ಮಂಡ್ಯದ ಬಡವರಿಗೆ ನೆರವಾದ ಜೆಡಿಎಸ್ ನಾಯಕ ಹಾಗೂ ದುಬೈ ಉದ್ಯಮಿ ಜಫ್ರುಲ್ಲಾ ಖಾನ್

ದುಬೈನ ಉದ್ಯಮಿ ಜಫ್ರುಲ್ಲಾ ಖಾನ್ ತಮ್ಮ‌ ಹೆಂಡತಿ ಫಾಮ್ ಫೌಂಡೇಶನ್ ಮೂಲಕ ಬಡ ಜನರಿಗೆ ನೆರವು ನೀಡಲು ಮುಂದಾಗಿದ್ದಾರೆ.

news18-kannada
Updated:May 21, 2020, 9:59 AM IST
ಮಂಡ್ಯದ ಬಡವರಿಗೆ ನೆರವಾದ ಜೆಡಿಎಸ್ ನಾಯಕ ಹಾಗೂ ದುಬೈ ಉದ್ಯಮಿ ಜಫ್ರುಲ್ಲಾ ಖಾನ್
ಉದ್ಯಮಿ ಜಫ್ರುಲ್ಲಾ ಖಾನ್
  • Share this:
ಮಂಡ್ಯ(ಮೇ 21): ಸಕ್ಕರೆನಾಡು ಮಂಡ್ಯದಲ್ಲಿ ಲಾಕ್​ಡೌನ್​ ನಿಂದ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆ ಇಲ್ಲದ ಕಾರಣಕ್ಕೆ ಕೈಯಲ್ಲಿ ಹಣ ಇಲ್ಲದೆ ಬಡವರು ಪಡಿತರಕ್ಕೂ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ಮಂಡ್ಯ ಮೂಲದ ದುಬೈನ ಮುಸ್ಲಿಂ ಉದ್ಯಮಿಯೊಬ್ಬರು ಬಡ ಜನರ ಜನರ ನೆರವಿಗೆ ಬಂದಿದ್ದಾರೆ.

ಲಾಕ್​ಡೌನ್​ ಸಂಕಷ್ಟದಲ್ಲಿ ಸಿಲುಕಿ ಪರದಾಡುತ್ತಿರುವ ಮಂಡ್ಯ ನಗರದ ಬಡ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮುಂದೆ ಬಂದಿದ್ದು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಡ್ಯ ಮೂಲದ ದುಬೈನ ಉದ್ಯಮಿ ಜಫ್ರುಲ್ಲಾ ಖಾನ್ ತಮ್ಮ‌ ಹೆಂಡತಿಯ ಫಾಮ್ ಫೌಂಡೇಶನ್ ಮೂಲಕ ಬಡ ಜನರಿಗೆ ನೆರವು ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ‌ ಸಾವಿರಾರು ಟನ್ ಪಡಿತರ ಪದಾರ್ಥಗಳನ್ನು ಸಂಗ್ರಹಣೆ ಮಾಡಿದ್ದು, ಇಂದಿನಿಂದ ನಗರದ ಪ್ರತಿ ಬಡವರ ಮನೆಗೆ ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದ್ದಾರೆ.

ಮಂಡ್ಯ ನಗರದ ಉರ್ದು‌ ಶಾಲೆಯಲ್ಲಿ ಸಾವಿರಾರು ಟನ್ ಪಡಿತರ ಆಹಾರವನ್ನು ಸಂಗ್ರಹಿಸಿ ಫಾಮ್ ಫೌಂಡೇಶನ್ ಬ್ಯಾನರ್​ನ ಚೀಲದಲ್ಲಿ ಪ್ರತಿಯೊಂದು ಪಡಿತರ ಪದಾರ್ಥವನ್ನು‌ ಹಾಕಿ ಕಿಟ್ ತಯಾರಿಸಲಾಗಿದ್ದು, ಇಂದಿನಿಂದ ತಮ್ಮ ಬೆಂಗಲಿಗರ ಮೂಲಕ ನಗರದ ಬಡವರ ಮನೆ ಮನೆಗೆ ತಲುಪಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅಧಿಕೃತವಾಗಿ ಉಚಿತ ಆಹಾರ ಕಿಟ್ ವಿತರಣೆಗೆ ಸಮಾಜ ಸೇವಕ ಜಫ್ರುಲ್ಲಾ ಖಾನ್ ಚಾಲನೆ ನೀಡಲಿದ್ದಾರೆ. ಈ ಮೂಲಕ ತನ್ನ ಹುಟ್ಟೂರಿನಲ್ಲಿ ಬಡವರ ಸೇವೆ ಮೂಲಕ ನೆರವಿಗೆ ನಿಂತು ತವರು‌ ಮಣ್ಣಿನ ಋಣ ತೀರಿಸಲು ಮುಂದಾಗಿದ್ದಾರೆ‌.

ಇದನ್ನೂ ಓದಿ : ಗದಗ್​ನಿಂದ ಬೆಂಗಳೂರಿಗೆ ಹೆಚ್ಚಿನ ಬಸ್ ಹಾಕದ್ದಕ್ಕೆ ಪ್ರಯಾಣಿಕರ ಆಕ್ರೋಶ; ಸಾಮಾಜಿಕ ಅಂತರ ಮರೆತ ಜನರು

ತಮ್ಮ ಸಮಾಜ ಸೇವೆಯ ಮೂಲಕವೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಜಫ್ರುಲ್ಲಾ ಖಾನ್ ಯಾವುದೇ ಧರ್ಮ, ಜಾತಿ, ನೋಡದೆ ಎಲ್ಲಾ ವರ್ಗದ ಜನರಿಗೂ ನೆರವು ನೀಡುತ್ತಿದ್ದಾರೆ. ಯಾವುದೇ ಅಧಿಕಾರವಿಲ್ಲದಿದ್ದರೂ ಸಮಾಜ ಸೇವೆಯ ಮೂಲಕವೇ ಗುರುತಿಸಿಕೊಳ್ಳುವ ವಿಶಿಷ್ಟ ರಾಜಕಾರಣಿಯಾಗಿದ್ದಾರೆ.
First published: May 21, 2020, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading