ವೀಕೆಂಡ್ ಕರ್ಫ್ಯೂ ಅಂತ್ಯ; ಮೆಜೆಸ್ಟಿಕ್​ಗೆ ದೌಡಾಯಿಸುತ್ತಿವೆ ಸಾರಿಗೆ ಬಸ್​ಗಳು, ಜನರಿಲ್ಲದೆ ಬಣಗುಡುತ್ತಿದೆ ನಿಲ್ದಾಣ!

ಬಸ್​ ನಿಲ್ದಾಣಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಬಸ್​ಗಳು ಬಂದು ನಿಂತಿದ್ದರೂ ಸಹ ಪ್ರಯಾಣಿಕರಿಲ್ಲದೆ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳು ಬಣಗುಡುತ್ತಿವೆ.

ಮೆಜೆಸ್ಟಿಕ್ (ಪ್ರಾತಿನಿಧಿಕ ಚಿತ್ರ).

ಮೆಜೆಸ್ಟಿಕ್ (ಪ್ರಾತಿನಿಧಿಕ ಚಿತ್ರ).

 • News18
 • Last Updated :
 • Share this:
  ಬೆಂಗಳೂರು (ಜೂನ್ 28); ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸೃಷ್ಟಿಸಿದ್ದ ಭಯ ಕಡಿಮೆಯಾಗುತ್ತಿದೆ. ಸೋಂಕು ಇಳಿಕೆಯಾಗುತ್ತಿರುವ ಪರಿಣಾಮ ಕಳೆದ ವಾರದಿಂದಲೇ ಸರ್ಕಾರ ಹಂತಹಂತವಾಗಿ ಅನ್​ಲಾಕ್ ಅನ್ನು ಜಾರಿ ಮಾಡುತ್ತಿದೆ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ ಮತ್ತು ಭಾನುವಾರ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ಹೀಗಾಗಿ ಕಳೆದ ಶನಿವಾರ ಮತ್ತು ಭಾನುವಾರ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿದಿರಲಿಲ್ಲ. ಆದರೆ, ಇದೀಗ ವೀಕೆಂಡ್ ಕರ್ಫ್ಯೂ ಮುಗಿದಿದ್ದು, ಇಂದು ಬೆಳಗ್ಗೆ ನೂರಾರು ಬಸ್​ಗಳು ಮೆಜೆಸ್ಟಿಕ್​ ಕಡೆಗೆ ದಾಂಗುಡಿ ಇಡುತ್ತಿವೆ.  ಆದರೆ, ಪ್ರಯಾಣಿಕರು ಮಾತ್ರ ಮೆಜೆಸ್ಟಿಕ್ ಕಡೆಗೆ ಮುಖಮಾಡುತ್ತಿಲ್ಲ.

  ಬಿಎಂಟಿಸಿ ಬಸ್​ ನಿಲ್ದಾಣದ ಪ್ಲಾಟ್​ಫಾರಂಗಳು ಬಸ್​ಗಳಿಂದ ತುಂಬಿ ಹೋಗಿವೆ. ಒಂದು ಹಂತದಲ್ಲಿ ಇಂದು ಬೆಳಗ್ಗೆ ಅಧಿಕ ಸಂಖ್ಯೆಯಲ್ಲಿ ಬಸ್​ಗಳು ಮೆಜೆಸ್ಟಿಕ್​ ಕಡೆಗೆ ಹೊರಟಿದ್ದ ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿತ್ತು. ಈ ಭಾಗದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇನ್ನೂ ಮತ್ತೊಂದೆಡೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕೆಎಸ್​ಆರ್​ಟಿಸಿ ಬಸ್​ಗಳೂ ಸಹ ಮೆಜೆಸ್ಟಿಕ್​ನಲ್ಲಿ ಇದೀಗ ಸಾಲಾಗಿ ನಿಂತಿದೆ.

  ಆದರೆ, ಬಸ್​ ನಿಲ್ದಾಣಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಬಸ್​ಗಳು ಬಂದು ನಿಂತಿದ್ದರೂ ಸಹ ಪ್ರಯಾಣಿಕರಿಲ್ಲದೆ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳು ಬಣಗುಡುತ್ತಿವೆ. ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್ಆರ್​ಟಿಸಿ-ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಸಹ ಪ್ರಯಾಣಿಕರಿಲ್ಲದೆ ಬಸ್‌ಗಳು ಅರ್ಧ ಖಾಲಿಯಾಗಿ ತೆರಳುತ್ತಿವೆ. ಬೆರಳೆಣಿಕೆಯಷ್ಟು ಪ್ರಯಾಣಿಕರನ್ನ ಹೊತ್ತು ಬಸ್​ಗಳ ಸಂಚಾರ ಆರಂಭವಾಗಿದ್ದು, ಇದು ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ನಷ್ಟಕ್ಕೆ ದೂಡಲಿದೆ ಎನ್ನಲಾಗುತ್ತಿದೆ.

  ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ಲಸಿಕೆ:

  ಕೇಂದ್ರ ಸರ್ಕಾರ ಮೇ 01 ರಿಂದ ದೇಶದಾದ್ಯಂತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿತ್ತಾದರೂ ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ. ಬದಲಿಗೆ ಎಲ್ಲಾ ರಾಜ್ಯ ಸರ್ಕಾರಗಳು ಅವರೇ ಲಸಿಕೆಯನ್ನು ಖರೀದಿಸಿ ನೀಡಬೇಕು ಎಂದು ತಾಕೀತು ಮಾಡಿತ್ತು. ಆದರೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶಿಸಿ "ಲಸಿಕೆ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ" ಎಂದು ಸೂಚನೆ ನೀಡಿದ ನಂತರ ಇದೀಗ ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ನೀಡಲು ಮುಂದಾಗಿದೆ.

  ಅಲ್ಲದೆ, ಈ ಬಗ್ಗೆ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಹ ಸಲ್ಲಿಸಿದ್ದು, "ಜುಲೈ ಅಂತ್ಯದ ವೇಳೆಗೆ ದೇಶದ ಲಸಿಕೆ ಅಭಿಯಾನಕ್ಕೆ 21 ಕೋಟಿ ಹೆಚ್ಚುವರಿ ಡೋಸ್​ ಲಸಿಕೆಗಳು ಮತ್ತು 2021 ರ ಆಗಸ್ಟ್-ಡಿಸೆಂಬರ್ ನಡುವೆ 135 ಕೋಟಿ ಲಸಿಕೆಗಳನ್ನು ಪಡೆಯುವ ನಿರೀಕ್ಷೆ ಇದೆ" ಎಂದು ತಿಳಿಸಿದೆ.

  ಈ ಹಿಂದೆ ಲಸಿಕೆ ಪೂರೈಕೆ ಮಾಡದೆ ಕೇಂದ್ರ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, "ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 257 ಕೋಟಿ ಲಸಿಕೆ ಲಭ್ಯವಾಗಲಿದೆ" ಎಂದು ತಿಳಿಸಿದ್ದರು. ಈ ಹೇಳಿಕೆಯಿಂದಾಗಿ ಬಿಜೆಪಿ ಗೊಂದಲವನ್ನು ನಿರ್ಮಾಣ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಮೊದಲ ಬಾರಿಗೆ ​ದೇಶದಲ್ಲಿ ಲಸಿಕೆ ಪ್ರಮಾಣದ ಲಭ್ಯತೆ ಕುರಿತು ಲಿಖಿತ ದಾಖಲಾತಿ ನೀಡಿದೆ.

  ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ ಅನ್ನು ಅಂತಿಮ ಲಸಿಕೆ ಖರೀದಿ ಒಪ್ಪಂದಗಳ ಆಧಾರದ ಮೇಲೆ ಮಾತ್ರ ನೋಡಬೇಕು. ಇನ್ನೂ ಅನೇಕ ಕಾರ್ಯಗಳು ಪ್ರಗತಿಯಲ್ಲಿವೆ. ಕೇಂದ್ರವು ಹೆಚ್ಚಿನ ಲಸಿಕೆಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಅವುಗಳನ್ನು ಪಟ್ಟಿಗೆ ಸೇರಿಸಬಹುದು.

  ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಕೇಂದ್ರದ ಅಫಿಡವಿಟ್‌ನ ಪ್ರಕಾರ, ಜುಲೈ 31 ರ ಗುರಿ 51.6 ಕೋಟಿ ಪ್ರಮಾಣವಾಗಿದೆ. ಭಾರತ ಪ್ರಸ್ತುತ ಮೂರು ಕೋವಿಡ್ -19 ಲಸಿಕೆಗಳನ್ನು ಬಳಸುತ್ತಿದೆ ಮತ್ತು ಇವೆಲ್ಲವೂ ಎರಡು ಡೋಸ್ ಲಸಿಕೆಗಳು.

  ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಉದಯವಾಯ್ತು ಥರ್ಡ್ ಫ್ರಂಟ್; ಸಿಎಂ ಗಾದಿಗಾಗಿ ದಲಿತ‌ ಅಸ್ತ್ರ..!

  ಇದರರ್ಥ ಪರಿಣಾಮಕಾರಿಯಾಗಿ ಈ 51.6 ಕೋಟಿ ಲಸಿಕೆಗಳು 25.8 ಕೋಟಿ ಜನರಿಗೆ ನೀಡಲು ಸಾಧ್ಯವಾಗುತ್ತದೆ. ಈ ಪೈಕಿ 51.6 ಕೋಟಿ ಲಸಿಕೆ ಪ್ರಮಾಣವನ್ನು, 35.6 ಕೋಟಿಗಳನ್ನು ಈಗಾಗಲೇ ಒದಗಿಸಲಾಗಿದೆ. ಒಟ್ಟಾರೆ 17.8 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಈ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು, ದೇಶದ ಎಲ್ಲರಿಗೂ ಲಸಿಕೆ ನೀಡಲು ಕನಿಷ್ಟ 272.26 ಕೋಟಿ ಡೋಸ್​ಗಳ ಅಗತ್ಯ ಇದೆ.

  ಹೊಸ ಉದಾರೀಕರಣ ನೀತಿಯ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಸಹ ಲಸಿಕೆಯನ್ನು ಖರೀದಿಸಿ ನೀಡುವ ಅವಕಾಶವನ್ನು ನೀಡಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಖಾಸಗಿ ಆಸ್ಪತ್ರೆಗಳಿಗೂ ಶೇ.50 ರಷ್ಟು ಜವಾಬ್ದಾರಿ ನೀಡಲಾಗಿದ್ದು, ಲಸಿಕೆ ಅಭಿಯಾನ ಮತ್ತಷ್ಟು ವೇಗ ಪಡೆಯಲಿದೆ.

  ಇದನ್ನೂ ಓದಿ: CoronaVaccine| ಎಲ್ಲರಿಗೂ ಲಸಿಕೆ ನೀಡಲು ವರ್ಷಾಂತ್ಯದೊಳಗೆ ಬೇಕಿದೆ 216 ಕೋಟಿ ಡೊಸೇಜ್​; ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ

  ಈಗ, ಜೂನ್ 21 ರಿಂದ ಜಾರಿಗೆ ಬರುವ ಹೊಸ ವ್ಯಾಕ್ಸಿನೇಷನ್ ನೀತಿಯಡಿಯಲ್ಲಿ, ತಯಾರಕರು ಉತ್ಪಾದಿಸುವ ಶೇ.75ರಷ್ಟು ಲಸಿಕೆಗಳನ್ನು ಸರ್ಕಾರ ಸಂಗ್ರಹಿಸುತ್ತದೆ ಮತ್ತು ಅವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವರ್ಗಾಯಿಸುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಡೋಸ್​ ನೀಡಲಾಗುವುದು. ಇದನ್ನು ಜನರಿಗೆ ಉಚಿತವಾಗಿ ನೀಡಲಾಗುವುದು

  ಎಲ್ಲಾ ವಯಸ್ಕ ಭಾರತೀಯರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ ಮತ್ತು ಡಿಸೆಂಬರ್ ನಡುವೆ 135 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ಸಂಗ್ರಹಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುವುದು" ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ತನ್ನ ಅಫಿಡವಿಟ್​ನಲ್ಲಿ ತಿಳಿಸಿದೆ.
  Published by:MAshok Kumar
  First published: