ಕೊರೋನಾ ಭೀತಿ: ಬೆಂಗಳೂರಿಂದ ಸಾಮೂಹಿಕ ವಲಸೆ, ತುಂಬಿ ತುಳುಕಿದ ಹೆದ್ದಾರಿ

ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ವೈರಸ್ ಹೆಚ್ಚುತ್ತಿದೆ. ನಿತ್ಯ ಸುಮಾರು ಸಾವಿರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚುವ ಆತಂಕ ಇದೆ. ಹೀಗಾಗಿ, ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.  

news18-kannada
Updated:July 4, 2020, 12:52 PM IST
ಕೊರೋನಾ ಭೀತಿ: ಬೆಂಗಳೂರಿಂದ ಸಾಮೂಹಿಕ ವಲಸೆ, ತುಂಬಿ ತುಳುಕಿದ ಹೆದ್ದಾರಿ
ನೆಲಮಂಗಲ ಟೋಲ್​ ಬಳಿ ಟ್ರಾಫಿಕ್​ ಜಾಮ್​
  • Share this:
ಬೆಂಗಳೂರು (ಜು.4): ನಗರದಲ್ಲಿ ಕೊರೋನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಈ ಮಧ್ಯೆ ಲಾಕ್​ಡೌನ್​ ಘೋಷಣೆ ಮಾಡುವ ಭೀತಿ ಕೂಡ ಜನರನ್ನು ಕಾಡುತ್ತಿದೆ. ಹೀಗಾಗಿ ಜನರು ಬೆಂಗಳೂರು ತಮ್ಮ ತಮ್ಮ ಊರಿಗೆ ಮರಳುತ್ತಿದ್ದಾರೆ. ಪರಿಣಾಮ ರಾಷ್ಟ್ರೀಯ ಹೆರದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.

ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ವೈರಸ್ ಹೆಚ್ಚುತ್ತಿದೆ. ನಿತ್ಯ ಸುಮಾರು ಸಾವಿರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚುವ ಆತಂಕ ಇದೆ. ಹೀಗಾಗಿ, ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಅನೇಕರು ಮನೆ ಖಾಲಿ ಮಾಡಿಕೊಂಡು ತಮ್ಮ ಊರುಗಳತ್ತ ವಾಪಾಸು ತೆರಳುತ್ತಿದ್ದಾರೆ. ಟಾಟಾ ಏಸ್, ಕ್ಯಾಂಟ್ರೋ ವಾಹನಗಳಲ್ಲಿ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಅಚ್ಚರಿ ಎಂದರೆ, ಕೆಲವರು ಪಾತ್ರೆ ಪಗಡೆಗಳು, ಮನೆಯ ಗೃಹಪಯೋಗಿ ಸಾಮಾಗ್ರಿಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ.ರಾಜಧಾನಿಯಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಸರ್ಕಾರ ಬೆಚ್ಚಿಬಿದ್ದಿದೆ. ಹೀಗಾಗಿ, ಕೊರೋನಾ ನಿಯಂತ್ರಣ ಮಾಡಲು ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಶಾಸಕರ ಜೊತೆ ಚರ್ಚೆ ಮಾಡಲು ಬಿಎ​ಸ್​ವೈ ಮುಂದಾಗಿದ್ದಾರೆ. ಇದೇ ವೇಳೆ ಲಾಕ್​ಡೌನ್​ ಜಾರಿ ಮಾಡುವ ಬಗ್ಗೆಯೂ ನಿರ್ಧಾರ ಆಗಲಿದೆ ಎನ್ನಲಾಗುತ್ತಿದೆ. ಲಾಕ್​ಡೌನ್​ ಜಾರಿಯಾದರೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.
Published by: Rajesh Duggumane
First published: July 4, 2020, 12:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading