ಮೈಸೂರಿನಲ್ಲಿ ಇಂದಿನಿಂದ ಹೋಲ್​ಸೇಲ್ ವ್ಯಾಪಾರಸ್ಥರಿಗೆ ಮಾತ್ರ ಎಪಿಎಂಸಿ ಪ್ರವೇಶ

ಮೈಸೂರು ನಂಜನಗೂಡು ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆ ಇದೆ. ಹೋಲ್​ಸೇಲ್​ ವ್ಯಾಪಾರಸ್ಥರು ಬಿಟ್ಟು ಬೇರೆ ವಾಹನಗಳು ಬಂದರೆ ಆ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಮೈಸೂರು ಎಸ್​ಪಿ ರಿಶ್ಯಂತ್​ ಆದೇಶ ಹೊರಡಿಸಿದ್ದಾರೆ.

news18-kannada
Updated:March 30, 2020, 9:41 AM IST
ಮೈಸೂರಿನಲ್ಲಿ ಇಂದಿನಿಂದ ಹೋಲ್​ಸೇಲ್ ವ್ಯಾಪಾರಸ್ಥರಿಗೆ ಮಾತ್ರ ಎಪಿಎಂಸಿ ಪ್ರವೇಶ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಮಾ.30): ಕೊರೋನಾ ಭೀತಿಯಿಂದಾಗಿ ಮೈಸೂರಿನ ಎಂ.ಜಿ.ರಸ್ತೆ ಮಾರುಕಟ್ಟೆಯನ್ನು ವಸ್ತು ಪ್ರದರ್ಶನ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಸಹ ಮೈಸೂರಿನ ಜನ ತರಕಾರಿ ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಸೇರುತ್ತಿದ್ದಾರೆ.  ಕೊರೋನಾ ಭೀತಿ ಇಲ್ಲದೇ ತರಕಾರಿ ಕೊಳ್ಳಲು ಮುಗಿಬೀಳುತ್ತಿದ್ದಾರೆ. 

ಈಗಾಗಲೇ ಮೈಸೂರಿನಲ್ಲಿ 8 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದರೂ ಸಹ ಎಚ್ಚೆತ್ತುಕೊಳ್ಳದ ಜನರು ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಸೇರುತ್ತಿದ್ದಾರೆ. ಇನ್ನು, ಎಪಿಎಂಸಿಗೆ ಬಿಡಿ ವ್ಯಾಪಾರಸ್ಥರಿಗೆ ಪ್ರವೇಶ ನಿರ್ಬಂಧ ಮಾಡಲಾಗಿದೆ. ಕೇವಲ ಹೋಲ್​ಸೇಲ್​ ವ್ಯಾಪಾರಸ್ಥರಿಗೆ ಮಾತ್ರ ಎಪಿಎಂಸಿಗೆ ಹೋಗಲು ಅವಕಾಶ ಇದೆ. ಮೈಸೂರು ನಂಜನಗೂಡು ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆ ಇದೆ. ಹೋಲ್​ಸೇಲ್​ ವ್ಯಾಪಾರಸ್ಥರು ಬಿಟ್ಟು ಬೇರೆ ವಾಹನಗಳು ಬಂದರೆ ಆ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದು ಮೈಸೂರು ಎಸ್​ಪಿ ರಿಶ್ಯಂತ್​ ಆದೇಶ ಹೊರಡಿಸಿದ್ದಾರೆ.

ಕೊರೋನಾ ಎಫೆಕ್ಟ್​​​​; ದಾಸನಪುರಕ್ಕೆ ಶಿಫ್ಟ್​ ಆದ ಯಶವಂತಪುರ ತರಕಾರಿ ಮಾರುಕಟ್ಟೆ

ಪಾತಾಳಕ್ಕೆ ಕುಸಿದ ಟೊಮೊಟೋ ದರ

ಕೊರೋನಾ ಎಫೆಕ್ಟ್​ ಹಿನ್ನೆಲೆ, ಮೈಸೂರಿನಲ್ಲಿ ತರಕಾರಿಗಳ ಬೆಲೆ ಕುಸಿದಿದೆ. ಅದರಲ್ಲೂ ಟೊಮೊಟೋ ದರದಲ್ಲಿ ಭಾರೀ ಇಳಿಕೆ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಮಾರಾಟಕ್ಕೆ ತಂದಿದ್ದ ನೂರಾರು ಕ್ವಿಂಟಾಲ್​ ಟೊಮೊಟೋ ಹಣ್ಣುಗಳನ್ನು ಹಸುಗಳಿಗೆ ಸುರಿದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮೈಸೂರಿನ ಎಪಿಎಂಸಿ ಆವರಣದಲ್ಲಿ ಈ ಘಟನೆ ನಡೆದಿದೆ. ಟೊಮೊಟೋಗೆ ಸೂಕ್ತ ಬೆಲೆ ಸಿಗದಿದ್ದಕ್ಕೆ  ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಗಣೆ ವೆಚ್ಚವೂ ಸಿಗದ ಹಿನ್ನೆಲೆ, ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
First published: March 30, 2020, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading