• Home
  • »
  • News
  • »
  • coronavirus-latest-news
  • »
  • ಕೊರೋನಾ ಭೀತಿ; ಚೀನಾ, ಮಲೇಷಿಯಾ, ಇರಾನ್​, ಜಪಾನ್​, ಥಾಯ್ಲೆಂಡ್​ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಪ್ರವೇಶವಿಲ್ಲ

ಕೊರೋನಾ ಭೀತಿ; ಚೀನಾ, ಮಲೇಷಿಯಾ, ಇರಾನ್​, ಜಪಾನ್​, ಥಾಯ್ಲೆಂಡ್​ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಪ್ರವೇಶವಿಲ್ಲ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

COVID19 ಗೆ ಸಂಬಂಧಿಸಿದಂತೆ ಉದಯೋನ್ಮುಖ ಜಾಗತಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಯಾವ ದೇಶದ ಜನ ಭಾರತಕ್ಕೆ ಆಗಮಿಸಬಹುದು? ಯಾರು ಆಗಮಿಸುವಂತಿಲ್ಲ. ಭಾರತಕ್ಕೆ ಆಗಮಿಸುವ ಮುನ್ನ ಏನೆಲ್ಲಾ ಮುನ್ನೆಚ್ಚರಿಕೆಯನ್ನು ಪಾಲಿಸಬೇಕು ಎಂಬ ಸೂಚನಾ ಪಟ್ಟಿ ನೀಡಿದ್ದು ತಕ್ಷಣದ ಅನುಷ್ಠಾನಕ್ಕಾಗಿ ಈ ಕೆಳಗಿನ ಸಲಹೆಗಳನ್ನು ನೀಡಿದೆ.

ಮುಂದೆ ಓದಿ ...
  • Share this:

ನವ ದೆಹಲಿ (ಮಾರ್ಚ್ 03); ಚೀನಾದಿಂದ ಆರಂಭವಾದ ಮಾರಣಾಂತಿಕ ಕೊರೋನಾ ಭೀತಿ ಪ್ರಸ್ತುತ ಇಡೀ ವಿಶ್ವದಾದ್ಯಂತ ಪೆಡಂಭೂತದಂತೆ ಕಾಡುತ್ತಿದೆ. ಈ ಪೆಡಂಭೂತಕ್ಕೆ ಈವರೆಗೆ ಸುಮಾರು 3,000 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಭಾರತದಲ್ಲೂ ಸಹ ಈ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದೆ. ಚೀನಾ ಹಾಗೂ ಇರಾನ್​ನಿಂದ ಭಾರತಕ್ಕೆ ಆಗಮಿಸಿರುವ ಪ್ರವಾಸಿಗಳಿಂದ ಈ ಸೋಂಕು ಹರಡಿರುವ ಸಾಧ್ಯತೆ ಇದೆ ಎಂಬುದನ್ನು ಮನಗಂಡಿರುವ ಕೇಂದ್ರ ಸರ್ಕಾರ ನೂತನ ಟ್ರಾವೆಲ್ ಅಡ್ವೈಸರಿಯನ್ನು ಬಿಡುಗಡೆ ಮಾಡಿದೆ.


COVID19 ಗೆ ಸಂಬಂಧಿಸಿದಂತೆ ಉದಯೋನ್ಮುಖ ಜಾಗತಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಯಾವ ದೇಶದ ಜನ ಭಾರತಕ್ಕೆ ಆಗಮಿಸಬಹುದು? ಯಾರು ಆಗಮಿಸುವಂತಿಲ್ಲ. ಭಾರತಕ್ಕೆ ಆಗಮಿಸುವ ಮುನ್ನ ಏನೆಲ್ಲಾ ಮುನ್ನೆಚ್ಚರಿಕೆಯನ್ನು ಪಾಲಿಸಬೇಕು ಎಂಬ ಸೂಚನಾ ಪಟ್ಟಿ ನೀಡಿದ್ದು ತಕ್ಷಣದ ಅನುಷ್ಠಾನಕ್ಕಾಗಿ ಈ ಕೆಳಗಿನ ಸಲಹೆಗಳನ್ನು ನೀಡಿದೆ.


1. ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ಪ್ರಜೆಗಳಿಗೆ ನೀಡಲಾದ ಎಲ್ಲಾ ನಿಯಮಿತ (ಸ್ಟಿಕ್ಕರ್) ವೀಸಾ / ಇ-ವೀಸಾ ವನ್ನು 03.03.2020ಕ್ಕೂ ಮೊದಲು ಪಡೆದವರ ಭಾರತದ ಪ್ರವೇಶವನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ. ಬಲವಾದ ಕಾರಣದ ಜೊತೆಗೆ ಭಾರತವನ್ನು ಪ್ರವೇಶಿಸಬೇಕಾದವರು ಹತ್ತಿರದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಹೊಸ ವೀಸಾ ಪಡೆಯಬೇಕು.


2. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಪ್ರಜೆಗಳಿಗೆ ನಿಯಮಿತ (ಸ್ಟಿಕ್ಕರ್) ವೀಸಾ / ಇ-ವೀಸಾವನ್ನು 05.02.2020ಕ್ಕೂ ಮೊದಲು ನೀಡಲಾಗಿದ್ದರೆ ಅವರ ಭಾರತದ ಪ್ರವೇಶಕ್ಕೆ ಅವಕಾಶ ಇಲ್ಲ. ಭಾರತಕ್ಕೆ ಪ್ರಯಾಣಿಸಲೇಬೇಕಾದ ಸಂದರ್ಭ ಎದುರಾದರೆ, ಹತ್ತಿರದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವೀಸಾಕ್ಕಾಗಿ ಹೊಸ ಅರ್ಜಿ ಸಲ್ಲಿಸಬಹುದು.3. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಇರಾನ್, ಇಟಲಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳಿಗೆ 01.02.2020 ರಂದು ಅಥವಾ ಈ ದಿನಾಂಕದ ನಂತರ ಪ್ರಯಾಣಿಸಿ ಇನ್ನೂ ಭಾರತ ಪ್ರವೇಶಿಸದ ಎಲ್ಲಾ ವಿದೇಶಿ ಪ್ರಜೆಗಳನ್ನು ದೇಶಕ್ಕೆ ಆಗಮಿಸದಂತೆ ತಡೆಹಿಡಿಯಲಾಗಿದೆ. ಭಾರತಕ್ಕೆ ಬರಲೇಬೇಕಾದ ಸಂದರ್ಭ ಎದುರಾದರೆ ಹೊಸ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು.


4. ರಾಜತಾಂತ್ರಿಕರು, ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಒಸಿಐ ಕಾರ್ಡುದಾರರಿ ಪ್ರವೇಶಕ್ಕೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಅವರು ಭಾರತಕ್ಕೆ ಪ್ರವೇಶಿಸುವ ಮುನ್ನ ತಪಾಸಣೆ ಕಡ್ಡಾಯ.


5. ಯಾವುದೇ ಬಂದರಿನಿಂದ ಭಾರತಕ್ಕೆ ಪ್ರವೇಶಿಸುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳ ಪ್ರಯಾಣಿಕರು ಬಂದರುಗಳಲ್ಲಿನ ಆರೋಗ್ಯ ಅಧಿಕಾರಿಗಳು ಅಥವಾ ವಲಸೆ ಅಧಿಕಾರಿಗಳಿಗೆ ಸರಿಯಾಗಿ ಭರ್ತಿ ಮಾಡಿದ ಸ್ವಯಂ ಘೋಷಣೆ ಫಾರ್ಮ್ (ವೈಯಕ್ತಿಕ ವಿವರಗಳು, ಫೋನ್ ಸಂಖ್ಯೆ ಮತ್ತು ಭಾರತದಲ್ಲಿ ವಿಳಾಸ ಸೇರಿದಂತೆ) ಮತ್ತು ಪ್ರಯಾಣದ ಇತಿಹಾಸವನ್ನು ಒದಗಿಸಬೇಕು.


6. ನಿರ್ಬಂಧಿತರನ್ನು ಹೊರತುಪಡಿಸಿ ಪ್ರಯಾಣಿಕರು (ವಿದೇಶಿ ಮತ್ತು ಭಾರತೀಯರು) ಚೀನಾ, ದಕ್ಷಿಣ ಕೊರಿಯಾ, ಜಪಾನ್, ಇರಾನ್, ಇಟಲಿ, ಹಾಂಗ್ ಕಾಂಗ್, ಮಕಾವು, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ನೇಪಾಳ, ಥಾಯ್ಲೆಂಡ್, ಸಿಂಗಾಪುರ ಮತ್ತು ತೈವಾನ್ನಿಂದ ನೇರವಾಗಿ ಅಥವಾ ಪರೋಕ್ಷವಾಗಿ ದೇಶಕ್ಕೆ ಆಗಮಿಸುವ ಮುನ್ನ ವೈದ್ಯಕೀಯ ತಪಾಸಣೆ ಕಡ್ಡಾಯ.


7. ಭಾರತೀಯ ನಾಗರಿಕರಿಗೆ ಚೀನಾ, ಇರಾನ್, ರಿಪಬ್ಲಿಕ್ ಆಫ್ ಕೊರಿಯಾ, ಇಟಲಿ ಪ್ರವಾಸದಿಂದ ದೂರವಿರಲು ಸೂಚಿಸಲಾಗಿದೆ ಮತ್ತು ಇತರ COVID-19 ಪೀಡಿತ ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ.


ಇದನ್ನೂ ಓದಿ : ಕೊರೊನಾ ಎಫೆಕ್ಟ್​; ಮಾರಕ ವೈರಸ್​ ಎಷ್ಟೆಲ್ಲಾ ದೇಶಗಳಲ್ಲಿ ಹಬ್ಬಿದೆ ಮತ್ತು ಇದರಿಂದ ಭಾರತಕ್ಕೇನು ಲಾಭ? ಏನು ನಷ್ಟ?

Published by:MAshok Kumar
First published: