ಕೊರೋನಾ ಬಿಕ್ಕಟ್ಟಿಗೆ ಮಹತ್ವ ಹೆಚ್ಚಾಯಿತು; ಭಾರತದ ಆರ್ಥಿಕತೆ ಪುಟಿದೇಳುತ್ತೆ: ರಾಕೇಶ್ ​ಜುಂಜನ್​ವಾಲ

Rakesh Jhunjhunwala Interview - ಚೀನಾ ಜೊತೆ ಭಾರತ ಪೈಪೋಟಿ ಮಾಡಬೇಕಾದರೆ ಅದಕ್ಕೆ ಸೂಕ್ತವಾದ ಉದ್ಯಮ ವಾತಾವರಣ ನಿರ್ಮಿಸಬೇಕಿದೆ. ಸರ್ಕಾರ ಬಹಳ ಗಟ್ಟಿಯಾದ ರಾಜಕೀಯ ನಿರ್ಧಾರಗಳನ್ನ ಕೈಗೊಳ್ಳಬೇಕಿದೆ ಎಂದು ಝುನಝುನವಾಲ ಸಲಹೆ ನೀಡಿದ್ಧಾರೆ.

ರಾಕೇಶ್ ಝುನಝುನ್​ವಾಲ

ರಾಕೇಶ್ ಝುನಝುನ್​ವಾಲ

  • News18
  • Last Updated :
  • Share this:
ನವದೆಹಲಿ(ಜೂ. 01): ಕೊರೋನಾ ವೈರಸ್ ಒಂದು ಫ್ಲೂ ರೋಗ ಅಷ್ಟೇ. ಕೋವಿಡ್-19 ಬಗ್ಗೆ ಸುಮ್ಮನೆ ಭಯ ಸೃಷ್ಟಿಸಲಾಗುತ್ತಿದೆ. ಅದು ಬಿಂಬಿತಗೊಂಡಷ್ಟು ಅಪಾಯಕಾರಿಯಲ್ಲ. ಆದರೆ, ಜನರು ಈ ವೈರಸ್ ಜೊತೆಗೆ ಜೀವಿಸುವುದು ಅನಿವಾರ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಉದ್ಯಮಿ ರಾಕೇಶ್ ಝುನಝುನವಾಲ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ವೈರಸ್ ಸೋಂಕು ಹರಡದಂತೆ ನಿಗ್ರಹಿಸಲು ಕೇಂದ್ರ ಸರ್ಕಾರ ಕೈಗೊಂಡ ಲಾಕ್​ಡೌನ್ ಕ್ರಮವನ್ನು ಅವರು ಬೆಂಬಲಿಸಿದರಾದರೂ, ಕೊರೋನಾ ವೈರಸ್ ಬಗ್ಗೆ ಅಗತ್ಯಕ್ಕಿಂತ ಹೆಚ್ಚೇ ಮಹತ್ವ ಕೊಡಲಾಗಿದೆ ಎಂದೂ ಅಸಮಧಾನ ವ್ಯಕ್ತಪಡಿಸಿದರು.

ನ್ಯೂಸ್18 ಜೊತೆ ವಿಶೇಷ ಸಂದರ್ಶನ ನೀಡಿದ ಹೂಡಿಕೆದಾರ ಹಾಗೂ ಸ್ಟಾಕ್ ಮಾರ್ಕೆಟ್ ಕಿಂಗ್ ಎನಿಸಿದ ರಾಕೇಶ್ ಝುನ್​ಝುನ್​ವಾಲ, ಲಾಕ್​ಡೌನ್​ನಿಂದ ಜನರು ಭಾವಿಸಿದಷ್ಟು ಮಟ್ಟದಲ್ಲಿ ಪ್ರತಿಕೂಲ ಪರಿಣಾಮ ಆಗುವುದಿಲ್ಲ. ಜಿಡಿಪಿ ಪ್ರಗತಿ ನೆಗಟಿವ್ ಸ್ಥಿತಿಗೆ ಹೋಗಬಹುದಾದರೂ ಷೇರು ಮಾರುಕಟ್ಟೆಗೆ ಅಂಥ ದುಷ್ಪರಿಣಾಮ ಬೀರುವುದಿಲ್ಲ ಎಂದರು.

ಷೇರುಮಾರುಕಟ್ಟೆ ಇತ್ತೀಚೆಗೆ ಚೇತರಿಸಿಕೊಂಡಿದೆ. ಇದು ಹೊಸ ಷೇರು ಮಾರುಕಟ್ಟೆಯ ಪ್ರಾರಂಭವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅನಿಶ್ಚಿತತೆಯ ಸ್ಥಿತಿ ಈಗ ನಿಶ್ಚಿತವೆನಿಸಿರುವುದು ಹೌದು ಎಂದೂ ಒಪ್ಪಿಕೊಂಡರು.

ಇದನ್ನೂ ಓದಿ: ಕಾಶ್ಮೀರದಿಂದ ಲಡಾಕ್​ನತ್ತ ಭಾರತೀಯ ತುಕಡಿಗಳು; ಚೀನಾದಿಂದ ಮುಂದುವರಿದಿದೆ ಒತ್ತಡ ತಂತ್ರ

ಸರ್ಕಾರ ಈಗ ಕೆಲ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಆರ್ಥಿಕತೆಯನ್ನು ತೆರೆಯುವತ್ತ ಗಮನ ಹರಿಸಬೇಕಿದೆ. ಲಾಕ್​ಡೌನ್​ನಿಂದ ನಿರೀಕ್ಷಿತ ಆಘಾತ ಆಗಿರುವುದಿಲ್ಲ ಎಂದು ಭಾವಿಸಿದ್ದೇನೆ. ಸಂಘಟಿತ ವಲಯದಲ್ಲಿ ಎಷ್ಟು ಉದ್ಯೋಗ ನಷ್ಟವಾಗಿದೆ ಎಂದು ನೋಡಬೇಕಿದೆ. ಈ ವರ್ಷ ಜಿಡಿಪಿಗೆ ಹೊಡೆತ ಬೀಳುವುದು ಹೌದು. ಆದರೆ, ಆರ್ಥಿಕತೆ ಮತ್ತೆ ಪುಟಿದೇಳುತ್ತದೆ ಎಂದು ಝುನಝುನ್​ವಾಲ ವಿಶ್ವಾಸ ವ್ಯಕ್ತಪಡಿಸಿದರು.

ಚೀನಾ ಜೊತೆ ಭಾರತ ಪೈಪೋಟಿ ಮಾಡಬೇಕಾದರೆ ಅದಕ್ಕೆ ಸೂಕ್ತವಾದ ಉದ್ಯಮ ವಾತಾವರಣ ನಿರ್ಮಿಸಬೇಕಿದೆ. ಸರ್ಕಾರ ಬಹಳ ಗಟ್ಟಿಯಾದ ರಾಜಕೀಯ ನಿರ್ಧಾರಗಳನ್ನ ಕೈಗೊಳ್ಳಬೇಕಿದೆ. ಭೂಮಿ ಮತ್ತು ಕಾರ್ಮಿಕ ವಲಯದಲ್ಲಿ ಸುಧಾರಣೆ ಕ್ರಮ ಘೋಷಿಸಿದೆಯಾದರೂ ಆ ನಿಟ್ಟಿನಲ್ಲಿ ಸರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಬೇಸರ ವಕ್ತಪಡಿಸಿದ ಅವರು, ಕೃಷಿ ಹಾಗೂ ಗಣಿಗಾರಿಕೆಯಲ್ಲಿನ ಸುಧಾರಣೆಗಳನ್ನು ಸ್ವಾಗತಿಸಿದರು.

ಇದನ್ನೂ ಓದಿ: ಅಮೆರಿಕದ ವೈಟ್​ಹೌಸ್ ಎದುರು ಬೃಹತ್ ಪ್ರತಿಭಟನೆ; ಟ್ರಂಪ್​ಗೆ ಅಂಡರ್​ಗ್ರೌಂಡ್ ಬಂಕರ್ ರಕ್ಷಣೆ

ಯಾರು ಈ ರಾಕೇಶ್ ಝುನ್​ಝುನ್​ವಾಲ?

ಹೈದರಾಬಾದ್ ಸಂಜಾತ 59 ವರ್ಷದ ರಾಕೇಶ್ ಝುನಝುನ್​ವಾಲ ಅವರು ಬಹುಮುಖಿ ಉದ್ಯಮಿ. ಚಾರ್ಟರ್ಡ್ ಅಕೌಂಟೆಟ್ ಆಗಿರುವ ಅವರು ಅನೇಕ ಉದ್ಯಮಗಳ ಒಡೆಯ. ಸ್ಟಾಕ್ ಮಾರ್ಕೆಟ್ ವ್ಯವಹಾರದ ಕಿಂಗ್. ಭಾರತದ ಅತಿ ಶ್ರೀಮಂತ ಟಾಪ್-50 ಪಟ್ಟಿಯಲ್ಲಿ ಅವರಿದ್ದಾರೆ. ಶಿಕ್ಷಣ ಸಂಸ್ಥೆ, ಮಾಧ್ಯಮ, ಹಣಕಾಸು, ಕಟ್ಟಡ ನಿರ್ಮಾಣ, ಷೇರು ಮಾರುಕಟ್ಟೆ ಹೀಗೆ ನಾನಾ ಥರದ ಉದ್ಯಮಗಳಲ್ಲಿ ಅವರ ಛಾಪು ಇದೆ. ಕೆಲವರು ಅವರನ್ನ ಭಾರತದ ವಾರೆನ್ ಬಫೆಟ್ ಎಂದೂ ಕರೆಯುತ್ತಾರೆ.

First published: