HOME » NEWS » Coronavirus-latest-news » DRINKING WATER PROBLEM IN YADAGIRI DISTRICT COVID HOSPITAL RHHSN NMPG

ಕೋವಿಡ್ ಆಸ್ಪತ್ರೆಯಲ್ಲಿ ನೀರಿಗೆ ಹಾಹಾಕಾರ; ಯಾದಗಿರಿ ಬಿಸಿಲಿನ ದಾಹದಿಂದ ಕಂಗೆಟ್ಟ ರೋಗಿಗಳು!

ಸರಕಾರ ಕೋವಿಡ್ ಕಡಿವಾಣಕ್ಕೆ ಅನೇಕ ಕ್ರಮವಹಿಸಿದೆ. ಆದರೆ, ಯಾದಗಿರಿಯ ಮುದ್ನಾಳ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಕುಡಿಯುವ ನೀರಿನ ಸಮಸ್ಯೆ.. ‌ಹೀಗೆ ಹಲವಾರು ಸಮಸ್ಯೆಗಳಿದ್ದು ಸಮಸ್ಯೆಗಳಿಗೆ ಶೀಘ್ರವೇ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಬೇಕಿದೆ.

news18-kannada
Updated:May 13, 2021, 4:52 PM IST
ಕೋವಿಡ್ ಆಸ್ಪತ್ರೆಯಲ್ಲಿ ನೀರಿಗೆ ಹಾಹಾಕಾರ; ಯಾದಗಿರಿ ಬಿಸಿಲಿನ ದಾಹದಿಂದ ಕಂಗೆಟ್ಟ ರೋಗಿಗಳು!
ಸಾಂದರ್ಭಿಕ ಚಿತ್ರ.
  • Share this:
ಯಾದಗಿರಿ: ಬಿಸಿಲಿನ ತಾಪದಲ್ಲಿ ಪ್ರತಿಯೊಬ್ಬರು ‌ಒಂದು ಕ್ಷಣ ಕುಡಿಯಲು ನೀರು ಸಿಗದಿದ್ದರೆ ಪರದಾಡುತ್ತೇವೆ. ಆದರೆ, ಕೋವಿಡ್ ಆಸ್ಪತ್ರೆಯಲ್ಲಿ ಕುಡಿಯುವ ನೀರು ಇಲ್ಲದೇ ಸೋಂಕಿತರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಯಾದಗಿರಿ ತಾಲೂಕಿನ ‌ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸೌಲಭ್ಯ ಕಲ್ಪಿಸದೇ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದ್ದು ನೀರು ‌ಕುಡಿಯುವುದು ಅತ್ಯವಶ್ಯ. ಅದರಲ್ಲೂ ಸೋಂಕಿತರಿಗೆ ನೀರು ಸಮರ್ಪಕವಾಗಿ ಪೂರೈಕೆ ಮಾಡಿ ಸೋಂಕಿತರ ಹಿತ ಕಾಪಾಡಬೇಕಾದ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲವಂತೆ. ಇದರಿಂದ ಸೋಂಕಿತರು ಹಾಗೂ ಸೋಂಕಿತರ ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರಗಡೆಯಿಂದ ಬಾಟಲ್ ಖರೀದಿ ಅನಿವಾರ್ಯ...!

ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸಿಗದ ಹಿನ್ನೆಲೆ ಸೋಂಕಿತರ ಸಂಬಂಧಿಕರು ಆಸ್ಪತ್ರೆ ಹೊರಭಾಗದಿಂದ ಕುಡಿಯುವ ‌ನೀರಿನ ಬಾಟಲ್ ಖರೀದಿ ಮಾಡಿ ಸೋಂಕಿತರಿಗೆ ನೀರು ಕೊಡುತ್ತಿದ್ದಾರೆ. ಅಪ್ಪಿ ತಪ್ಪಿ ಹೊರಗಡೆ ನೀರಿನ ಬಾಟಲ್ ಸಿಗದಿದ್ದರೆ ಬಹಳ ಕಷ್ಟವಾಗುತ್ತದೆ. ಕೋವಿಡ್ ಸೋಂಕಿತರ ಹಿತ ಕಾಪಾಡಬೇಕಾದ ಅಧಿಕಾರಿಗಳು ಕನಿಷ್ಠ ಸೌಲಭ್ಯವಾದ ಕುಡಿಯುವ ನೀರಿನ ದಾಹ ನೀಗಿಸುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರು ಇದಕ್ಕೂ ನಮಗೂ ಸಂಬಂಧವಿಲ್ಲವಂತೆ ವರ್ತನೆ ತೋರುತ್ತಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸೋಂಕಿತರ ಸಂಬಂಧಿಕನೊರ್ವ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನು ಓದಿ: ಗ್ರಾಮಕ್ಕೆ ಹರಡುತ್ತಿರುವ ಕೊರೋನಾ ಸೋಂಕು ತಡಗೆ ಗ್ರಾಮಪಡೆ ಸಜ್ಜು; ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ...!

ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವಂತೆ. ವೈದ್ಯರು ಬಾರದೇ‌ ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಅದೇ ರೀತಿ ಸೋಂಕಿತ ಮಹಿಳೆಯೊರ್ವಳು ನರಳಾಡಿ ಮೃತಪಟ್ಟಿದ್ದಾಳೆ. ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸೋಂಕಿತ ಮಹಿಳೆಗೆ ಆಕ್ಸಿಜನ್ ಕಲ್ಪಿಸಬೇಕಾಗಿತ್ತು. ಆದರೆ, ಆಕ್ಸಿಜನ್ ಕೊರತೆ ಹಿನ್ನೆಲೆ ಆಕ್ಸಿಜನ್ ನೀಡಿಲ್ಲವಂತೆ. ಆಕ್ಸಿಜನ್ ಸಮಸ್ಯೆಯಿಂದ ಮಹಿಳೆ ಬಳಲುತ್ತಿದ್ದಾಗ ಕೊನೆ ಸ್ಥಿತಿಯಲ್ಲಿ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ನಂತರ ಸೋಂಕಿತ ‌ಮಹಿಳೆಯು ನರಳಾಡಿ ಪ್ರಾಣ ಬಿಟ್ಟಿದ್ದಾಳೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮೃತ  ಸೋಂಕಿತೆಯ  ಸಂಬಂಧಿಕನೊರ್ವ ಮಾತನಾಡಿ, ಸರ್ ನಿನ್ನೆ ಬೆಳಿಗ್ಗೆ 11 ಗಂಟೆಗೆ ಆಕ್ಸಿಜನ್ ಕೊಡಿಯೆಂದು ಪರಿ ಪರಿಯಾಗಿ ಕೇಳಿದರು. ಆಕ್ಸಿಜನ್ ನೀಡಿಲ್ಲ.ಕೊನೆ ಗಳಿಗೆಯಲ್ಲಿ ಆಕ್ಸಿಜನ್ ನೀಡಿದ್ದಾರೆ. ಆದರೆ, ಅವರು ಬದುಕಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
Youtube Video
ಸರಕಾರ ಕೋವಿಡ್ ಕಡಿವಾಣಕ್ಕೆ ಅನೇಕ ಕ್ರಮವಹಿಸಿದೆ. ಆದರೆ, ಯಾದಗಿರಿಯ ಮುದ್ನಾಳ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಕುಡಿಯುವ ನೀರಿನ ಸಮಸ್ಯೆ.. ‌ಹೀಗೆ ಹಲವಾರು ಸಮಸ್ಯೆಗಳಿದ್ದು ಸಮಸ್ಯೆಗಳಿಗೆ ಶೀಘ್ರವೇ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಬೇಕಿದೆ.
Published by: HR Ramesh
First published: May 13, 2021, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories