HOME » NEWS » Coronavirus-latest-news » EVERY TALUK HOSPITAL 50 OXYGEN BED AND 6 VENTILATOR BED WAS INSTALLED SAYS K SUDHAKAR RHHSN

ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಜತೆಗೆ 6 ವೆಂಟಿಲೇಟರ್ ಬೆಡ್ ಅಳವಡಿಕೆ; ಸಚಿವ ಕೆ. ಸುಧಾಕರ್

ಇಂದು ರಾಜ್ಯದಲ್ಲಿ ಒಟ್ಟು 39510 ಕೇಸ್ ಬಂದಿದೆ. 116238 ಟೆಸ್ಟ್ ಆಗಿದೆ. ಶೇ. 33.99 ಪಾಸಿಟಿವಿಟಿ ರೇಟ್ ಇದೆ. ಟಾರ್ಗೆಟೆಡ್ ಟೆಸ್ಟಿಂಗ್ ಮಾಡ್ತಿದ್ದೇವೆ. ರೋಗದ ಲಕ್ಷಣ‌ ಇರೋರಿಗೆ ಮಾತ್ರ ಟೆಸ್ಟಿಂಗ್ ಮಾಡ್ತಿದ್ದೇವೆ. ಹೀಗಾಗಿ ಟೆಸ್ಟಿಂಗ್ ಪ್ರಮಾಣ ಕಮ್ಮಿ ಆಗ್ತಿದೆ.  ಬೆಂಗಳೂರಿನಲ್ಲಿ 15879 ಕೇಸ್ ಬಂದಿದೆ ಎಂದರು.

news18-kannada
Updated:May 11, 2021, 8:10 PM IST
ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಜತೆಗೆ 6 ವೆಂಟಿಲೇಟರ್ ಬೆಡ್ ಅಳವಡಿಕೆ; ಸಚಿವ ಕೆ. ಸುಧಾಕರ್
ಆರೋಗ್ಯ ಸಚಿವ ಕೆ ಸುಧಾಕರ್.
  • Share this:
ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳು ಮತ್ತು ಮೆಡಿಕಲ್ ಕಾಲೇಜು ಡಿನ್​ಗಳ ಜತೆ ಚರ್ಚೆ ಮಾಡಿದ್ದೇನೆ. ಕೊರೋನಾ ಚಿಕಿತ್ಸೆ ಕ್ರಮದ ಬಗ್ಗೆ ಚರ್ಚೆ ಮಾಡಿದ್ದೇನೆ.  ಹೋಂ ಐಸೋಲೇಷನ ನಲ್ಲಿ ಇರೋರಿಗೆ ಯಾವ ರೀತಿ ಚಿಕಿತ್ಸೆ ಕೊಡ್ತಿದ್ದಾರೆ. ದಾಖಲಾತಿ ಮತ್ತು ಡಿಸ್ಚಾರ್ಜ್ ಹೇಗೆ ಮಾಡ್ತಿದ್ದಾರೆ ಅನ್ನೋ ಬಗ್ಗೆ ಚರ್ಚೆ ಆಗಿದೆ. ಒಂದು ನಿಮಿಷಕ್ಕೆ ಎನ್ಐವಿ ಅಳವಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ವೀಡಿಯೋ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಮಧ್ಯಮ ಪ್ರಮಾಣದ ಲಕ್ಷಣ ಇರುವ ಕೋವಿಡ್ ಸೋಂಕಿತರಿಗೆ ನಿಮಿಷಕ್ಕೆ 20-60 ಲೀಟರ್ ಆಮ್ಲಜನಕ ಬೇಕಾಗುತ್ತದೆ. ಆಮ್ಲಜನಕದ ಸಮಸ್ಯೆ ಇರುವುದರಿಂದ ಬೇರೆ ಕ್ರಮ ವಹಿಸಬೇಕಿದೆ. ಇದಕ್ಕಾಗಿ ಎಚ್ ಎಫ್‍ಎನ್ ಒಗಿಂತ ಹೆಚ್ಚು ಪರಿಣಾಮಕಾರಿಯಾಗಿ ಎನ್‍ಐವಿ (ವೆಂಟಿಲೇಟರ್) ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಶೇ.80 ರಷ್ಟು ಆಕ್ಸಿಜನ್ ಬೇಡಿಕೆ ಕಡಿಮೆಯಾಗುತ್ತದೆ. ಎಚ್‍ಎಫ್‍ಎನ್ ಒ ಇರುವಲ್ಲಿ ಎನ್ ಐವಿ ವೆಂಟಿಲೇಟರ್ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಜೊತೆಗೆ ಆರು ವೆಂಟಿಲೇಟರ್ ಬೆಡ್ ಅಳವಡಿಸಿದ್ದೇವೆ. ಕೆಲ ಕಡೆ ವೈದ್ಯರು ಇಲ್ಲದೇ ಬಳಕೆ ಆಗ್ತಿಲ್ಲ. ಅಂತಹ ಕಡೆ ಕೂಡಲೇ ತಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ. ಒಂದು ವಾರದ ಒಳಗೆ ಸಿಸಿ ಕ್ಯಾಮರಾ ಅಳವಡಿಕೆ, ಕೋವಿಡ್ ವಾರ್ಡ್ ಮತ್ತು ಕೋವಿಡ್ ಐಸಿಯು ವಾರ್ಡ್​ ಅಳವಡಿಕೆಗೆ ಡೆಡ್ ಲೈನ್ ನೀಡಲಾಗಿದೆ. ಅಷ್ಟರೊಳಗೆ ಕೆಲಸ ಪೂರ್ಣಗೊಳಿಸಬೇಕು ಎಂದರು.

ಇದನ್ನು ಓದಿ: ಗದಗ ಜಿಲ್ಲೆಗೆ 50 ವೆಂಟಿಲೇಟರ್ ಹಂಚಿಕೆ, 5890 ಎಲ್‌ಪಿಎಂ ಆಕ್ಸಿಜನ್ ಉತ್ಪಾದನಾ ಘಟಕ ಶೀಘ್ರದಲ್ಲಿಯೇ ಆರಂಭ; ಸಚಿವ ಸಿ.ಸಿ.ಪಾಟೀಲ್

ಮರಣ ಪ್ರಮಾಣ ಕಡಿಮೆ ಮಾಡಲು ಚರ್ಚೆ ಆಗಿದೆ. ಪಾಸಿಟಿವ್ ಬಂದ ಕೂಡಲೇ ತಕ್ಷಣ ಚಿಕಿತ್ಸೆ ಶುರು ಮಾಡಬೇಕು. ಟೆಸ್ಟ್ ಮಾಡದೇ ರೋಗ ಲಕ್ಷಣ ಇದ್ದರೆ ಅವರನ್ನ ಸೋಂಕಿತ ಎಂದು ಪರಿಗಣಿಸಿ, ಸೂಕ್ತವಾದ ಚಿಕಿತ್ಸೆ ಕೊಡಲು ಸೂಚಿಸಿದ್ದೇನೆ. ಇದು ಇಂದಿನ ಮಹತ್ವದ ನಿರ್ಧಾರವಾಗಿದೆ ಪಾಸಿಟಿವಿಟಿ ರೇಟ್ ಶೇ. 33.9ರಷ್ಟಿದೆ. 13510 ಜನರಿಗೆ ಇಂದು ಪಾಸಿಟಿವ್ ಆಗಿದೆ. ಶೇಕಡಾ 5 ಕಡಿಮೆ ಮಾಡಬೇಕು ಅನ್ನೋದು ನಮ್ಮ ಗುರಿ. ನೂರು ಜನರಿಗೆ ಟೆಸ್ಟ್ ಮಾಡಿದರೆ ಐದು ಜನರು ಮಾತ್ರ ಪಾಸಿಟಿವ್ ಬರಬೇಕು ಇದು ನಮ್ಮ ಗುರಿ. ಹೋಂ ಐಸೋಲೇಷನ್ ಲ್ಲಿ ಇರೋರ ಮೇಲೆ ನಿಗಾ ವಹಿಸಿದ್ದೇವೆ. ಬೂತ್ ಲೆವಲ್ ಟೀಮ್ ಎಚ್ಚರಿಕೆಯಿಂದ ಇರಬೇಕು. ಶೇ. 18 ಸೋಂಕಿತರು ಹೋಂ ಐಸೋಲೇಷನಲ್ಲಿ ಇದ್ದಾರೆ.  ಪಾಸಿಟಿವ್ ಆದ ಐದು ಗಂಟೆ ಒಳಗೆ ಅವರಿಗೆ ಕಿಟ್ ಕೊಡಬೇಕು. ಸ್ಥಳೀಯ ಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
Youtube Video

ಇಂದು ರಾಜ್ಯದಲ್ಲಿ ಒಟ್ಟು 39510 ಕೇಸ್ ಬಂದಿದೆ. 116238 ಟೆಸ್ಟ್ ಆಗಿದೆ. ಶೇ. 33.99 ಪಾಸಿಟಿವಿಟಿ ರೇಟ್ ಇದೆ. ಟಾರ್ಗೆಟೆಡ್ ಟೆಸ್ಟಿಂಗ್ ಮಾಡ್ತಿದ್ದೇವೆ. ರೋಗದ ಲಕ್ಷಣ‌ ಇರೋರಿಗೆ ಮಾತ್ರ ಟೆಸ್ಟಿಂಗ್ ಮಾಡ್ತಿದ್ದೇವೆ. ಹೀಗಾಗಿ ಟೆಸ್ಟಿಂಗ್ ಪ್ರಮಾಣ ಕಮ್ಮಿ ಆಗ್ತಿದೆ.  ಬೆಂಗಳೂರಿನಲ್ಲಿ 15879 ಕೇಸ್ ಬಂದಿದೆ. ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜುಗಳ ಎಲ್ಲ ಬೆಡ್ ಗಳಿಗೂ ಆಕ್ಸಿಜನ್ ಪೂರೈಸಲು ಕ್ರಮ ತಗೋತಿದ್ದೇವೆ. ಇನ್ನೂ ಎರಡು ಮೂರು ತಿಂಗಳು ಕೇಸ್ ಪ್ರಮಾಣ ಕಮ್ಮಿ ಆಗಬಹುದು. ಆದರೆ ನಮ್ಮ ಸಿದ್ಧತೆ ಎರಡು ಮೂರು ಪಟ್ಟು ಹೆಚ್ಚಾಗುತ್ತೆ. ಮೂರನೇ ಅಲೆಗೆ ಪೂರಕವಾಗಿ ನಮ್ಮ ಸಿದ್ಧತೆ ನಡೆಯುತ್ತೆ. ಮಕ್ಕಳಿಗೆ ಮೂರನೇ ಅಲೆಯಿಂದ ತೊಂದರೆ ಅಂತ ತಜ್ಞ ರು ಹೇಳಿದ್ದಾರೆ. ಮಕ್ಕಳ ಸಂಬಂಧ ವಿಶೇಷ ಗಮನ, ಸಿದ್ಧತೆ ಇರುತ್ತೆ ಎಂದು ಸುಧಾಕರ್ ಹೇಳಿದರು.
Published by: HR Ramesh
First published: May 11, 2021, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories