HOME » NEWS » Coronavirus-latest-news » EVENING DIGEST KANNADA NEWS CORONA NEWS UPDATE TODAY BREAKING NEWS HK

Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

news18-kannada
Updated:April 29, 2020, 6:23 PM IST
Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್ ಪ್ರಧಾನಿ ಜಾನ್ಸನ್- ಸಂಗಾತಿ ಕ್ಯಾರಿ ಸೈಮಂಡ್ಸ್

ಕೊರೋನಾ ವೈರಸ್​​ನಿಂದ ಸಂಪೂರ್ಣ ಚೇತರಿಕೆ ಕಂಡ ಬಳಿಕ ಬ್ರಿಟನ್​​​ ಪ್ರಧಾನಿ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಸೈಮಂಡ್ಸ್​​​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಾನ್ಸನ್​​ ಪತ್ನಿ ಮತ್ತು ಗಂಡು ಮಗು ಇಬ್ಬರೂ ಆರೋಗ್ಯವಾಗಿದ್ಧಾರೆ ಎಂದು ಬ್ರಿಟನ್​​ ಪ್ರಧಾನಿ ಬೋರಿಸ್​​ ಜಾನ್ಸನ್​ ಎಂದು ತಿಳಿಸಿದೆ.

2.ಭಾರತದ ರಾಷ್ಟ್ರಪತಿ, ಪಿಎಂಓ ಮತ್ತು ಮೋದಿಯನ್ನು ಅನ್ ಫಾಲೋ ಮಾಡಿದ ಶ್ವೇತಭವನ

ಅಮೆರಿಕಾ ಬಗ್ಗೆ ಭಾರತ ಎಷ್ಟೇ ಪ್ರೀತಿ, ಗೌರವ, ಆದರಗಳನ್ನು ತೋರಿದರೂ ಅಮೆರಿಕಾ ತನ್ನ ಬುದ್ದಿಯನ್ನು ಮಾತ್ರ ಬಿಟ್ಟಿಲ್ಲ. ಮೂರು ವಾರಗಳ ಹಿಂದೆ ಭಾರತದ ರಾಷ್ಟ್ರಪತಿ ರಮಾನಾಥ್ ಕೊವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿದ್ದ ಅಮೆರಿಕಾದ ಶ್ವೇತಭವನ ಈಗ ದಿಢೀರನೇ ಈ ಮೂರೂ ಟ್ವೀಟರ್ ಖಾತೆಗಳನ್ನು ಅನ್ ಫಾಲೋ ಮಾಡಿದೆ.

3.ಕೇಂದ್ರ ಸರ್ಕಾರಿ ನೌಕರರು ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳುವುದು ಕಡ್ಡಾಯ

ಕೇಂದ್ರ ಸರ್ಕಾರದ ನೌಕರರು ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸರ್ಚ್ ರೂಪಿಸಿರುವ 'ಆರೋಗ್ಯ ಸೇತು' ಆ್ಯಪ್ ಅನ್ನು ತಮ್ಮ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಇಂದು ಕೇಂದ್ರ ಸರ್ಕಾರ ‌ಆದೇಶಿಸಿದೆ.

4.ಪ್ರಧಾನಿ ಘೋಷಣೆಗೆ ಮುನ್ನವೇ ಲಾಕ್​​ಡೌನ್​​ ವಿಸ್ತರಿಸಿದ ಪಂಜಾಬ್​​ ಸಿಎಂ: ಮೇ 3ರ ಬಳಿಕ 2 ವಾರ ನಿಷೇಧಾಜ್ಞೆಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಣೆ ಮಾಡುವ ಮುನ್ನವೇ ಮೇ 3ರ ನಂತರ ಮತ್ತೆ ಎರಡು ವಾರಗಳ ಕಾಲ ಲಾಕ್​​ಡೌನ್ ವಿಸ್ತರಣೆ ಮಾಡಿ ಪಂಜಾಬ್​​​ ಮುಖ್ಯಮಂತ್ರಿ ಅಮರೀಂದರ್​​ ಸಿಂಗ್​​​​ ಪ್ರಕಟಿಸಿದ್ಧಾರೆ. ಮೇ 3ರ ನಂತರ 2 ವಾರಗಳವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದಿರುವ ಅಮರೀಂದರ್​ ಸಿಂಗ್​​, ಕೆಲವು ನಿಷೇಧಾಜ್ಞೆ ನಿಯಮಗಳನ್ನು ಜಾರಿಗೊಳಿಸಿದ್ದಾರೆ.

5.ಕಳೆದ 12 ಗಂಟೆಯಲ್ಲಿ 9 ಹೊಸ ಪ್ರಕರಣ; ಕಲಬುರ್ಗಿಯಲ್ಲೇ ಹೆಚ್ಚು: ಒಟ್ಟು ಪ್ರಕರಣ ಸಂಖ್ಯೆ 532ಕ್ಕೆ ಏರಿಕೆ

ರಾಜ್ಯದಲ್ಲಿ ಮಂಗಳವಾರ ಸಂಜೆಯಿಂದ ಇಲ್ಲಿಯವರೆಗೆ 12 ಗಂಟೆ ಅವಧಿಯಲ್ಲಿ 9 ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 532ಕ್ಕೆ ಏರಿದೆ. ಈ 9 ಹೊಸ ಪ್ರಕರಣಗಳ ಪೈಕಿ ಕಲಬುರ್ಗಿಯಿಂದಲೇ 8 ವರದಿಯಾಗಿದೆ. ಮತ್ತೊಂದು ಪ್ರಕರಣ ಬೆಳಗಾವಿಯದ್ದು. ಇಲ್ಲಿಯವರೆಗೆ ರಾಜ್ಯದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ.

6.ಕೊರೋನಾ ನಿಯಂತ್ರಣ ಕರ್ತವ್ಯಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸ್​​​ ಸಿಬ್ಬಂದಿ ಬೇಡ - ಪ್ರವೀಣ್​​ ಸೂದ್​​ ಆದೇಶ

ಕೊರೋನಾ ವೈರಸ್​ ನಿಯಂತ್ರಣ ಕರ್ತವ್ಯಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸರು ಬೇಡ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ 55 ವರ್ಷ ದಾಟಿದ ಪೊಲೀಸ್ ಸಿಬ್ಬಂದಿಯನ್ನು ಕೊರೋನಾ ವೈರಸ್​ ಹರಡದಂತೆ ತಡೆಯುವ ಕರ್ತವ್ಯಗಳಿಗೆ ‌ನಿಯೋಜನೆ ಮಾಡಬೇಡಿ. ಈ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಹಿರಿಯ ಪೊಲೀಸ್​​ ಅಧಿಕಾರಿಗೆ ಪ್ರವೀಣ್​​ ಸೂದ್​ ಸೂಚಿಸಿದ್ದಾರೆ.

7.ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ವರುಣನ ಆರ್ಭಟ; ಗುಡುಗು ಸಹಿತ ಭಾರೀ ಮಳೆಗೆ ಹೊಳೆಯಂತಾದ ರಸ್ತೆಗಳು

ನಗರದಲ್ಲಿ ವಾರದ ಹಿಂದೆ ಮುಂಜಾನೆ ಕಾಣಿಸಿಕೊಂಡಿದ್ದ ವರುಣ ಮತ್ತೆ ಅಬ್ಬರಿಸಿದ್ದಾನೆ. ಮುಂಜಾನೆ ಐದು ಗಂಟೆಗೆ ಆರಂಭವಾದ ಮಳೆ ಬೆಳಗ್ಗೆ ಏಳುವರೆಯಾದರೂ ನಿಂತಿಲ್ಲ. ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ.

8.ಮೈಸೂರು ಮೃಗಾಲಯ ಕಷ್ಟದಲ್ಲಿದೆ, ಸಹಾಯ ಮಾಡಿ ಅಂತ ಮೊದಲ ಬಾರಿಗೆ ಮನವಿ‌ ಮಾಡಿದ ಆಡಳಿತ ಮಂಡಳಿ

ಈ ತಿಂಗಳಿನಲ್ಲಿ ಪ್ರಾಣಿಗಳಿಗೆ ಆಹಾರಕ್ಕೆ ಬೇಕಾಗಿರುವ ಬರೋಬ್ಬರಿ 2 ಕೋಟಿ ಹಣ ಹೊಂದಿಸೋಕು ಮೃಗಾಲಯ ಕಷ್ಟ ಪಡುತ್ತಿದ್ದು, ಸಿಬ್ಬಂದಿಗಳಿಗೆ ವೇತನ, ವಿದ್ಯುತ್, ನೀರು ಹಾಗೂ ಇತರೆ ವ್ಯವಸ್ಥೆಗೆ ಬೇಕಾಗಿರುವ ಹಣಕ್ಕೆ ಯಾವುದೇ ಆದಾಯ ಇಲ್ಲ. ಈ ಸಂಕಷ್ಟದ ನಡುವೆ ಮೃಗಾಲಯದ ನಿರ್ದೇಶಕರು ಬಹಿರಂಗವಾಗಿ ಮೃಗಾಲಯ ಕಷ್ಟದಲ್ಲಿದೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

9.ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್​ ಖ್ಯಾತ ನಟ ಇರ್ಫಾನ್​ ಖಾನ್​ ನಿಧನ

​'ನ್ಯೂರೋ ಎಂಡೋಕ್ರೈನ್ ಟ್ಯೂಮರ್' ಕಾಯಿಲೆಯಿಂದ ಬಳಲುತ್ತಿದ್ದ ನಟ ಇರ್ಫಾನ್​ ಖಾನ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಅವರು ತಾಯಿಯನ್ನು ಕಳೆದುಕೊಂಡಿದ್ದರು.

10.ಅಮೆರಿಕ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಕರ್ನಾಟಕದ ಮಾಜಿ ಆಟಗಾರ ಆಯ್ಕೆ!

ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಯಶಸ್ವಿ ಕೋಚ್ ಆಗಿದ್ದ ಜೆ. ಅರುಣ್ ಕುಮಾರ್ ಅವರು, ಯುಎಸ್​ಎ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ದೇಸಿ ಕ್ರಿಕೆಟ್‌ನ ಕೋಚಿಂಗ್ ವಿಭಾಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ ಅರುಣ್ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶವನ್ನು ಗಳಿಸಿದ್ದಾರೆ.
First published: April 29, 2020, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading