ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟ; ಔಷಧ ಅಂಗಡಿಗಳಿಗೆ ಶಾಕ್ ಕೊಟ್ಟ ಅಧಿಕಾರಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 104 ಸಂಖ್ಯೆಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ಔಷಧ ಅಂಗಡಿಗಳ ಮೇಲೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

 ಮೆಡಿಕಲ್​​​ ಶಾಪ್

ಮೆಡಿಕಲ್​​​ ಶಾಪ್

  • Share this:
ಮಾಸ್ಕ್​ ಧರಿಸುವ ಮೂಲಕ ಕೊರೋನಾ ವೈರಸ್​ ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಹೀಗಾಗಿ ಜನರು ಮುಗಿಬಿದ್ದು ಮಾಸ್ಕ್​ ಖರೀದಿಸುತ್ತಿದ್ದಾರೆ. ಹೀಗಾಗಿ ಬಹುತೇಕ ಔಷಧ ಅಂಗಡಿಗಳಲ್ಲಿ ಮಾಸ್ಕ್​ ಕೊರತೆ ಎದುರಾಗಿದೆ. ಈ ಮಧ್ಯೆ ಕೆಲ ಅಂಗಡಿಯವರು ಮೂಲಬೆಲೆಗಿಂತ ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟ ಮಾಡಿದ್ದು ಕಂಡು ಬಂದಿದೆ. ಹೀಗಾಗಿ, ಇಂಥ ಅಂಗಡಿಗಳ ಮೇಲೆ ಡ್ರಗ್ ಕಂಟ್ರೋಲರ್ ಬೋರ್ಡ್‌ ದಿಢೀರ್ ದಾಳಿ ನಡೆಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 104 ಸಂಖ್ಯೆಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಇದನ್ನು ಆಧರಿಸಿ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯನಗರದಲ್ಲಿರುವ ಮಾರುತಿ ಮೆಡಿಕಲ್ಸ್, N-95 ಮಾಸ್ಕ್​​ಗಳ ದಾಸ್ತಾನು ಕಂಡುಬಂದಿದ್ದು, ಅವುಗಳ ಮೇಲೆ ಯಾವುದೇ ದರ ಇರಲಿಲ್ಲ. ಬದಲಿಗೆ 140 ರೂನಿಂದ 230 ರೂ.ರವರೆಗಿನ ಸ್ಟಿಕ್ಕರ್​ ಅಂಟಿಸಲಾಗಿತ್ತು. ಕಸ್ತೂರಿ ನಗರದ ಜಯಾನ್ ಹೆಲ್ತ್ ಕೇರ್ ಫಾರ್ಮಾ, ರಾಜ ರಾಜೇಶ್ವರಿ ನಗರದ ಅಪೋಲೋ ಫಾರ್ಮಸಿ, ರಾಮ ಮೆಡಿಕಲ್  ಜನರಲ್ ಸ್ಟೋರ್, ಸಂಜೀವಿನಿ ತ್ರಿನೇತ್ರ ಮೆಡಿಕಲ್ ಸ್ಟೋರ್ಸ್​ಗಳ  ಮೇಲೂ ದಾಳಿ ನಡೆದಿದೆ.

ಇದನ್ನೂ ಓದಿ: ಕೊರೋನಾ ವೈರಸ್ ಭೀತಿ: ವಿದೇಶಿಗರ ಆಗಮನಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

ಔಷಧ ನಿಯಂತ್ರಣ ಇಲಾಖೆ ದಾಳಿ ನಡೆಸಿದಾಗ ಎಲ್ಲ ಸಂಸ್ಥೆಗಳು ಸಹ ಮಾಸ್ಕ್ ಗಳನ್ನ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಕಂಡು ಬಂದಿವೆ. ಸದ್ಯ ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದು, ಪ್ರಕರಣಗಳು ತನಿಖೆಯ ಹಂತದಲ್ಲಿದೆ.
First published: