Ramadan 2020: ಇಂದಿನಿಂದ ಭಾರತದಲ್ಲಿ ಪವಿತ್ರ ರಂಜಾನ್ ಉಪವಾಸ ಆಚರಣೆ ಆರಂಭ

Eid-Al-Fitr: ವರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ ಉಪವಾಸ ಇರುವ ಬಾಂಧವರು ಈ ಸಮಯದಲ್ಲಿ ಬಡವರಿಗೆ ದಾನ ಧರ್ಮ ಮಾಡೋದು ಪ್ರತೀತಿ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು (ಜೂನ್.05); ಭಾರತದಲ್ಲಿ ಇಂದಿನಿಂದ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ತಿಂಗಳ ಉಪವಾಸ ಆರಂಭವಾಗಿದೆ. ಮುಸ್ಲಿಂ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಆಚರಿಸಲಾಗುವುದು ಅದರಂತೆ ಇಂದಿನಿಂದ ಭಾರತದಲ್ಲಿ ರಂಜಾನ್ ಆಚರಣೆ ಆರಂಭವಾಗಿದೆ.

ವರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ ಉಪವಾಸ ಇರುವ ಬಾಂಧವರು ಈ ಸಮಯದಲ್ಲಿ ಬಡವರಿಗೆ ದಾನ ಧರ್ಮ ಮಾಡೋದು ಪ್ರತೀತಿ. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರೋಜಾ ಆಚರಣೆ ಮಾಡುತ್ತಾರೆ. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸುತ್ತಾರೆ. ಅನಾಥರು, ದುರ್ಬಲರ ಕಷ್ಟ ಕಾರ್ಪಣ್ಯಗಳ ಮನವರಿಕೆ ಮಾಡುವುದು ಉಪವಾಸದ ಉದ್ದೇಶ.

ಅರೇಬಿಕ್ ನುಡಿಗಟ್ಟುಗಳ ಪ್ರಕಾರ “ರಂಜಾನ್ ಕರೀಮ್” ಎಂದರೆ ದೇವರ ಆಶೀರ್ವಾದ ಮತ್ತು ಸಂತೋಷದಿಂದ ರಂಜಾನ್ ಹಬ್ಬವನ್ನು ಆನಂದಿಸುವುದಾಗಿದೆ. ಭಾರತದಲ್ಲಿ ಪವಿತ್ರ ರಂಜಾನ್ ಅರ್ಧ ಚಂದ್ರಾಕೃತಿಯ ದೃಶ್ಯವನ್ನು ಅವಲಂಬಿಸಿರುತ್ತದೆ. ಹೀಗೆ ಆರಂಭವಾಗುವ ರಂಜಾನ್ ಅನ್ನು ನಾಲ್ಕು ವಾರಗಳವರೆಗೆ ಆಚರಿಸಲಾಗುತ್ತದೆ. ಆದರೆ, ಕೊರೋನಾ ಮತ್ತು ಲಾಕ್‌ಡೌನ್ ನಡುವೆ ಈ ವರ್ಷದ ರಂಜಾನ್ ಹಬ್ಬ ಮುಸ್ಲಿಮರ ಪಾಲಿಗೆ ಸರಳವಾಗಿರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಸರ್ಕಾರದ ರಂಜಾನ್ ನಿರ್ಬಂಧಗಳು ಮುಸ್ಲಿಮರನ್ನೇ ಗುರಿ ಮಾಡಿದಂತಿವೆ: ಬಿ.ಎಂ. ಫಾರೂಕ್
First published: