HOME » NEWS » Coronavirus-latest-news » EUROPES OLDEST PERSON A 116 YEAR OLD FRENCH NUN SURVIVES COVID 19 STG MAK

CoronaVirus: ಕೋವಿಡ್​ನಿಂದ ಬದುಕುಳಿದ 116 ವರ್ಷದ ಫ್ರೆಂಚ್ ಸನ್ಯಾಸಿನಿ: ಯುರೋಪಿನ ಅತಿ ಹಿರಿಯ ವ್ಯಕ್ತಿ

ದಕ್ಷಿಣ ಫ್ರೆಂಚ್ ನಗರವಾದ ಟೌಲನ್ನಲ್ಲಿ ಜನವರಿ ಮಧ್ಯದಲ್ಲಿ ಸನ್ಯಾಸಿನಿ ಕೊರೊನಾ ವೈರಸ್ ಪಾಸಿಟಿವ್ಗೊಳಗಾಗಿದ್ದರು ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿತ್ತು. ಆದರೆ ಕೇವಲ ಮೂರು ವಾರಗಳ ನಂತರ, ಹಿರಿಯ ಮಹಿಳೆ ಚೇತರಿಸಿಕೊಂಡಿದ್ದಾರೆ ಎಂದು ಪರಿಗಣಿಸಲಾಗಿದೆ.

news18-kannada
Updated:February 11, 2021, 3:51 PM IST
CoronaVirus: ಕೋವಿಡ್​ನಿಂದ ಬದುಕುಳಿದ 116 ವರ್ಷದ ಫ್ರೆಂಚ್ ಸನ್ಯಾಸಿನಿ: ಯುರೋಪಿನ ಅತಿ ಹಿರಿಯ ವ್ಯಕ್ತಿ
ಕೋವಿಡ್​ನಿಂದ ಬದುಕುಳಿದ 116 ವರ್ಷದ ಫ್ರೆಂಚ್ ಸನ್ಯಾಸಿನಿ
  • Share this:
ಕೊರೋನಾ ಮಹಾಮಾರಿ ಜಗತ್ತಿನಲ್ಲಿ ಮಿಲಿಯನ್ಗಟ್ಟಲೆ ಜನರನ್ನು ಬಲಿಪಡೆದಿದೆ. ಹಿರಿಯ ವಯಸ್ಸಿನವರಷ್ಟೇ ಅಲ್ಲ ಎಲ್ಲ ವಯಸ್ಸಿನವರನ್ನೂ ಯಮನ ಬಳಿ ಕಳಿಸಿದೆ. ಇನ್ನೊಂದೆಡೆ, ಈ ಮಹಾಮಾರಿಗೆ ಅನೇಕ ವಯಸ್ಸಾದವರೇ ರೋಗದಿಂದ ಗೆದ್ದು ಬಂದಿದ್ದಾರೆ. ಇದೇ ರೀತಿ, ಯುರೋಪಿನ ಅತ್ಯಂತ ಹಿರಿಯ ವ್ಯಕ್ತಿ ಎಂದು ಹೇಳಲಾದ ಸನ್ಯಾಸಿನಿ ಕೊರೊನಾದಿಂದ ಬಚಾವಾಗಿದ್ದಾರೆ. ಯುರೋಪಿನ ಅತ್ಯಂತ ಹಿರಿಯ ಮಹಿಳೆ ಎಂದು ನಂಬಲಾಗಿರುವ 116 ವರ್ಷದ ಫ್ರೆಂಚ್ ಸನ್ಯಾಸಿನಿಯೊಬ್ಬರು ಕೋವಿಡ್ - 19 ನಿಂದ ಪಾರಾಗಿದ್ದಾರೆ. ಮತ್ತು ಇಂದು, ಫೆಬ್ರವರಿ 11 ರಂದು ಆಕೆ 117 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

110 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದು ಭಾವಿಸಲಾದ ಜನರ ವಿವರಗಳನ್ನು ಮೌಲ್ಯೀಕರಿಸುವ ಜೆರೊಂಟಾಲಜಿ ರಿಸರ್ಚ್ ಗ್ರೂಪ್, ಫ್ರೆಂಚ್ ಮಹಿಳೆ ಲೂಸಿಲ್ ರಾಂಡನ್ - ಸಿಸ್ಟರ್ ಆ್ಯಂಡ್ರೆ ಅವರ ಜನ್ಮ ಹೆಸರು - ವಿಶ್ವದ ಎರಡನೇ ಅತ್ಯಂತ ಹಳೆಯ ಜೀವಂತ ವ್ಯಕ್ತಿ ಎಂದು ಪಟ್ಟಿಮಾಡಿದೆ.

ದಕ್ಷಿಣ ಫ್ರೆಂಚ್ ನಗರವಾದ ಟೌಲನ್ನಲ್ಲಿ ಜನವರಿ ಮಧ್ಯದಲ್ಲಿ ಸನ್ಯಾಸಿನಿ ಕೊರೊನಾ ವೈರಸ್ ಪಾಸಿಟಿವ್ಗೊಳಗಾಗಿದ್ದರು ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿತ್ತು. ಆದರೆ ಕೇವಲ ಮೂರು ವಾರಗಳ ನಂತರ, ಹಿರಿಯ ಮಹಿಳೆ ಚೇತರಿಸಿಕೊಂಡಿದ್ದಾರೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Sherlyn Chopra: 37ನೇ ವಸಂತಕ್ಕೆ ಕಾಲಿಟ್ಟ ಶೆರ್ಲಿನ್ ಚೋಪ್ರಾ: ಬೋಲ್ಡ್ ಫೋಟೋ ಮೂಲಕ ಹುಚ್ಚೆಬ್ಬಿಸಿದ ನಟಿ..!

ಈ ಸಂಬಂಧ ಫ್ರೆಂಚ್ ಪತ್ರಿಕೆ ವರ್ - ಮ್ಯಾಟಿನ್ ಜತೆ ಮಾತನಾಡಿದ 116 ವರ್ಷದ ಸನ್ಯಾಸಿನಿ, ''ನನಗೆ ಅದು (ಕೊರೊನಾ) ಬಂದಿತ್ತು ಎಂಬುದೇ ನನಗೆ ತಿಳಿದಿರಲಿಲ್ಲ'' ಎಂದು ಅವರು ಹೇಳಿದರು. ಅಂಧೆಯಾಗಿರುವ ಮತ್ತು ಗಾಲಿಕುರ್ಚಿ ಬಳಸುವ ಸನ್ಯಾಸಿನಿಗೆ ಸೋಮಕು ತಗುಲಿದ್ದರೂ ಆತಂಕಕ್ಕೊಳಗಾಗಿರಲಿಲ್ಲ. ಬದಲಾಗಿ, ಊಟ ಅಥವಾ ಮಲಗುವ ವೇಳಾಪಟ್ಟಿ ಬದಲಾಗುತ್ತದೆಯೇ ಎಂದು ತಿಳಿಯಲು ಆಕೆ ಬಯಸಿದ್ದರು'' ಎಂದು ಸನ್ಯಾಸಿನಿಯ ಸಂವಹನ ವ್ಯವಸ್ಥಾಪಕ ಡೇವಿಡ್ ಟವೆಲ್ಲಾ ಫ್ರೆಂಚ್ ಪತ್ರಿಕೆಗೆ ತಿಳಿಸಿದರು. ವೈರಸ್ ಬಗ್ಗೆ ಯಾವುದೇ ಭಯವನ್ನು ತೋರಿಸಲಿಲ್ಲ. ಮತ್ತೊಂದೆಡೆ, ಇತರ ನಿವಾಸಿಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು ಎಂದೂ ತಿಳಿದುಬಂದಿದೆ.
Youtube Video

ಸನ್ಯಾಸಿನಿ 1904 ರಲ್ಲಿ ಜನಿಸಿದ್ದು, ಆಕೆ ಊಟದ ಸಮಯದಲ್ಲಿ ಒಂದು ಗ್ಲಾಸ್ ವೈನ್ ಕುಡಿಯುತ್ತಾರೆಂದೂ ಟವೆಲ್ಲಾ ಹೇಳಿದರು. ಇನ್ನು, ಸಿಸ್ಟರ್ ಆ್ಯಂಡ್ರೆಯ ಮನೆಯ ಬಹುತೇಕ ನಿವಾಸಿಗಳಿಗೆ ಸೋಂಕು ತಗುಲಿತ್ತು. ಜನವರಿಯಲ್ಲಿ, 88 ನಿವಾಸಿಗಳಲ್ಲಿ 81 ಜನರು ವೈರಸ್ಗೆ ತುತ್ತಾಗಿದ್ದರು. ಈ ಪೈಕಿ ಸುಮಾರು 10 ಮಂದಿ ಮೃತಪಟ್ಟಿದ್ದಾರೆ ಎಂದೂ ವರ್ ಮ್ಯಾಟಿನ್ ಹೇಳಿದೆ.
Published by: MAshok Kumar
First published: February 11, 2021, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories