ಮಂಗಳೂರಲ್ಲಿ ಕೊರೋನಾ ಗೆದ್ದ ಒಬ್ಬೊಬ್ಬ ಜನರದ್ದೂ ಕರುಣಾಜನಕ ಕಥೆ

ಇವರು ಗುಣಮುಖರಾದರೂ ಕೂಡ ಇವರಲ್ಲಿ ನೋವು ಹೋಗಿಲ್ಲ. ಸಾವಿನ ಕ್ಷಣ ಕಣ್ಣಂಚಿನಲ್ಲೇ ಇದೆ. ತಮ್ಮವರು ಮೃತಪಟ್ಟರೂ ಅವರ ಮುಖವನ್ನು ನೋಡಲು ಸಾಧ್ಯವಾಗದ ನೋವಿದೆ.

news18-kannada
Updated:May 23, 2020, 1:08 PM IST
ಮಂಗಳೂರಲ್ಲಿ ಕೊರೋನಾ ಗೆದ್ದ ಒಬ್ಬೊಬ್ಬ ಜನರದ್ದೂ ಕರುಣಾಜನಕ ಕಥೆ
ಕೊರೋನಾ ಗೆದ್ದು ಬಂದ ಮಂಗಳೂರಿನ ಅಜ್ಜ ಮತ್ತು ಮೊಮ್ಮಗಳು
  • Share this:
ಮಂಗಳೂರು: ಕರಾವಳಿಯಲ್ಲಿ ಕೊರೊನಾ‌ ಅಟ್ಟಹಾಸ ಮೆರೆಯುತ್ತಿದೆ. ಈ ಮದ್ಯೆ ಒಂದಿಷ್ಟು ಜನರು ಕೊರೋನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಆದ್ರೆ ಆ ಹೋರಾಟ ಅಂತಿಂಥದ್ದಲ್ಲ. ನೀವು ಈ  ಚಿತ್ರದಲ್ಲಿ ನೋಡುತ್ತಿರುವ ಇವರು ಅಕ್ಷರಶಃ ನರಕ ನೋಡಿ ಬಂದವರು. ಸಾವಿನೊಂದಿಗೆ ಸೆಣಸಿ ಬಂದವರು. ತಮ್ಮವರನ್ನು ಕಳೆದುಕೊಂಡರೂ ಅದಕ್ಕೆ ಕುಗ್ಗದೇ ಕೊರೋನ ವಿರುದ್ಧ ಹೋರಾಡಿ ಗೆದ್ದವರು. 

ಇವರ ಕಥೆ ಕೇಳಿದರೆ ಮನಸ್ಸು ಕರಗದೇ ಇರಲ್ಲ. 3-4 ದಿನಗಳ ಹಿಂದೆ ಕೊರೋನಾದಿಂದ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ನಾಲ್ವರು ವ್ಯಕ್ತಿಗಳು ಸಾವಿನ ಕದ ತಟ್ಟಿ ಬಂದವರು. ಅಲ್ಲದೇ ಭಯದಲ್ಲಿ ಕುಗ್ಗದೇ ಒದ್ದಾಡಿ ಗುಣಮುಖರಾದವರು ಇವರು. ಚಿತ್ರದಲ್ಲಿರುವ ಅಜ್ಜ ಮತ್ತು ಮೊಮ್ಮಗಳನ್ನು ನೋಡಿ. ಈ ಅಜ್ಜ ಮತ್ತು ಮೊಮ್ಮಗಳು ಮಂಗಳೂರಿನ ಬೋಳೂರು ನಿವಾಸಿಗಳು. ಇವರಿಬ್ಬರು ಸದ್ಯ ಡಿಸ್ಚಾರ್ಜ್ ಆಗಿ ಬಂದಿದ್ದು ಇವರಿಗೆ ಬೋಳೂರಿನಲ್ಲಿ ಪ್ರೀತಿಯ ಸ್ವಾಗತ ಸಿಕ್ಕಿದೆ.

ಇವರು ಗುಣಮುಖರಾದರೂ ಕೂಡ ಇವರಲ್ಲಿ ನೋವು ಹೋಗಿಲ್ಲ. ಸಾವಿನ ಕ್ಷಣ ಕಣ್ಣಂಚಿನಲ್ಲೇ ಇದೆ. ತಮ್ಮವರು ಮೃತಪಟ್ಟರೂ ಅವರ ಮುಖವನ್ನು ನೋಡಲು ಸಾಧ್ಯವಾಗದ ನೋವಿದೆ. ಈ ವೃದ್ಧನ ಪತ್ನಿ ಮತ್ತು ಪತ್ನಿಯ ತಾಯಿ ಇಬ್ಬರು ಕೂಡ ಕೊರೋನಾಗೆ ಬಲಿಯಾದವರು. ಈ 11 ವರ್ಷದ ಬಾಲಕಿ ತನ್ನ ಅಜ್ಜಿ ಮತ್ತು ಮುತ್ತಜ್ಜಿಯ ಪ್ರೀತಿಯ ಮೊಮ್ಮಗಳು. ತನ್ನ ಅಜ್ಜಿ ಮತ್ತು ಮುತ್ತಜ್ಜಿಯನ್ನು ಕೊರೊನಾ ಬಲಿ ಪಡೆದು ಇಡೀ ಮನೆ ಮಂದಿಗೆಲ್ಲಾ ವಕ್ಕರಿಸಿತ್ತು. ಆದ್ರಿಂದ ಅಜ್ಜಿ ಮತ್ತು ಮುತ್ತಜ್ಜಿಯ ಅಂತಿಮ ದರ್ಶನವನ್ನು ಮಾಡಲು ಈ ಹುಡುಗಿಗೆ ಸಾಧ್ಯವಾಗಿರಲಿಲ್ಲ.

ಈ ಬಾಲಕಿಯ ತಂದೆ ತಾಯಿ ಇನ್ನೂ ಕೂಡ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ಮನೆ ಈಗ ಖಾಲಿ ಖಾಲಿ. ಅಜ್ಜ ಮತ್ತು ಮೊಮ್ಮಗಳು ಮಾತ್ರ ಈಗ ಮನೆಯಲ್ಲಿದ್ದು ನೋವಿನಲ್ಲೇ ಹೋಂ ಕ್ವಾರಂಟೈನ್ ಆಗಿದ್ದಾರೆ. ಆದ್ರೆ ಈ ಎಲ್ಲಾ ನೋವಿನ ಮಧ್ಯೆ ಸಮಾಧಾನಕರ ಸಂಗತಿ ಅಂದ್ರೆ ಇವರು ಕೊರೋನ ವಿರುದ್ಧ ಜಯಿಸಿ ಬಂದಿದ್ದಾರೆ. ಮನಸಿಗೆ ಎಷ್ಟೇ ಘಾಸಿಯಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸಿ ಕೊರೊನದಿಂದ ಮುಕ್ತಿ ಪಡೆದಿದ್ದಾರೆ.

ಇದನ್ನೂ ಓದಿ: Online Seva - ದೇವಸ್ಥಾನಗಳ ಆನ್​ಲೈನ್ ಸೇವೆಗಳಿಗೆ ಆಕ್ಷೇಪ ಬೇಡ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಅತ್ತ, ಬಂಟ್ವಾಳದ 16 ವರ್ಷದ ಬಾಲಕಿ ಕೂಡ ಡಿಸ್ಚಾರ್ಜ್ ಆಗಿದ್ದಾಳೆ. ಈಕೆ ಕೊರೊನಾದಿಂದ ತನ್ನ ತಾಯಿಯನ್ನೇ ಕಳೆದುಕೊಂಡವಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮೊದಲು ಬಲಿಯಾದ 42 ವರ್ಷದ ಮಹಿಳೆಯ ಮಗಳು. ಈಕೆ ಕೂಡ ತನ್ನ ತಾಯಿಯನ್ನು ಕಳೆದುಕೊಂಡರೂ ಕುಗ್ಗದೆ ಕೊರೋನಾ ವಿರುದ್ಧ ಹೋರಾಡಿ ಗೆದ್ದಿದ್ದಾಳೆ.

ಇನ್ನು ಬಂಟ್ವಾಳದ 70 ವರ್ಷದ ವೃದ್ಧನಿಗೆ ಬಂಟ್ವಾಳದ ಇಬ್ಬರು ಮೃತ ಮಹಿಳೆಯರು ಸಂಬಂಧಿಕರು. ಇಬ್ಬರ ಸಾವನ್ನು ನೋಡಿದ ಈ ವೃದ್ಧನಿಗೆ ಕೊರೋನಾ ವಕ್ಕರಿಸಿಕೊಂಡಿತ್ತು. ಆದ್ರೆ ತನ್ನ ಇಳಿ ವಯಸ್ಸಿನಲ್ಲೂ ಮಾನಸಿಕವಾಗಿ ಕುಗ್ಗದೇ ಡಿಸ್ಚಾರ್ಜ್ ಆಗಿದ್ದಾರೆ.ಕೊರೊನ ಆತಂಕದ ಮಧ್ಯೆ ಇವೆಲ್ಲಾ ಸ್ವಲ್ಪ ರಿಲೀಫ್ ಅನಿಸುವ ವಿಷಯಗಳು ಇವು. ಆದ್ರೆ ಇಲ್ಲಿ ಗುಣಮುಖರಾದವರಿಗೆ ಕೊರೋನಾ ಕೊಟ್ಟ ಆಘಾತದಿಂದ ಹೊರ ಬರಲು ಅದೆಷ್ಟು ದಿನಗಳು ಬೇಕಾಗುತ್ತದೋ ಗೊತ್ತಿಲ್ಲ. ಇಲ್ಲಿ ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಕೊರೊನ ವಿರುದ್ಧ ಜಯಿಸಲು ಎಷ್ಟು ಹೋರಾಡಿದರೂ ಅಷ್ಟೇ ಪರಿಶ್ರಮ ವೈದ್ಯರದ್ದೂ ಇದೆ. ಪೊಲೀಸರು ಸೇರಿದಂತೆ ಕೊರೊನಾ ವಾರಿಯರ್​ಗಳ ಬೆವರಿದೆ. ಈ ಸಂದರ್ಭದಲ್ಲಿ ಕೊರೊನ ವಾರಿಯರ್ಸ್​ಗೆ ಒಂದು ಸಲಾಂ ಹೇಳಲೇಬೇಕು.

First published: May 23, 2020, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading