ನೊಂದ ಭಾರತಕ್ಕೆ ಬಲ ತುಂಬಿದ ದೊಡ್ಡಣ್ಣ; ಅಗತ್ಯ ವಸ್ತುಗಳನ್ನು ವಿಮಾನಗಳಲ್ಲಿ ತುಂಬಿ ಕಳುಹಿಸಿದ ಅಮೆರಿಕ!

ಇಂದು ಅಮೆರಿಕ ತುರ್ತು ಪರಿಹಾರ ಸಾಮಗ್ರಿಗಳ ಮೊದಲನೆಯ ಕಂತನ್ನು ಭಾರತಕ್ಕೆ ರವಾನೆ ಮಾಡಿದೆ.  ಟ್ರಾವಿಸ್ ವಾಯುನೆಲೆಯಿಂದ ವಿಶ್ವದ ಅತಿದೊಡ್ಡ ಸೇನಾ ವಿಮಾನದಲ್ಲಿ ನವದೆಹಲಿಗೆ ಆಗಮಿಸಲಿರುವ ಈ ಪರಿಹಾರ ಸಾಮಾಗ್ರಿಗಳಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳು ಮತ್ತು ನಿಯಂತ್ರಕಗಳು ಸೇರಿವೆ.

ಭಾರತಕ್ಕೆ ಅಮೆರಿಕದ ನೆರವು

ಭಾರತಕ್ಕೆ ಅಮೆರಿಕದ ನೆರವು

  • Share this:
ನವದೆಹಲಿ: ಕೊರೋನಾ 2ನೇ ಅಲೆಯಿಂದ ಭಾರತ ನರಳುತ್ತಿದೆ. ಊಹೆಗೂ ಮೀರಿದ ಸೋಂಕಿತರಿಂದ ಭಾರತದ ವೈದ್ಯಕೀಯ ಕ್ಷೇತ್ರ ತಲ್ಲಣಗೊಂಡಿದೆ. ಆಕ್ಸಿಜನ್​ ಸಮಸ್ಯೆ ಬೃಹದಾಕಾರವಾಗಿ ಬೆಳೆದು ದೇಶವಾಸಿಗಳು ಉಸಿರುಗಟ್ಟಿಸುತ್ತಿದೆ. ಭಾರತದ ಸ್ಥಿತಿ ಕಂಡು ಇಡೀ ವಿಶ್ವವೇ ಮರುಗುತ್ತಿದ್ದು, ಭಾರತದ ಅತ್ಯಾಪ್ತ ಸ್ನೇಹಿತ ಅಮೆರಿಕ ನೆರವಿನ ಹಸ್ತ ಚಾಚಿದೆ. ಭಾರತಕ್ಕೆ ತುರ್ತಾಗಿ ಬೇಕಾಗಿರುವ ವೈದ್ಯಕೀಯ ನೆರವನ್ನು ವಿಶ್ವದ ದೊಡ್ಡಣ್ಣ ಕಳುಹಿಸಿದೆ. ಈ ಬಗ್ಗೆ ಯುಎಸ್​ ಭಾರತದ ರಾಯಭಾರ ಕಚೇರಿ ಟ್ವೀಟ್​ ಮೂಲಕ ಸಂತಸ ಹಂಚಿಕೊಂಡಿದೆ. 70 ವರ್ಷಗಳ ಸ್ನೇಹದ ಸಂಕೇತವಾಗಿ ಅಮೆರಿಕ ನಮಗೆ ನೆರವಾಗುತ್ತಿದೆ. ವೈದ್ಯಕೀಯ ಸಾಮಗ್ರಿಗಳುಳ್ಳ ವಿಮಾನ ಭಾರತಕ್ಕೆ ತೆರಳಿದಿ ಎಂದು ತಿಳಿಸಿದ್ದಾರೆ.  

ಕೊರೋನಾ ಎರಡನೇ ಅಲೆಯ ವಿರುದ್ಧ ಭಾರತವು ಹೋರಾಡುತ್ತಿರುವಾಗ ಅಮೆರಿಕ ಭಾರತದೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಂತಿದೆ. ತುರ್ತು ಪರಿಹಾರವನ್ನು ಒದಗಿಸಲು 100 ದಶ ಲಕ್ಷ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಅಮೆರಿಕ ಸರಬರಾಜು ಮಾಡುತ್ತಿದೆ.  ಇದಲ್ಲದೆ, ಅಮೆರಿಕದ ವಿವಿಧ ರಾಜ್ಯ ಸರ್ಕಾರಗಳು, ಖಾಸಗಿ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾವಿರಾರು ಅಮೆರಿಕನ್ನರು ಭಾರತದಲ್ಲಿ ಈ ಆರೋಗ್ಯ ಬಿಕ್ಕಟ್ಟನ್ನು ಸುಧಾರಿಸಲು ನೆರವಾಗುತ್ತಿವೆ. ಭಾರತೀಯ ಆಸ್ಪತ್ರೆಗಳಿಗೆ ಅಗತ್ಯವಾದ ಆಮ್ಲಜನಕ, ಅದಕ್ಕೆ ಬೇಕಾದ ಉಪಕರಣಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ತಲುಪಿಸಲಿವೆ. ಅಮೆರಿಕ ಸರ್ಕಾರದ ನೆರವು ಹೊತ್ತ ವಿಮಾನಗಳು ಇಂದು ಭಾರತಕ್ಕೆ ಬಂದಿಳಿಯಲಿವೆ.

ಅಮೆರಿಕ ಯಾವೆಲ್ಲಾ ನೆರವುಗಳನ್ನು ಕಳುಹಿಸುತ್ತಿದೆ?

ಆಮ್ಲಜನಕದ ಬೆಂಬಲ: ಭಾರತದಲ್ಲಿ 1,100 ಆಕ್ಸಿಜನ್ ಸಿಲಿಂಡರ್‌ಗಳ ಆರಂಭಿಕ ವಿತರಣೆ. ಈ ಸಿಲಿಂಡರ್ಗಳನ್ನು ಭಾರತದಲ್ಲೇ ಉಳಿಸಲಾಗುತ್ತದೆ. ಸ್ಥಳೀಯ ಪೂರೈಕೆ ಕೇಂದ್ರಗಳಲ್ಲಿ ಈ ಸಿಲಿಂಡರ್ ಗಳ ರೀಫಿಲ್​​ ಮಾಡಬಹುದು. ಇನ್ನೂ ಹೆಚ್ಚಿನ ಸಿಲಿಂಡರ್ ಗಳನ್ನು ಹೊತ್ತ ವಿಮಾನಗಳು ಮುಂದಿನ ದಿನಗಳಲ್ಲಿ ಬರಲಿವೆ. ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಅಮೆರಿಕದಲ್ಲಿ ಸ್ಥಳೀಯವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದು ಅವುಗಳನ್ನು ಭಾರತ ಸರ್ಕಾರದ ಸಮನ್ವಯದೊಂದಿಗೆ ಆರೋಗ್ಯ ವ್ಯವಸ್ಥೆಗೆ ತಲುಪಿಸುತ್ತದೆ.

ಆಮ್ಲಜನಕ ಸಾಂದ್ರಕಗಳು: ವಾತಾವರಣದ ಗಾಳಿಯಿಂದ ಆಮ್ಲಜನಕವನ್ನು ಉತ್ಪಾದಿಸಿಕೊಳ್ಳಲು 1700 ಆಮ್ಲಜನಕ ಸಾಂದ್ರಕಗಳು ಸಹಾಯಕವಾಗುತ್ತವೆ. ಈ ಸಂಚಾರಿ  ಘಟಕಗಳು ರೋಗಿಯ ಚಿಕಿತ್ಸೆಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತವೆ.

ಆಮ್ಲಜನಕ ಉತ್ಪಾದನಾ ಘಟಕಗಳು (ಪಿಎಸ್‌ಎ ಸಿಸ್ಟಮ್ಸ್): ತಲಾ 20 ರೋಗಿಗಳಿಗೆ ಸಹಾಯಕವಾಗಬಲ್ಲ ಇವು ಬಹು ದೊಡ್ಡ- ಪ್ರಮಾಣದ ಘಟಕಗಳು ಹಾಗೂ ಹೆಚ್ಚುವರಿ ಸಂಚಾರಿ ಘಟಕಗಳು ನಿರ್ದಿಷ್ಟ ಕೊರತೆಗಳನ್ನು ನೀಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅಮೆರಿಕನ್ ತಜ್ಞರ ತಂಡವು ಭಾರತದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೂಡಿ ಕೆಲಸ ಮಾಡುತ್ತಾ ಈ ಘಟಕಗಳನ್ನು ಕಾರ್ಯತತ್ಪರತೆ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಾರೆ.

ವೈಯಕ್ತಿಕ ರಕ್ಷಣಾ ಸಾಧನಗಳು: ರೋಗಿಗಳು ಮತ್ತು ಭಾರತೀಯ ಆರೋಗ್ಯ ಸಿಬ್ಬಂದಿಯನ್ನು ರಕ್ಷಿಸಲು 15 ದಶಲಕ್ಷ ಎನ್ 95 ಮಾಸ್ಕ್‌

ಲಸಿಕೆ-ಉತ್ಪಾದನಾ ಸಾಮಗ್ರಿ ಸರಬರಾಜು: ಅಮೆರಿಕ ತನಗಾಗಿ ಬಳಕೆಗಾಗಿ ಆರ್ಡರ್ ಮಾಡಿದ್ದ ಅಸ್ಟ್ರಾ ಜೆನೆಕಾ ಲಸಿಕೆಯ ಸರಬರಾಜುಗಳನ್ನು ಭಾರತಕ್ಕೆ ನೀಡುತ್ತಿದೆ. ಇದರಿಂದ ಭಾರತಕ್ಕೆ 20 ಮಿಲಿಯನ್ ಡೋಸ್ COVID-19 ಲಸಿಕೆ ತಯಾರಿಸಲು ಅನುವಾಗುತ್ತದೆ.

ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು (ಆರ್‌ಡಿಟಿಗಳು): 1 ಮಿಲಿಯನ್ ಕ್ಷಿಪ್ರ ರೋಗನಿರ್ಣಯ ಪರೀಕ್ಷೆಗಳು - ಶ್ವೇತಭವನದಲ್ಲಿ ಬಳಸುವ ಮಾದರಿಯನ್ನೇ ಭಾರತಕ್ಕೂ ನೀಡಲಾಗುತ್ತಿದೆ. ಈ ಪರೀಕ್ಷೆಗಳು 15 ನಿಮಿಷದಲ್ಲೇ ವಿಶ್ವಾಸಾರ್ಹ  ಫಲಿತಾಂಶಗಳನ್ನು ನೀಡಬಲ್ಲವಾಗಿದ್ದು,  ಸಮುದಾಯ ಹರಡುವಿಕೆಯನ್ನು ಗುರುತಿಸಿ, ತಡೆಯಲು ಸಹಾಯಕವಾಗುತ್ತವೆ.

ಚಿಕಿತ್ಸಕಗಳು: ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಆಂಟಿವೈರಲ್ ಡ್ರಗ್ ರಿಮೆಡೆಸಿವಿರ್‌ನ 20,000 ಚಿಕಿತ್ಸಾ ಕೋರ್ಸ್‌ಗಳ ಮೊದಲ ಕಂತು ಸರಬರಾಜು ಮಾಡಲಾಗಿದೆ.

ಸಾರ್ವಜನಿಕ ಆರೋಗ್ಯ ನೆರವು: ಅಮೆರಿಕದ ಸಿಡಿಸಿ ತಜ್ಞರು ಈ ಕೆಳಗಿನ ಕ್ಷೇತ್ರಗಳಲ್ಲಿ ಭಾರತದ ತಜ್ಞರೊಂದಿಗೆ ಕೈ ಜೋಡಿಸುತ್ತಾರೆ: ಪ್ರಯೋಗಾಲಯ, ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಜೀನೋಮಿಕ್ ಸೀಕ್ವೆನ್ಸಿಂಗ್ ಮತ್ತು ಮಾಡೆಲಿಂಗ್‌ಗಾಗಿ ಬಯೋಇನ್ಫರ್ಮ್ಯಾಟಿಕ್ಸ್, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಲಸಿಕೆ ವಿತರಣೆ  ಪ್ರಕ್ರಿಯೆ, ಹಾಗೂ ಅಪಾಯಗಳ ಕುರಿತ ಸಂವಹನ ಕ್ಷೇತ್ರಗಳಲ್ಲಿ ನೆರವು.

ಅಧ್ಯಕ್ಷ ಜೋ ಬೈಡೆನ್ 2021 ರ ಏಪ್ರಿಲ್ 26 ರಂದು ವಾಗ್ದಾನ ನೀಡಿದಂತೆ, ಅಮೆರಿಕವು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮೂಲಕ, ಭಾರತೀಯರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲು, ಜೀವಗಳನ್ನು ಉಳಿಸಲು, COVID-19 ಹರಡುವುದನ್ನು ನಿಲ್ಲಿಸಲು ಸಹಾಯವನ್ನು ಕ್ಷಿಪ್ರವಾಗಿ ಕ್ರೋಢೀಕರಿಸುತ್ತಿದೆ.

ಇಂದು ಅಮೆರಿಕ ತುರ್ತು ಪರಿಹಾರ ಸಾಮಗ್ರಿಗಳ ಮೊದಲನೆಯ ಕಂತನ್ನು ಭಾರತಕ್ಕೆ ರವಾನೆ ಮಾಡಿದೆ.  ಟ್ರಾವಿಸ್ ವಾಯುನೆಲೆಯಿಂದ ವಿಶ್ವದ ಅತಿದೊಡ್ಡ ಸೇನಾ ವಿಮಾನದಲ್ಲಿ ನವದೆಹಲಿಗೆ ಆಗಮಿಸಲಿರುವ ಈ ಪರಿಹಾರ ಸಾಮಾಗ್ರಿಗಳಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳು ಮತ್ತು ನಿಯಂತ್ರಕಗಳು ಸೇರಿವೆ. ಇದನ್ನು ಕ್ಯಾಲಿಫೋರ್ನಿಯಾ ರಾಜ್ಯ ದೇಣಿಗೆ ನೀಡಿದೆ. ಈ ಮೊದಲ ಹಾರಾಟದಲ್ಲಿ, USAID 960,000 ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಕಿಟ್‌ಗಳೂ ಸೇರಿವೆ. ಇವು ಸೋಂಕುಗಳನ್ನು ಗುರುತಿಸಲು ಹಾಗೂ COVID-19 ನ ಸಮುದಾಯ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಕೊರೋನಾ ವಾರಿಯರ್ಸ್​​ನ ರಕ್ಷಿಸಲು 100,000 N95 ಮಾಸ್ಕ್‌ ಸೇರಿವೆ.

ಅಮೆರಿಕ 70 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಜನರೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತಿದೆ. COVID-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಮೆರಿಕ ಭಾರತದೊಂದಿಗೆ ಒಟ್ಟಾಗಿ ಹೋರಾಡಲಿದೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅಮೆರಿಕನ್ ಆಸ್ಪತ್ರೆಗಳು ತೊಂದರೆಗೊಳಗಾದಾಗ ಭಾರತವು ಅಮೆರಿಕಕ್ಕೆ ಸಹಾಯವನ್ನು ಕಳುಹಿಸಿದಂತೆಯೇ, ಅಮೆರಿಕವು ಈಗ ಭಾರತಕ್ಕೆ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡುತ್ತಿದೆ.
Published by:Kavya V
First published: