CoronaVirus: ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಹಿಳಾ ಸೋಂಕಿತರಿಗೆ ಡ್ರೆಸ್ ಕೋಡ್; ಆತ್ಮಹತ್ಯೆ ನಿಯಂತ್ರಣಕ್ಕೆ ಹೊಸ ಕ್ರಮ

50 ಮಹಿಳಾ ಸೋಂಕಿತರು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇವರ ಮಾನಸಿಕ ನೆಮ್ಮದಿಯ ಮೇಲೂ ಗಮನವಹಿಸಿರುವ ಆಸ್ಪತ್ರೆ, ರೋಗಿಗಳ ಮಾನಸಿಕ ನೆಮ್ಮದಿಗಾಗಿಯೂ ಒಂದಷ್ಟು ಕ್ರಮ ತೆಗೆದುಕೊಂಡಿದೆ.

ಕೆ.ಸಿ. ಜನರಲ್ ಆಸ್ಪತ್ರೆ.

ಕೆ.ಸಿ. ಜನರಲ್ ಆಸ್ಪತ್ರೆ.

  • Share this:
ಬೆಂಗಳೂರು (ಜುಲೈ 24); ಇತ್ತೀಚೆಗೆ ನಗರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೆಂದು ದಾಖಲಾಗಿದ್ದ ಇಬ್ಬರು ಮಹಿಳೆಯರು ಆಸ್ಪತ್ರೆಯ ಶೌಚಾಲಯದಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯ ಆಡಳಿತ ವರ್ಗ ಮಹಿಳಾ ರೋಗಿಗಳಿಗೆ ಡ್ರೆಸ್‌ ಕೋಡ್‌ ಜಾರಿ ಮಾಡಿದೆ. ಸೀರೆ ಬದಲು ಸರ್ಜಿಕಲ್‌ ಏಪ್ರಾನ್ ನೀಡಿದೆ.

ಕೊರೋನಾ ಸೋಂಕಿನಿಂದಾಗಿ ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಸಲುವಾಗಿ ಇಂತಹ ಕ್ರಮಕ್ಕೆ ಮುಂದಾಗಲಾಗಿದೆ. ಆದರೆ, ಕೆಲವು ಹಿರಿಯ ಮಹಿಳಾ ರೋಗಿಗಳು ಇದನ್ನು ವಿರೋಧಿಸಿದ್ದು, ಸೀರೆಯೇ ತಮಗೆ ಆರಾಮ ಎಂದಿದ್ದಾರೆ. ಆದರೂ, ರೋಗಿಗಳ ಹಿತದೃಷ್ಟಿಯಿಂದ ಈ ದಿರಿಸನ್ನೇ ಕಡ್ಡಾಯ ಮಾಡಲಾಗಿದೆ.

50 ಮಹಿಳಾ ಸೋಂಕಿತರು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇವರ ಮಾನಸಿಕ ನೆಮ್ಮದಿಯ ಮೇಲೂ ಗಮನವಹಿಸಿರುವ ಆಸ್ಪತ್ರೆ, ರೋಗಿಗಳ ಮಾನಸಿಕ ನೆಮ್ಮದಿಗಾಗಿಯೂ ಒಂದಷ್ಟು ಕ್ರಮ ತೆಗೆದುಕೊಂಡಿದೆ.


ಇದನ್ನೂ ಓದಿ : ಅಯೋಧ್ಯೆಯಲ್ಲಿ ಆಗಸ್ಟ್‌ 05ಕ್ಕೆ ಪ್ರಧಾನಿ ಮೋದಿಯಿಂದ ಭೂಮಿ ಪೂಜೆ; ಕಾರ್ಯಕ್ರಮ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಮಾನಸಿಕ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ರೋಗಿಗಳಿಗೂ ನಿಯಮಿತವಾಗಿ ಕೌನ್ಸಲಿಂಗ್ ಮಾಡಲಾಗುತ್ತಿದೆ. ಯಾವುದೇ ರೋಗಿ ಖಿನ್ನತೆ ಅಥವಾ ಆತ್ಮಹತ್ಯೆ ಯೋಚನೆ ಮಾಡಿರುವುದು ಕಂಡುಬಂದರೆ ಅವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಹೆಚ್ಚಾಗಿ ಮುಂಜಾನೆಯ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಯತ್ನಗಳು ನಡೆಯುತ್ತಿದೆ. ಹೀಗಾಗಿ ಆ ಸಮಯದಲ್ಲಿ ಮಾನಸಿಕ ತಜ್ಞರು ಗುರುತಿಸಿದ ರೋಗಿಗಳು ಶೌಚಾಲಯಕ್ಕೆ ತೆರಳಿದಾಗ ಬಾಗಿಲವರೆಗೂ ಅವರ ಮೇಲೆ ನಿಗಾ ಇರಿಸುವಂತೆ ಅಕ್ಕಪಕ್ಕದ ರೋಗಿಗಳಿಗೆ ತಿಳಿಸಲಾಗಿದೆ.



ಜೊತೆಗೆ ಆಸ್ಪತ್ರೆ ಸಿಬ್ಬಂದಿ ಕೂಡಾ ಇಂಥಾ ರೋಗಿಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ರೋಗಿಗಳ ಮಾನಸಿಕ ನೆಮ್ಮದಿಗೆ ಎರಡು ಟಿವಿಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆಯ ಎರಡು ವಿಂಗ್ ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ವಿಂಗ್ ಗಳಿಗೆ ಒಂದೊಂದು ಟಿವಿ ಅಳವಡಿಸಲಾಗಿದೆ. ಅದರಲ್ಲಿ ಕೇವಲ ಆರೋಗ್ಯ ಸಂಬಂಧಿ ಕಾರ್ಯಕ್ರಮ ಮತ್ತು ಮನರಂಜನಾ ಕಾರ್ಯಕ್ರಮ ಮಾತ್ರ ಪ್ರಸಾರ ಮಾಡಲಾಗುತ್ತಿದೆ. ನಿದ್ದೆ ಬರದ, ಹೆಚ್ಚಿನ ಮಾನಸಿಕ ಸಮಸ್ಯೆ ಇರುವ ರೋಗಿಗಳಿಗೆ ಮಾನಸಿಕ ತಜ್ಞರು ಅವಶ್ಯಕ ಔಷಧಗಳನ್ನು ನೀಡುತ್ತಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
Published by:MAshok Kumar
First published: