HOME » NEWS » Coronavirus-latest-news » E COMMERCE ONLINE SHOPPING COMPANIES ALLOWED TO RESTART SELLING FROM MONDAY GNR

E Commerce: ಸೋಮವಾರದಿಂದ ಆನ್​ಲೈನ್​ ಶಾಪಿಂಗ್​ ಪುನರಾರಂಭ: ಕೇಂದ್ರ ಸರ್ಕಾರ ಅನುಮತಿ

ಇನ್ನು, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ. ಹಾಗಾಗಿಯೇ ಗೃಹ ಇಲಾಖೆ ಅಧಿಕಾರಿಗಳು ಇ-ಕಾಮರ್ಸ್​ ಸಂಸ್ಥೆಗಳ ಮೂಲಕ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಏ.20ರಿಂದ ಅವಕಾಶ ಮಾಡಿಕೊಟ್ಟಿದ್ದಾರೆ.

news18-kannada
Updated:April 17, 2020, 11:46 AM IST
E Commerce: ಸೋಮವಾರದಿಂದ ಆನ್​ಲೈನ್​ ಶಾಪಿಂಗ್​ ಪುನರಾರಂಭ: ಕೇಂದ್ರ ಸರ್ಕಾರ ಅನುಮತಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಏ.16): ಕೊರೋನಾ ವೈರಸ್​​ ತಹಬದಿಗೆ ಬಾರದ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಜಾರಿಯಲ್ಲಿದ್ದ ಲಾಕ್​​ಡೌನ್​​ ಅನ್ನು ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಮೇ 3ರವರೆಗೂ ವಿಸ್ತರಿಸಲಾಗಿದೆ. ಹಾಗಾಗಿ ಶಾಪಿಂಗ್​​ ಮಾಲ್​​ಗಳು, ಮುಂಬೈಲ್​​ ಸ್ಟೋರ್​​ಗಳು, ಇ-ಕಾಮರ್ಸ್​ ಸಂಸ್ಥೆಗಳು ಬಂದ್​ ಆಗಿವೆ. ಹಾಗಾಗಿ ಎಲೆಕ್ಟ್ರಾನಿಕ್​​​ ವಸ್ತುಗಳ ಮಾರಾಟವೇ ನಿಂತು ಆಗಿದೆ. ಆದರೀಗ, ಕೇಂದ್ರ ಸರ್ಕಾರವೂ ಇ-ಕಾಮರ್ಸ್​​ ಸಂಸ್ಥೆಗಳ ಮೂಲಕ ಮತ್ತೆ ಎಲೆಕ್ಟ್ರಾನಿಕ್​​ ಐಟಮ್ಸ್​ಗಳ ಮಾರಾಟಕ್ಕೆ ಅವಕಾಶ ನೀಡಿದೆ. ಇದೇ ಏಪ್ರಿಲ್​​​ 20ನೇ ತಾರೀಕಿನಿಂದ ಆನ್​​ಲೈನ್​​ ಮೂಲಕ ಜನ ತಮಗೆ ಅಗತ್ಯವಿರುವ ಎಲೆಕ್ಟ್ರಾನಿಕ್​​ ವಸ್ತುಗಳು ಪರ್ಚೇಸ್​​ ಮಾಡಬಹುದಾಗಿದೆ.

ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಇದೇ ತಿಂಗಳು 20ನೇ ತಾರೀಕಿನಿಂದ ಇ-ಕಾಮರ್ಸ್​​ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್​​​​​ಗಳಲ್ಲಿ ಮೊಬೈಲ್ ಫೋನ್​​,  ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಎರಡನೇ ಬಾರಿಗೆ ಲಾಕ್​​ಡೌನ್​ ಅವಧಿಯನ್ನು ಮೇ 3ರವರೆಗೂ ವಿಸ್ತರಿಸಿದ ನಂತರದಲ್ಲಿ ಕೇಂದ್ರ ಗೃಹ ಇಲಾಖೆ ಹೀಗೆ ಆದೇಶಿಸಿದೆ.

ಇನ್ನು, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ. ಹಾಗಾಗಿಯೇ ಗೃಹ ಇಲಾಖೆ ಅಧಿಕಾರಿಗಳು ಇ-ಕಾಮರ್ಸ್​ ಸಂಸ್ಥೆಗಳ ಮೂಲಕ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಏ.20ರಿಂದ ಅವಕಾಶ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಂದ ಕೊರೋನಾ ಬಂತು ಅನ್ನೋದು ತಪ್ಪು; ನಮಗೂ ತಬ್ಲಿಘಿ ಜಮಾತ್​​ಗೂ ಸಂಬಂಧವೇ ಇಲ್ಲ - ಮೊಹಮ್ಮದ್​ ಯೂಸುಫ್​​

ಇ-ಕಾಮರ್ಸ್​ ಸಂಸ್ಥೆಗಳ ಡೆಲಿವರಿ ವಾಹನಗಳ ಸಂಚಾರಕ್ಕೆ ಪೊಲೀಸರಿಂದ ಅನುಮತಿ ಪಡೆಯಬೇಕು. ಆಯಾ ರಾಜ್ಯಗಳ ಪೊಲೀಸ್​​ ಇಲಾಖೆಯಿಂದ ಪಾಸ್​ ಪಡೆದು ಎಲೆಕ್ಟ್ರಾನಿಕ್​​ ವಸ್ತುಗಳು ಮಾರಾಟ ಮಾಡಬಹುದಾಗಿದೆ.
Youtube Video
First published: April 16, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories