HOME » NEWS » Coronavirus-latest-news » EVERYONE IN THE STATE IS MANDATORY TO DOWNLOAD AROGYA SETHU APP SAYS MINISTER SUDHAKAR MAK

ರಾಜ್ಯದಲ್ಲಿ ಎಲ್ಲರೂ ಆರೋಗ್ಯ ಸೇತು ಆಪ್ ಡೌನ್ಲೋಡ್ ಕಡ್ಡಾಯ; ಸಚಿವ ಸುಧಾಕರ್ ಮಾಹಿತಿ

ಹೊರರಾಜ್ಯದಿಂದ ಬಂದವರಿಂದ ಸೊಂಕು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಪಾಸಿಟಿವ್ ಕೇಸ್ ಹೆಚ್ವಾಗಿದೆ. ಹೀಗಂಥ ಯಾರೂ ಆತಂಕ ಪಡಬೇಕಿಲ್ಲ. ಹೊರರಾಜ್ಯದಿಂದ ಬಂದವರನ್ನು ಕ್ಯಾರಂಟೈನ್ ಮಾಡಲಾಗುತ್ತಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

news18-kannada
Updated:May 21, 2020, 5:12 PM IST
ರಾಜ್ಯದಲ್ಲಿ ಎಲ್ಲರೂ ಆರೋಗ್ಯ ಸೇತು ಆಪ್ ಡೌನ್ಲೋಡ್ ಕಡ್ಡಾಯ; ಸಚಿವ ಸುಧಾಕರ್ ಮಾಹಿತಿ
ಸಚಿವ ಡಾ.ಕೆ ಸುಧಾಕರ್​​
  • Share this:
ಬೆಂಗಳೂರು (ಮೇ 21); ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಎಲ್ಲರೂ ಆರೋಗ್ಯ ಸೇತು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಆರೋಗ್ಯ ಸಚಿವ ಡಾ|ಕೆ. ಸುಧಾಕರ್ ತಿಳಿಸಿದ್ದಾರೆ.

ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವ ಕುರಿತು ಕೇಂದ್ರ ಸರ್ಕಾರ ಇತ್ತೀಚೆಗೆ ಆರೋಗ್ಯ ಸೇತು ಆಪ್ ಅನ್ನು ಪರಿಚಯಿಸಿತ್ತು. ಅಲ್ಲದೆ, ಎಲ್ಲರೂ ಇದನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.

ಈ ಕುರಿತು ಮಾಹಿತಿ ನೀಡಿರುವ ಸಚಿವ ಡಾ| ಸುಧಾಕರ್, “ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯ. ನಿಮ್ಮ ಗೌಪ್ಯತೆ ಬಹಿರಂಗವಾಗುತ್ತದೆ ಎಂಬ ಕುರಿತು ಸಂದೇಹ ಪಡುವ ಅಗತ್ಯ ಇಲ್ಲ. ಇಲ್ಲಿ ಎಲ್ಲರ ಗೌಪ್ಯತೆಯನ್ನು ಕಾಪಾಡಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕುರಿತು ಮಾತನಾಡಿರುವ ಅವರು, “ಹೊರರಾಜ್ಯದಿಂದ ಬಂದವರಿಂದ ಸೊಂಕು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಪಾಸಿಟಿವ್ ಕೇಸ್ ಹೆಚ್ವಾಗಿದೆ. ಹೀಗಂಥ ಯಾರೂ ಆತಂಕ ಪಡಬೇಕಿಲ್ಲ. ಹೊರರಾಜ್ಯದಿಂದ ಬಂದವರನ್ನು ಕ್ಯಾರಂಟೈನ್ ಮಾಡಲಾಗುತ್ತಿದೆ.

ಇಲ್ಲಿ ಇರುವವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿಲ್ಲ. ಇನ್ನೂ ಟೆಸ್ಟಿಂಗ್ ಪ್ರೋಟೋಕಾಲ್ ಬಗ್ಗೆಯೂ ಕೆಲ ಮಾರ್ಪಾಡು ಮಾಡಲಾಗುತ್ತೆ. ಮೇ 30 ರ ಒಳಗೆ ರಾಜ್ಯಾದ್ಯಂತ 60 ಲ್ಯಾಬ್ ಮಾಡಲಾಗುತ್ತದೆ. ಈಗಾಗಲೇ 53 ಲ್ಯಾಬ್ ಕೆಲಸ ಮಾಡುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹೆಣ್ಣು ಮಕ್ಕಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ, ರಾಜೀನಾಮೆಯ ಪ್ರಶ್ನೆಯೇ ಇಲ್ಲ; ಮಾಧುಸ್ವಾಮಿ ಸ್ಪಷ್ಟನೆ
First published: May 21, 2020, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories