹರಡುವ ಭೀತಿ ಇತ್ತು. ಆದರೆ, 28 ದಿನಗಳ ಕಾಲ ಕಠಿಣ ನಿರ್ಬಂಧಗಳೊಂದಿಗೆ ಲಾಕ್ ಡೌನ್ ಮಾಡಲಾಯಿತು. ಬಹಳ ಕಟ್ಟುನಿಟ್ಟಾಗಿ ಲಾಕ್ ಡೌನ್ ಅನುಷ್ಠಾನವಾಯಿತು. ಈಗ ದಿನಕ್ಕೆ ಒಂದಂಕಿ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಬರುತ್ತಿವೆ. ಆದ್ದರಿಂದ ನಾಲ್ಕನೇ ಹಂತದ ಲಾಕ್ ಡೌನ್ ನಿಯಮಗಳನ್ನು 3ನೇ ಹಂತಕ್ಕೆ ಇಳಿಸಲಾಗಿದೆ. ಅಂಗಡಿ-ಮುಂಗಟ್ಟುಗಳು, ಕಾರ್ಖಾನೆ, ಕಚೇರಿಗಳ ಕಾರ್ಯನಿರ್ವಹಣೆ ಶುರುವಾಗಿದೆ.

“ನಾವು ಬಹಳಷ್ಟು ಮಟ್ಟಿಗೆ ಕಡಿವಾಣ ಹಾಕಿದ್ದೇವೆ. ಕೆಲ ಬೆರಳೆಣಿಕೆಯಷ್ಟು ಪ್ರಕರಣಗಳು ತಲೆದೋರಬಹುದು. ಹಾಗಂತ ನಾವು ವಿಫಲವಾದೆವು ಅಂತ ಅಲ್ಲ. ಅಂಥ ಪ್ರಕರಣಗಳನ್ನ ನಾವು ಬಹಳ ಆಕ್ರಮಣಕಾರಿ ರೀತಿಯಲ್ಲಿ ನಿರ್ವಹಿಸುವ ಸ್ಥಿತಿಯಲ್ಲಿದ್ದೇವೆ ಎಂದರ್ಥ. ಈ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸುತ್ತಾ ಕೊನೆಗೆ ಮೂಲೋತ್ಪಾಟನೆ ಮಾಡಬಲ್ಲೆವು” ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ಹೇಳಿಕೊಂಡಿದ್ಧಾರೆ.

ಇದನ್ನೂ ಓದಿ: ಭಾರತದ ರಾಷ್ಟ್ರಪತಿ, ಪಿಎಂಓ ಮತ್ತು ಮೋದಿಯನ್ನು ಅನ್ ಫಾಲೋ ಮಾಡಿದ ಶ್ವೇತಭವನ

ಕೊರೋನಾ ವಿರುದ್ಧದ ಹೋರಾಟದಲ್ಲಿ ನ್ಯೂಜಿಲೆಂಡ್ ಜಯಿಸಿದ ಸುದ್ದಿ ಬರುತ್ತಲೇ ವಿಶ್ವದ ಅನೇಕ ರಾಷ್ಟ್ರಗಳ ಜನರು ಕಿವೀಸ್ ನಾಡಿನತ್ತ ಕಣ್ಣೆತ್ತಿ ನೋಡುವಂತಾಯಿತು. ಅಮೆರಿಕನ್ನರಂತೂ ತಾವು ನ್ಯೂಜಿಲೆಂಡ್​ಗೆ ಯಾವಾಗ ಹೋಗಿ ನೆಲಸುತ್ತೇವೆಯೋ ಎಂದು ಹಲಬುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ವೇದ್ಯವಾಗುತ್ತಿದೆ. ಭಾರತದಿಂದಲೂ ನ್ಯೂಜಿಲೆಂಡ್ ಬಗ್ಗೆ ಗೂಗಲ್ ಸರ್ಚ್ ಮಾಡುತ್ತಿರುವವ ಸಂಖ್ಯೆ ದೊಡ್ಡದೇ ಇದೆಯಂತೆ.

ಸುಮಾರು 48 ಲಕ್ಷ ಜನಸಂಖ್ಯೆ ಇರುವ ಸುಂದರ ರಾಷ್ಟ್ರ ನ್ಯೂಜಿಲೆಂಡ್​ನಲ್ಲಿ ಇದೂವರೆಗೂ 19 ಮಂದಿ ಮೃತಪಟ್ಟಿದ್ಧಾರೆ. ಇಲ್ಲಿ ಒಟ್ಟು ಕೊರೊನಾ ಪ್ರಕರಣ ಸಂಖ್ಯೆ 1,474 ಇದೆ. ಇವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಈಗ ಅಲ್ಲಿ 243 ಆ್ಯಟಿವ್ ಕೇಸ್​ಗಳಷ್ಟೇ ಇರುವುದು. 28 ದಿನಗಳ ಲಾಕ್​ಡೌನ್​ನಿಂದಾಗಿ ಅಲ್ಲಿ ಈಗ ಬೆರಳೆಣಿಕೆಯಷ್ಟೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಲ್ಲಿ ಪ್ರತೀ 100 ಮಂದಿಗೆ 2-3 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆಯಂತೆ.

First published: April 29, 2020, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading