ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ‌ ಕಸದ ರಾಶಿ ; ತಿಲಕ್ ನಗರ ಪ್ರಮುಖ ರಸ್ತೆಯಲ್ಲಿಯೇ ಗಾರ್ಬೆಜ್

ಸಂಡೆ ಲಾಕ್ ಡೌನ್ ದಿನ ತಿಲಕ್‌ ನಗರ್ ಪ್ರಮುಖ ರಸ್ತೆ, ಪ್ರಮುಖ ವೃತ್ತಗಳಲ್ಲಿ ಕಸ ಬಿದ್ದಿತ್ತು‌. ಇದರ ಸಮೀಪದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆಯಿದೆ.‌ ಆದರೂ ಕಸ ಸ್ವಚ್ಛ ಮಾಡಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜುಲೈ.06): ಕೊರೋನಾ ಪಾಸಿಟಿವ್ ಪ್ರಕರಣ ದಿನನಿತ್ಯ ಸಾವಿರ ಗಡಿ ದಾಟುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆಯೂ ಶುರುವಾಗಿದೆ. ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ  ಶುಚಿತ್ವ ಕಾಪಾಡುವುದು ಬಹಳ ಮುಖ್ಯ. ಆದರೆ ಸಂಡೇ ಲಾಕ್ ಡೌನ್ ಎಫೆಕ್ಟ್ ಕಸದ ರಾಶಿ ರಾಶಿ ಕಾಣಿಸಿಗುತ್ತಿದೆ.

ಸಂಡೇ ಲಾಕ್ ಡೌನ್ ಎಫೆಕ್ಟ್ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ದೃಶ್ಯಗಳು ಕಣ್ಣಿಗೆ ರಾಜಿಸುತ್ತಿದೆ. ಪ್ರಮುಖ ರಸ್ತೆಯ ವೃತ್ತದಲ್ಲಿಯೇ ಕಸದ ರಾಶಿ ಇದೆ‌ ಇನ್ನು ಪ್ರಮುಖ ರಸ್ತೆಯ ಬದಿಯಲ್ಲಿಯೂ ರಾಶಿ ರಾಶಿ ಕಸ ಬಿದ್ದಿದೆ. ಇನ್ನು ಪ್ರಮುಖವಾಗಿ ಕಸದಲ್ಲಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಸಹ ಹೆಚ್ಚು ಪತ್ತೆಯಾಗುತ್ತಿದೆ. ಕಸದ ತೊಟ್ಟಿ ತುಂಬಿ ತುಳುಕುತ್ತಿದ್ದರೂ ಬಿಬಿಎಂಪಿ ಪೌರಕಾರ್ಮಿಕರು ಹೊತ್ತೊಯ್ಯುತ್ತಿಲ್ಲ. ಎರಡು ದಿನಕ್ಕೊಮ್ಮೆ ಕೆಲವೆಡೆ ಮಾತ್ರ ಕಸ ಎತ್ತುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಇನ್ನು ಸಂಡೇ ಲಾಕ್ ಡೌನ್ ಹಿನ್ನೆಲೆ ಕಸದ ರಾಶಿ ಇನ್ನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ಕಸದ ರಾಶಿ ಕಾಣಿಸಿಗುತ್ತಿದೆ.

ಸಂಡೆ ಲಾಕ್ ಡೌನ್ ದಿನ ತಿಲಕ್‌ ನಗರ್ ಪ್ರಮುಖ ರಸ್ತೆ, ಪ್ರಮುಖ ವೃತ್ತಗಳಲ್ಲಿ ಕಸ ಬಿದ್ದಿತ್ತು‌. ಇದರ ಸಮೀಪದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆಯಿದೆ.‌ ಆದರೂ ಕಸ ಸ್ವಚ್ಛ ಮಾಡಿಲ್ಲ. ಕಳೆದೊಂದು ವಾರದಿಂದ ರಸ್ತೆ ಮಧ್ಯೆ ಕಸದ ರಾಶಿ ಬಿದ್ದಿದೆ. ಇಂತಹ ಕಸದ ರಾಶಿಗೆ ಮತ್ತಷ್ಟು ಕಸ ಜನರು ಎಸೆಯುತ್ತಿರುವ ದೃಶ್ಯ ಸಂಡೇ ಲಾಕ್ ಡೌನ್ ದಿನ ಕಂಡು ಬಂದಿತು‌.

ಕಸ ಹೊತ್ತೊಯ್ಯುವ ವಾಹನ ತುಂಬಿದ್ದರೂ ಡೈರಿ ಸರ್ಕಲ್‌ನಲ್ಲಿ ಡಂಪ್ ಮಾಡಿದ್ದಿಲ್ಲ. ಮೂರು ಕಸ ವಾಹನಗಳು ಕಸದಿಂದ ತುಂಬಿದ್ದರೂ ಅಲ್ಲೇ ಇದ್ದವು.‌ ಇನ್ನು ಬನ್ನೇರುಘಟ್ಟ ರಸ್ತೆ ಬದಿ ಕಸದ ರಾಶಿ ಹಲವೆಡೆ ಬಿದ್ದಿತ್ತು. ಅದರ ಮಧ್ಯೆ ಅಗತ್ಯ ಸೇವೆಗೆ ಹೋಗುವ ಜನರು ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂದಿತು.

ಇದನ್ನೂ ಓದಿ : ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಗಂಡನಿಗೆ ಊಟ ಕೊಡಲು 6 ಕಿ. ಮೀ ನಡೆದುಕೊಂಡು ಬಂದ ಪೊಲೀಸ್ ಕಾನ್ಸ್​ಟೇಬಲ್​ ಹೆಂಡತಿ..!

ಕಳೆದೊಂದು ವಾರದಿಂದ ಕಸ ಹೀಗೆ ಬಿದ್ದಿದೆ. ರಸ್ತೆ ಮಧ್ಯೆ ಕಸ ಜನರು ಹಾಕಿದ್ದಾರೆ. ಹೋಗಲಿ ಇದನ್ನು ಬಿಬಿಎಂಪಿ ಸ್ವಚ್ಛ‌ ಮಾಡಿಲ್ಲ. ಪೌರಕಾರ್ಮಿಕರು ಎರಡು ದಿನಕ್ಕೊಮ್ಮೆ ಬರುತ್ತಾರೆ. ಕೆಲವೊಮ್ಮೆ ಬರುವುದಿಲ್ಲ. ಅಲ್ಲಿ‌ ಕೆಲಸ ಇಲ್ಲಿ ಕೆಲಸ‌ ಅಂತ ಇಲ್ಲಿಗೆ ಬರುವುದಿಲ್ಲ. ಹತ್ತಿರದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆಯಿದೆ. ಆದರೂ ಬಿಬಿಎಂಪಿ ಸ್ವಚ್ಛ‌ ಮಾಡಿಸುತ್ತಿಲ್ಲ ಎಂದು ತಿಲಕ್ ನಗರದ ಸ್ಥಳೀಯ ನಾಗರಿಕರಾದ ಅಸ್ಮತ್, ಷೇಕ್‌ ಅಫೀಸ್ ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನು ಬೆಂಗಳೂರು ಉತ್ತರದ ಹಲವು ಭಾಗಗಳಲ್ಲಿ ಪೌರ ಕಾರ್ಮಿಕರು ಕಸ ಸ್ವಚ್ಛ ಮಾಡಿದ್ದಿಲ್ಲ. ಯಶವಂತಪುರ, ಗೊರಗುಂಟೆ ಪಾಳ್ಯದಲ್ಲಿ ಗಾರ್ಬೆಜ್ ಹೆಚ್ಚಳವಾಗಿತ್ತು. ವಾಣಿಜ್ಯ ಮಳಿಗೆ ಹಾಗೂ ಮತ್ತಿತರೆ ಏರಿಯಾದಲ್ಲಿ ಕಸ ಹಾಕಿದವರಿಗೆ ಬಿಬಿಎಂಪಿ ಮಾರ್ಷಲ್ ದಂಡ ಹಾಕುತ್ತಿದ್ದಾರೆ. ಆದರೂ ಜನ ಎಚ್ಚೆತ್ತಂತೆ ಕಂಡುಬಂದಿಲ್ಲ. ಇದಕ್ಕೆ ತಕ್ಕಂತೆ ಸಂಡೆ ಲಾಕ್ ಡೌನ್ ಎಫೆಕ್ಟ್ ಹಾಗು ಕೊರೋನಾ‌ ಕೇಸ್ ಹೆಚ್ಚಳ ಸಂಖ್ಯೆ ಪೌರಕಾರ್ಮಿಕರು ಪ್ರತಿದಿನ‌ ಕೆಲಸ ಮಾಡಲು ಆಗುತ್ತಿಲ್ಲ. ಬೇರೆ ಕ್ಲೀನಿಂಗ್‌ ಕೆಲಸ ನಿಮಿತ್ತ ರಸ್ತೆ ಬದಿ ಕಸ ಹೆಚ್ಚಾಗುತ್ತಿದೆ.
Published by:G Hareeshkumar
First published: