• Home
  • »
  • News
  • »
  • coronavirus-latest-news
  • »
  • ದೇವೇಗೌಡರ ಮೊಮ್ಮಗ ಡಾ. ಸೂರಜ್ ರೇವಣ್ಣರಿಂದ 2 ಸಾವಿರ ಫುಡ್ ಕಿಟ್ ವಿತರಣೆ

ದೇವೇಗೌಡರ ಮೊಮ್ಮಗ ಡಾ. ಸೂರಜ್ ರೇವಣ್ಣರಿಂದ 2 ಸಾವಿರ ಫುಡ್ ಕಿಟ್ ವಿತರಣೆ

ಶ್ರಮಿಕರಿಗೆ ಆಹಾರ ಕಿಟ್ ವಿತರಿಸುತ್ತಿರುವ ಡಾ. ಸೂರಜ್ ರೇವಣ್ಣ

ಶ್ರಮಿಕರಿಗೆ ಆಹಾರ ಕಿಟ್ ವಿತರಿಸುತ್ತಿರುವ ಡಾ. ಸೂರಜ್ ರೇವಣ್ಣ

ಸಂಕಷ್ಟದ ದಿನಗಳಲ್ಲಿರುವ ಜನರು ತಮ್ಮ ಆರೋಗ್ಯ ದೃಷ್ಠಿಯಿಂದ ಹೊರಗಿನಿಂದ ತಮ್ಮ ಮನೆಗಳಿಗೆ ಬಂದ ನಂತರ ಶುಭ್ರವಾಗಿ ಕೈಕಾಲು ತೊಳೆದು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂರಜ್ ರೇವಣ್ಣ ಮನವಿ ಮಾಡಿದರು.

  • Share this:

ಹಾಸನ(ಮೇ 05): ಲಾಕ್‌ಡೌನ್ ಹಿನ್ನೆಲೆ ಕಳೆದ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೇ ಅತಿ ಹೆಚ್ಚು ನೊಂದಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರಮಿಕವರ್ಗಗಳಾದ ಆಟೋ ಚಾಲಕರು, ಸವಿತಾ ಸಮಾಜ ಮತ್ತು ವಿಶ್ವಕರ್ಮ ಸಮುದಾಯದ ಸಾವಿರಾರು ಕುಟುಂಬಗಳಿಗೆ ಆಹಾರದ ಕಿಟ್ ಒದಗಿಸುವ ಮೂಲಕ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ನೆರವಿಗೆ ಧಾವಿಸಿದರು. 


ಹಾಸನ ಜಿಲ್ಲೆ ಚನ್ನರಾಯಪಟ್ಟಣ ಟೌನ್ ಹಾಗೂ ತಾಲೂಕಿನ ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ ಆನೇಕೆರೆ, ಮಾಳೇನಹಳ್ಳಿ, ಬರಗೂರು ಹ್ಯಾಂಡ್‌ಪೋಸ್ಟ್, ಉದಯಪುರ, ಸೇರಿ ಬರಗೂರು, ಬಳದರೆ ಪಂಚಾಯಿತಿಯ ಹಳ್ಳಿಗಳು ಮತ್ತು ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ, ಮಾವನೂರು, ಮಳಲಿ ಸೇರಿ ಹಲವು ಹಳ್ಳಿಗಳಲ್ಲಿನ ಶ್ರಮಿಕ ಸಮುದಾಯಕ್ಕೆ ಆಹಾರದ ಕಿಟ್ ವಿತರಣೆ ಮಾಡುವ ಮೂಲಕ ಬಡವರಿಗೆ ಸಹಾಯ ಹಸ್ತ ಚಾಚಿದರು.


ಇದನ್ನೂ ಓದಿ: ಹಸಿರು ವಲಯ ಹಾಸನದಲ್ಲಿ ಮದ್ಯ ಖಾಲಿ; ನೋ ಸ್ಟಾಕ್ ಫಲಕ ಹಾಕಿದ್ದರೂ ಅಂಗಡಿ ಮುಂದೆ ಸರತಿ ಸಾಲು


ಫುಡ್ ಕಿಟ್ ವಿತರಣೆ ಬಳಿಕ ಮಾತನಾಡಿದ ಡಾ. ಸೂರಜ್ ರೇವಣ್ಣ, ಕೊರೋನಾವೆಂಬ ಮಹಾಮಾರಿ ಜನರನ್ನು ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಆದರಲ್ಲೂ ಸರ್ಕಾರದ ಸೂಚನೆಯಂತೆ ಲಾಕ್‌ಡೌನ್ ಆದ ದಿನದಿಂದಲೂ ಆಟೋ ಚಾಲಕರು, ನಯನಕ್ಷತಿಯರು, ಮರಗೆಲಸ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳು ಬಡತನದಿಂದ ನೊಂದು ಹೋಗಿವೆ. ಯಾರೋ ನಾಲ್ಕು ಮಂದಿ ಉಳ್ಳವರಿಗೆ ಕಿಟ್ ನೀಡಿ ಪ್ರಚಾರ ಗಿಟ್ಟಿಸುವ ದಿನಗಳಲ್ಲಿ ನಮ್ಮ ತಂಡ ಪ್ರತಿ ಹಳ್ಳಿಗಳಿಗೆ ನಿಜವಾದ ಬಡವರನ್ನು, ನಿರ್ಗತಿಕರನ್ನು ಗುರುತಿಸಿದೆ. ಆದರ ಹಿನ್ನೆಲೆಯಲ್ಲಿಂದು 2,000 ಕಿಟ್‌ಗಳನ್ನು ಗುರುತಿಸಲಾದ ಸ್ಥಳಗಳಿಗೆ ತೆರಳಿ ಸಾಮಾಜಿಕ ಅಂತರದೊಂದಿಗೆ ನೊಂದ ಕುಟುಂಬಗಳಿಗೆ ವಿತರಣೆ ಮಾಡುತ್ತಿದ್ದೇವೆ ಎಂದರು.


ಕೊರೋನಾ ಮಾರಿಯ ಕುರಿತು ಇಲ್ಲಸಲ್ಲದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ನಮ್ಮ ತಂಡದಿಂದ 10 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಮುದ್ರಿಸಿ ರೋಗದ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮನೆಯಿಂದ ಆಚೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ಉದ್ದೇಶದೊಂದಿಗೆ ಸಂಸದರು, ಮಾಜಿ ಸಚಿವರಾದ ರೇವಣ್ಣ ಸೇರಿ ನಮ್ಮ ಪಕ್ಷದ ಎಲ್ಲ 6 ಮಂದಿ ಶಾಸಕರು ಲಕ್ಷಾಂತರ ಮಾಸ್ಕ್​ಗಳನ್ನು ಜಿಲ್ಲೆಯಲ್ಲಿ ವಿತರಣೆ ಮಾಡಿದ್ದಾರೆ ಎಂದು ಸೂರಜ್ ರೇವಣ್ಣ ಹೇಳಿದರು.


ಇದನ್ನೂ ಓದಿ: ವಿಜಯಪುರದಲ್ಲಿ ಕೊರೋನಾ ಸೋಂಕಿತ ಮಹಿಳೆ ಹೃದಯಾಘಾತದಿಂದ ಸಾವು; 22 ಮಂದಿ ಗುಣಮುಖ


ಸಂಕಷ್ಟದ ದಿನಗಳಲ್ಲಿರುವ ಜನರು ತಮ್ಮ ಆರೋಗ್ಯ ದೃಷ್ಠಿಯಿಂದ ಹೊರಗಿನಿಂದ ತಮ್ಮ ಮನೆಗಳಿಗೆ ಬಂದ ನಂತರ ಶುಭ್ರವಾಗಿ ಕೈಕಾಲು ತೊಳೆದು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.


ಇನ್ನು, ಕೊರೋನಾ ವಿರುದ್ಧ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಅರ್ಥಿಕ ಮೂಲದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ತೆರೆಯಲಾಗಿರುವ ಲಿಕ್ಕರ್ ಶಾಪ್‌ಗಳಲ್ಲಿ ಜನ ಮುಗಿಬಿದ್ದು ಮದ್ಯ ಖರೀದಿಗೆ ಮುಂದಾಗದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ತಮ್ಮಗೆಷ್ಟು ಮದ್ಯದ ಅವಶ್ಯಕತೆಯಿದೆ ಅಷ್ಟು ಮಾತ್ರ ಖರೀದಿಸಿ, ಇತಿಮಿತಿಯಲ್ಲಿ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವಂತೆಯೂ ಅವರು ತಿಳಿಹೇಳಿದರು.


ವರದಿ: ಡಿಎಂಜಿ ಹಳ್ಳಿ ಅಶೋಕ್


Published by:Vijayasarthy SN
First published: