HOME » NEWS » Coronavirus-latest-news » EDUCATION MINISTER SURESH KUMAR SAYS CORONA VIRUS COME WHEN WE INVITE THAT VCTV LG

ನಾವು ಆಹ್ವಾನ ಕೊಟ್ಟರೆ ಮಾತ್ರ ಕೊರೋನಾ ವೈರಸ್ ನಮ್ಮ ಬಳಿ ಬರುತ್ತೆ; ಸಚಿವ ಸುರೇಶ್ ಕುಮಾರ್​​

ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ. ಕಳೆದ ಬಾರಿಯೂ ಕೊರೋನಾ ಮಧ್ಯೆಯೇ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದೇವೆ. ಈ ಭಾರಿಯೂ ಪರೀಕ್ಷೆ ನಿಗದಿ ದಿನಾಂಕದಂದೇ ನಡೆಸಲು ನಿರ್ಧರಿಸಿದ್ದೇವೆ ಎಂದು ಪ್ರಾರ್ಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

news18-kannada
Updated:April 18, 2021, 11:24 AM IST
ನಾವು ಆಹ್ವಾನ ಕೊಟ್ಟರೆ ಮಾತ್ರ ಕೊರೋನಾ ವೈರಸ್ ನಮ್ಮ ಬಳಿ ಬರುತ್ತೆ; ಸಚಿವ ಸುರೇಶ್ ಕುಮಾರ್​​
ಸಚಿವ ಸುರೇಶ್ ಕುಮಾರ್.
  • Share this:
ಚಿಕ್ಕಮಗಳೂರು(ಏ.18): ನಾವ್ಯಾರು ಸ್ವಾತಂತ್ರ್ಯ ಪೂರ್ವದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ. ಬ್ರಿಟಿಷರ ವಿರುದ್ಧ ಚಳುವಳಿಯಲ್ಲಿ ಭಾಗವಹಿಸದ ನಮಗೆ ಈಗ ಅವಕಾಶ ಸಿಕ್ಕಿದೆ. ನಾವೆಲ್ಲಾ ಕೊರೋನಾ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ನಜೀರ್ ಸಾಭ್ ಸಂಭಾಗಣದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಮಕ್ಕಳಿಗಾಗಿ ಪ್ರಶ್ನಾಕೋಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪತಿಯ ಶವ ಒಂದು ಕೋಣೆಯಲ್ಲಿ, ಹೆಂಡತಿ ಹಾಲ್ ನಲ್ಲಿ ಇದ್ದಾರೆ. ಮೈಸೂರಿನಿಂದ ಬಂದ ಸಂಬಂಧಿ ಕಾರಿನಲ್ಲಿ ಮಲಗಿದ್ದಾರೆ. ಸಾವನ್ನಪ್ಪಿದವರ ಅಂತ್ಯಕ್ರಿಯೆ ಮಾಡಲು ಯಾರೂ ಇರಲಿಲ್ಲ. ಕೊನೆಗೆ ನಮ್ಮ ಹುಡುಗರೇ ಎಲ್ಲಾ ಕಾರ್ಯವನ್ನು ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿನ ಕೊರೋನಾ ಕರಾಳತೆಯನ್ನ ಬಿಚ್ಚಿಟ್ಟರು. ಕೊರೋನಾ ಒಂದು ಅಹಂಕಾರದ ವೈರಸ್. ಅದಾಗಿಯೇ ನಮ್ಮ ಬಳಿ ಬರೋದಿಲ್ಲ. ನಾವು ಆಹ್ವಾನ ಕೊಟ್ಟರೇ ಮಾತ್ರ  ನಮ್ಮ ಬಳಿ ಬರಲಿದೆ. ಜನ ಸೂಕ್ತ ಕ್ರಮಗಳನ್ನ ಅನುಸರಿಸಿದ್ರೆ ಲಾಕ್ ಡೌನ್ ಅವಶ್ಯಕತೆ ಇಲ್ಲ ಎಂದರು.

Coronavirus Updates: ದೇಶದಲ್ಲಿ ನಿನ್ನೆ ಎರಡೂವರೆ ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ

ಜನ ಎಸ್.ಎಂ.ಎಸ್ ಸೂತ್ರ ಅನುಸರಿಸಬೇಕು. ಎಸ್ ಅಂದ್ರೆ ಸ್ಯಾನಿಟೈಸ್, ಎಂ ಅಂದ್ರೆ ಮಾಸ್ಕ್ ಹಾಗೂ ಎಸ್ ಅಂದ್ರೆ ಸೋಶಿಯಲ್ ಡಿಸ್ಟೆನ್ಸ್ ಇದನ್ನ ಅನುಸರಿಸಿ ಎಂದು ಜನರಲ್ಲಿ ಮನವಿ ಮಾಡಿದರು.  ನಮಗೆ ಕೊರೋನಾ ಬರೋದಿಲ್ಲ ಅಂತ ಜನರು ಓಡಾಡುತ್ತಿದ್ದಾರೆ. ಯಾವುದೋ ಒಂದು ಸಾವು ನಮಗೆ ಸಂಖ್ಯೆ ಆಗಬಾರದು. ಆ ಮನೆಯ ದುಃಖ ನಮಗೆ ಅರ್ಥವಾಗಬೇಕು ಎಂದರು.

ಇದೇ ವೇಳೆ, 1 ರಿಂದ 9ನೇ ತರಗತಿವರೆಗಿನ ಪರೀಕ್ಷೆ ಕುರಿತಂತೆ ಮಾತನಾಡಿದ ಅವರು, 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ಮಾಡಬೇಕಾ, ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕಾ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಕರೆದು ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯ ಸ್ವೀಕರಿಸಿ ಒಂದು ಹಂತಕ್ಕೆ ಬಂದಿದ್ದೇವೆ. ಎರಡ್ಮೂರು ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನವನ್ನ ಪ್ರಕಟಿಸಲಿದೆ ಎಂದರು.

ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಸಲಾಗುವುದು. ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ. ಕಳೆದ ಬಾರಿಯೂ ಕೊರೋನಾ ಮಧ್ಯೆಯೇ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದೇವೆ. ಈ ಭಾರಿಯೂ ಪರೀಕ್ಷೆ ನಿಗದಿ ದಿನಾಂಕದಂದೇ ನಡೆಸಲು ನಿರ್ಧರಿಸಿದ್ದೇವೆ ಎಂದು ಪ್ರಾರ್ಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬೆಂಗಳೂರಲ್ಲಿ 8 ಜೋನ್ ಗಳಿದ್ದು, 8 ಜನ ಸಚಿವರು ಉಸ್ತುವಾರಿಗಳಿದ್ದೇವೆ, ಬೆಂಗಳೂರಲ್ಲಿ ಬೆಡ್ ತೊಂದರೆ ಯಾಕೆ ಬರುತ್ತಿದೆ ಅಂದರೆ ನಮ್ಮ ಪ್ರಕಾರ ಬೆಡ್ ಖಾಲಿ ಇರುತ್ತೆ, ಪೇಶೆಂಟ್ ಹೋದಾಗ ವಾಕಿಂಗ್ ಪೇಶೆಂಟ್ ಬಂದ್ರು ಸೇರಿಸಿಕೊಂಡ್ವಿ ಅಂತಾರೆ ಅಂತ ಆಸ್ಪತ್ರೆಯವರು ಹೇಳ್ತಾ ಇದ್ದಾರೆ. ಅದು ಸರಿನಾ ಸರಿ, ಅದು ತಪ್ಪಾ ತಪ್ಪು ಎರಡು ರೀತಿಯಲ್ಲಿ ನಾವು ಯೋಚನೆ ಮಾಡಬೇಕು, ಪ್ರತಿ ಆಸ್ಪತ್ರೆಗೆ ಓರ್ವ ನೊಡೆಲ್ ಅಧಿಕಾರಿಯನ್ನು ನೇಮಿಸಿದ್ದೇವೆ, ಅವರಿಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಗೊತ್ತಿರುತ್ತೆ, ಸರ್ಕಾರ-ಆಸ್ಪತ್ರೆ ಎರಡರಿಂದಲೂ ಅಧಿಕಾರಿ ಇರುತ್ತಾರೆ ಅದನ್ನ ಸ್ಥಳಿಯರ ಪೊಲೀಸ್ ಠಾಣೆಗೂ ರಿಪೋರ್ಟ್ ಮಾಡಲು ಸೂಚಿಸಿದ್ದೇವೆ. ಇನ್ನು ಎರಡು ದಿನದಲ್ಲಿ ಎಲ್ಲಾ ತಹಬದಿಗೆ ಬಂದು ಆಸ್ಪತ್ರೆಯ ಬೆಡ್ ಸಮಸ್ಯೆ ಬಗೆಹರಿಯುತ್ತೆ ಎಂದರು.
Published by: Latha CG
First published: April 18, 2021, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories