• Home
 • »
 • News
 • »
 • coronavirus-latest-news
 • »
 • 10 ತಿಂಗಳಲ್ಲಿ 43 ಬಾರಿ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖನಾದ 72 ವರ್ಷದ ವೃದ್ಧ!

10 ತಿಂಗಳಲ್ಲಿ 43 ಬಾರಿ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖನಾದ 72 ವರ್ಷದ ವೃದ್ಧ!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

"ವೈರಸ್ ದೇಹದಲ್ಲಿ ಎಲ್ಲಿ ಅಡಗಿಕೊಳ್ಳುತ್ತದೆ? ಅದು ಜನರಲ್ಲಿ ನಿರಂತರವಾಗಿ ಸೋಂಕು ತಗುಲುವುದು ಹೇಗೆ? ಎಂಬುದು ನಮಗೆ ತಿಳಿದಿಲ್ಲ" ಎಂದು ಡೇವಿಡ್ಸನ್ ತಿಳಿಸಿದ್ದಾರೆ.

 • Share this:

  72 ವರ್ಷದ ಬ್ರಿಟಿಷ್ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅರೇ ನಮ್ಮ ದೇಶದಲ್ಲಿಯೇ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿರುವಾಗ ಬ್ರಿಟಿಷ್​ ವ್ಯಕ್ತಿಗೆ ಕೊರೋನಾ ಬಂದಿದ್ದರಲ್ಲಿ ಏನು ವಿಶೇಷ ಎಂದು ಕೇಳುತ್ತಿರಾ? ಈ ವ್ಯಕ್ತಿ ಕಳೆದ 10 ತಿಂಗಳುಗಳಲ್ಲಿ ಅತಿ ಹೆಚ್ಚು ಬಾರಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬುದೇ ಇದರ ವಿಶೇಷ. ಈ ವಿಷಯವನ್ನು ಸ್ವತಃ ಅಲ್ಲಿಯ ಸಂಶೋಧಕರೇ ಗುರುವಾರ ಹೇಳಿದ್ದಾರೆ.


  ವೆಸ್ಟರ್ನ್ ಇಂಗ್ಲೆಂಡ್​ನ ನಿವೃತ್ತ ವಾಹನ ಚಾಲನೆ ಶಿಕ್ಷಕ ಡೇವ್ ಸ್ಮಿತ್ ಅವರು ಬರೋಬ್ಬರಿ 43 ಬಾರಿ ಕೊರೋನಾ ಪಾಸಿಟಿವ್​ಗೆ ತುತ್ತಾಗಿದ್ದಾರೆ. ಏಳು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೆ. ಇದಷ್ಟೇ ಅಲ್ಲದೇ ಅವರು ಮೃತಪಟ್ಟ ಮೇಲೆ ತಮ್ಮ ಅಂತ್ಯಕ್ರಿಯೆಯನ್ನು ಹೀಗೆಯೇ ಮಾಡಬೇಕು ಎಂದು ಪ್ಲಾನ್​ ಸಹ ಮಾಡಿದ್ದಾರಂತೆ.


  ನಾನು ಸ್ವಯಂ ನಿವೃತ್ತಿ ಪಡೆದಿದ್ದೇನೆ. ನನ್ನ ಅಂತ್ಯಕ್ರಿಯೆಗೆ ಎಲ್ಲರನ್ನು ಕರೆಸಿ, ಅವರಿಂದ ಗುಡ್​ಬಾಯ್ ಹೇಳಿಸಿ ಎಂದು ಕುಟುಂಬದವರನ್ನು ಕೇಳಿಕೊಂಡಿದ್ದೇನೆ ಎಂದು ಬಿಬಿಸಿ ಟೆಲಿವಿಷನ್​ಗೆ ಡೇವ್ ಸ್ಮಿತ್ ಅವರು ಹೇಳಿದ್ದಾರೆ.


  ಅವರ ಹೆಂಡತಿ ಲಿಂಡಾ ಅವರು ಪತಿಯೊಂದಿಗೆ ಮನೆಯಲ್ಲಿ ಕ್ವಾರಂಟೈನ್​ನಲ್ಲಿ ಇದ್ದಾರೆ. ಕಳೆದ ಒಂದು ವರ್ಷದಿಂದ ನಾವು ಈ ನರಕ ಅನುಭವಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.


  ಈ ಬಗ್ಗೆ ಬ್ರಿಸ್ಟೊಲ್ ಆ್ಯಂಡ್ ನಾರ್ಥ್ ಬ್ರಿಸ್ಟೋಲ್​ ಎನ್​ಎಚ್​ಎಸ್ ಟ್ರಸ್ಟ್​ನ ಸಾಂಕ್ರಾಮಿಕ ರೋಗಗಳ ಸಲಹೆಗಾರ ಎಡ್ ಮಾರನ್ ಅವರು ಮಾತನಾಡಿ, ಡೆವ್ ಸ್ಮಿತ್ ಅವರ ದೇಹದಲ್ಲಿ ವೈರಸ್​ ಸಕ್ರಿಯವಾಗಿದೆ. ಅವರ ದೇಹದಲ್ಲಿದ್ದ ವೈರಸ್ ಮಾದರಿಯನ್ನು ವಿಶ್ವವಿದ್ಯಾನಿಲಯದ ಪಾಲುದಾರರಿಗೆ ಕಳುಹಿಸುವ ಮೂಲಕ ಅದನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಾಬೀತುಪಡಿಸಲು ನಮಗೆ ಸಾಧ್ಯವಾಯಿತು, ಇದು ಕೇವಲ ಪಿಸಿಆರ್ ಪರೀಕ್ಷೆಯನ್ನು ಪ್ರಚೋದಿಸುವ ಆದರೆ ಉಳಿದಿರುವ ಉತ್ಪನ್ನಗಳಲ್ಲ ಆದರೆ ಅದು ಸಕ್ರಿಯ, ಕಾರ್ಯಸಾಧ್ಯವಾದ ವೈರಸ್ ಎಂದು ಸಾಬೀತುಪಡಿಸುತ್ತದೆ. " ಎಂದು ಹೇಳಿದ್ದಾರೆ.


  ಯುಎಸ್ ಬಯೋಟೆಕ್ ಸಂಸ್ಥೆ ರೆಜೆನೆರಾನ್ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಆ್ಯಂಟಿಬಯೋಟಿಕ್ ಕಾಕ್​ಟೈಲ್​ ಚಿಕಿತ್ಸೆಯ ನಂತರ ಸ್ಮಿತ್ ಚೇತರಿಸಿಕೊಂಡಿದ್ದಾರೆ. ಇವರ ವಿಷಯದಲ್ಲಿ ಸಹಾನುಭೂತಿಯ ಆಧಾರದ ಮೇಲೆ ಇದನ್ನು ಈ ಔಷಧ ಬಳಕೆಗೆ ಅನುಮತಿ ನೀಡಲಾಗಿದೆ. ಆದರೆ ಚಿಕಿತ್ಸೆಯನ್ನು ಬ್ರಿಟನ್‌ನಲ್ಲಿ ಬಳಸಲು ಪ್ರಾಯೋಗಿಕವಾಗಿ ಅನುಮೋದನೆ ನೀಡಲಾಗಿಲ್ಲ.


  ಈ ತಿಂಗಳು ಪ್ರಕಟವಾದ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ತೀವ್ರವಾದ ಕೋವಿಡ್ ರೋಗಿಗಳಲ್ಲಿ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಿದ್ದು, ಅವರು ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.


  45 ದಿನಗಳ ಕಾಲ ರೆಜೆನೆರಾನ್ ಔಷಧ ಪಡೆದ ಬಳಿಕ ಅಂತಿಮ ಪ್ರಯೋಗ ನಡೆಸಿದಾಗ ಅವರು ಮತ್ತು ಅವರ ಹೆಂಡತಿ ವರದಿ ನೆಗೆಟಿವ್ ಬಂದಿದೆ. ಆ ನಂತರ ಇಬ್ಬರು ಸೇರಿ ಶಾಂಪೈನ್ ಬಾಟಲಿ ತೆರೆದು ಆ ಸಂತೋಷದ ಘಳಿಗೆಯನ್ನು ಸಂಭ್ರಮಿಸಿದ್ದಾರೆ.


  ಇದನ್ನು ಓದಿ: ನನ್ನ ಗಂಡ ನನಗೆ ಬೇಕ್ರಿ.. ಗರ್ಭಿಣಿ ಹೆಂಡತಿಯನ್ನು ಬಿಟ್ಟು 2ನೇ ಮದುವೆಯಾದ ಭೂಪ!


   ಸ್ಮಿತ್ ಅವರ ಚಿಕಿತ್ಸೆಯು ಅಧಿಕೃತ ವೈದ್ಯಕೀಯ ಪ್ರಯೋಗದ ಭಾಗವಾಗಿರಲಿಲ್ಲ. ಆದರೆ ಅವರ ಪ್ರಕರಣವನ್ನು ಈಗ ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿ ವೈರಾಲಜಿಸ್ಟ್ ಆಂಡ್ರ್ಯೂ ಡೇವಿಡ್ಸನ್ ಅಧ್ಯಯನ ಮಾಡುತ್ತಿದ್ದಾರೆ. ಜುಲೈನಲ್ಲಿ ಯುರೋಪಿಯನ್ ಕಾಂಗ್ರೆಸ್ ಆಫ್ ಕ್ಲಿನಿಕಲ್ ಮೈಕ್ರೋಬಯಾಲಜಿ ಮತ್ತು ಸಾಂಕ್ರಾಮಿಕ ಕಾಯಿಲೆಗಳಲ್ಲಿ ಅವರ ಪ್ರಕರಣದ ಪ್ರಬಂಧವನ್ನು ಮಂಡಿಸಲಾಗುವುದು, ಇದು "ಇದು ಇತಿಹಾಸದಲ್ಲಿ ದಾಖಲಾದ ಅತಿ ಉದ್ದದ ಸೋಂಕು" ಎಂದು ಭಾವಿಸಲಾಗಿದೆ ಎಂದು ಹೇಳಿದ್ದಾರೆ.


  "ವೈರಸ್ ದೇಹದಲ್ಲಿ ಎಲ್ಲಿ ಅಡಗಿಕೊಳ್ಳುತ್ತದೆ? ಅದು ಜನರಲ್ಲಿ ನಿರಂತರವಾಗಿ ಸೋಂಕು ತಗುಲುವುದು ಹೇಗೆ? ಎಂಬುದು ನಮಗೆ ತಿಳಿದಿಲ್ಲ" ಎಂದು ಡೇವಿಡ್ಸನ್ ತಿಳಿಸಿದ್ದಾರೆ.

  Published by:HR Ramesh
  First published: