ವಾಷಿಂಗ್ಟನ್ (ಏಪ್ರಿಲ್ 21); ಅಮೆರಿಕದಲ್ಲಿ ಕೊರೋನಾ ಭೀತಿ ಆರ್ಥಿಕ ಹಿನ್ನೆಡೆಗೂ ಕಾರಣವಾಗಿ ಲಕ್ಷಾಂತರ ಜನ ಕೆಲಸವನ್ನು ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಭವಿಷ್ಯದಲ್ಲಿ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕವಾಗಿ ವಲಸೆಯನ್ನು ಸ್ಥಗಿತಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, "ಅದೃಶ್ಯ ಶತ್ರುವಿನ ವಿರುದ್ದದ ದಾಳಿಯ ನಡುವೆ ನಮ್ಮ ಗ್ರೇಟ್ ಅಮೇರಿಕನ್ ನಾಗರಿಕರ ಉದ್ಯೋಗಗಳನ್ನು ರಕ್ಷಿಸುವ ಅಗತ್ಯತೆಯ ದೃಷ್ಟಿಯಿಂದ, ಅಮೆರಿಕಕ್ಕೆ ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾನು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ವಿಶ್ವದ ದೊಡ್ಡಣ್ಣ ಅಮೆರಿಕವನ್ನು
ಕೊರೋನಾ ವೈರಸ್ ಬೆಂಬಿಡದೆ ಕಾಡುತ್ತಿದೆ. ಈ ವೈರಸ್ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೊರೋನಾ ಮಿತಿಮೀರಿ ಬೆಳೆಯುತ್ತಿದೆ. ಈಗಾಗಲೇ 42 ಸಾವಿರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 7.92 ಲಕ್ಷ ದಾಟಿದೆ. ಜನ ನಿಬಿಡ ನಗರಗಳಾದ ನ್ಯೂಯಾರ್ಕ್ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಪರಿಣಾಮ ಈ
ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಈ ನಡುವೆ ಕೊರೋನಾ ಪರಿಸ್ಥಿತಿ ತಿಳಿಯಾದ ನಂತರವೂ ಅಮೆರಿಕದಲ್ಲಿ ಆರ್ಥಿಕ ಸ್ಥಿತಿ ಕುಸಿದಿದ್ದು, ಹಿದೆಂದೂ ಕಾಣದಂತಹ ನಿರುದ್ಯೋಗ ಸಮಸ್ಯೆ ಉಂಟಾಗಬಹುದು ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಅಮೆರಿಕದ ಕೆಲಸಗಳು ಇತರರ ಪಾಲಾಗುವುದನ್ನು ತಡೆಯುವ ಸಲುವಾಗಿ ಡೊನಾಲ್ಡ್ ಟ್ರಂಪ್ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಮಹಾಮಾರಿ ಕೊರೋನಾಗೆ ವಿಶ್ವದಲ್ಲಿ ಬರೋಬ್ಬರಿ 1.71 ಲಕ್ಷ ಮಂದಿ ಬಲಿ; 25 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ