• Home
 • »
 • News
 • »
 • coronavirus-latest-news
 • »
 • ಕಳೆದ ವರ್ಷ ಸಹಾಯಕ್ಕೆ ಪ್ರಧಾನಿ ಮೋದಿಗೆ ಇಯು ನಾಯಕರ ಕೃತಜ್ಞತೆ; ಪ್ರಸ್ತುತ ಭಾರತಕ್ಕೆ ನೆರವಿನ ಪ್ರತಿಜ್ಞೆ

ಕಳೆದ ವರ್ಷ ಸಹಾಯಕ್ಕೆ ಪ್ರಧಾನಿ ಮೋದಿಗೆ ಇಯು ನಾಯಕರ ಕೃತಜ್ಞತೆ; ಪ್ರಸ್ತುತ ಭಾರತಕ್ಕೆ ನೆರವಿನ ಪ್ರತಿಜ್ಞೆ

ವಿಡಿಯೋ-ಕಾನ್ಫರೆನ್ಸ್ ಮೂಲಕ ಯುರೋಪಿಯನ್ ಕೌನ್ಸಿಲ್ (ಇಯು) ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ.

ವಿಡಿಯೋ-ಕಾನ್ಫರೆನ್ಸ್ ಮೂಲಕ ಯುರೋಪಿಯನ್ ಕೌನ್ಸಿಲ್ (ಇಯು) ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ.

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯನ್ನು ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ನಿರೂಪಿಸಿದರು. ಪೋರ್ಚುಗಲ್ ಪ್ರಸ್ತುತ ಕೌನ್ಸಿಲ್ ಆಫ್ ಇಯು ಅಧ್ಯಕ್ಷತೆಯನ್ನು ಹೊಂದಿದೆ.

 • Share this:

  ನವದೆಹಲಿ: ಕೊರೋನ ವೈರಸ್ ಕಾಯಿಲೆ ವಿನಾಶಕಾರಿ ಎರಡನೇ ತರಂಗದಿಂದ ತತ್ತರಿಸುತ್ತಿರುವ ಭಾರತಕ್ಕೆ ಬೆಂಬಲ ನೀಡುವ 27 ಸದಸ್ಯರ ಬಣದ ನಾಯಕರೊಂದಿಗೆ ಶನಿವಾರ ವಿಡಿಯೋ-ಕಾನ್ಫರೆನ್ಸ್ ಮೂಲಕ ಯುರೋಪಿಯನ್ ಕೌನ್ಸಿಲ್ (ಇಯು) ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.


  ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಮಾತನಾಡಿ, “ಇಂದಿನ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹೆಚ್ಚು ಸಮಯೋಚಿತವಾಗಿಲ್ಲ. ಈ ಅತ್ಯಂತ ಸವಾಲಿನ ಸಮಯದಲ್ಲಿ ಯುರೋಪಿಯನ್ ಕೌನ್ಸಿಲ್ ಭಾರತದ ಪರವಾಗಿದೆ. ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ನಾವು ಚರ್ಚಿಸುತ್ತೇವೆ. ಒಟ್ಟಿಗೆ “ಏಕ್ ಸಾಥ್” ಕೆಲಸ ಮಾಡುವ ಮೂಲಕ ಇಯು ಮತ್ತು ಭಾರತ ಹೆಚ್ಚಿನದನ್ನು ಸಾಧಿಸಬಹುದು ಎಂದು ಹೇಳಿದರು.  ಇದನ್ನು ಓದಿ: Covid-19: ರಾಜ್ಯಗಳಿಗೆ ಆಕ್ಸಿಜನ್ ಹಂಚಿಕೆಗೆ ಡಾ.ದೇವಿಪ್ರಸಾದ್ ಶೆಟ್ಟಿ ಸೇರಿ 12 ಜನ ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್


  ಮೂಲಗಳ ಪ್ರಕಾರ, ಅನೇಕ ದೇಶಗಳಿಗೆ ಪ್ರಮುಖ ವಸ್ತುಗಳನ್ನು ರಫ್ತು ಮಾಡುವ ಮೂಲಕ ಭಾರತ ಮಾನವೀಯತೆಗೆ ಸಹಾಯ ಮಾಡಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಕಳೆದ ವರ್ಷ ಸಾಂಕ್ರಾಮಿಕ ರೋಗದಿಂದ ತಮ್ಮ ದೇಶ ತತ್ತರಿಸಿದ್ದಾಗ ಭಾರತ ಮಾಡಿದ ಸಹಾಯವನ್ನು ಮರೆಯಲು ಸಾಧ್ಯವಿಲ್ಲ ಎಂದು  ಸ್ಪೇನ್ ದೇಶದ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆ ಅವರು ನೆನಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ. ಬೆಲ್ಜಿಯಂನ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ಡಿ ಕ್ರೂಕ್ ಅವರು ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು, "ಕೆಮ್ ಚೋ" ('ನೀವು ಹೇಗಿದ್ದೀರಿ') ಎಂದು ಗುಜರಾತಿ ಭಾಷೆಯಲ್ಲಿ ಕೇಳಿದರು. ಎಲ್ಲಾ ನಾಯಕರು ತಾವು ಪಡೆದ ವೈದ್ಯಕೀಯ ಸಾಮಗ್ರಿಗಳಿಗಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ಅವರು ಭಾರತಕ್ಕೆ ಸಾಧ್ಯವಾದಷ್ಟು ಬೆಂಬಲವನ್ನು ನೀಡಲು ಬದ್ಧರಾಗಿದ್ದಾರೆ ಎಂದು ಒಕ್ಕೊರಲಿನಿಂದ ಸಾರಿದರು.


  ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯನ್ನು ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ನಿರೂಪಿಸಿದರು. ಪೋರ್ಚುಗಲ್ ಪ್ರಸ್ತುತ ಕೌನ್ಸಿಲ್ ಆಫ್ ಇಯು ಅಧ್ಯಕ್ಷತೆಯನ್ನು ಹೊಂದಿದೆ. ಈ ಹಿಂದೆ ನಡೆದಿದ್ದ ಇಯು- ಭಾರತ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಹಾಗೂ ಇಯು ಮುಖ್ಯ ಕಾರ್ಯನಿರ್ವಾಹಕ ಹಾಘೂ ಅದರ ಅಧ್ಯಕ್ಷರು ಪಾಲ್ಗೊಂಡಿದ್ದರು. ಈ ಶೃಂಗಸಭೆ ಕೇವಲ 2 ಗಂಟೆ ನಡೆದಿತ್ತು.

  Published by:HR Ramesh
  First published: