HOME » NEWS » Coronavirus-latest-news » DR KIRAN THOTAMBYLE A KANNADA CINEMA MUSICIAN STAYS AWAY FROM THE FAMILY AND BECAME CORONA WARRIOR VB

ಹೆಂಡತಿ, ಮಕ್ಕಿಳಿಂದ ದೂರವಿದ್ದು ಕೊರೋನಾ ವಾರಿಯರ್ ಆದ ಸ್ಯಾಂಡಲ್​ವುಡ್ ಸಂಗೀತ ನಿರ್ದೇಶಕ

Dr. Kiran Thotambyl: ಕನ್ನಡ ಚಿತ್ರರಂಗದಲ್ಲಿ ಡಾ. ಕಿರಣ್ ತೋಟಂಬೈಲು ಹೆಸರು ಅಷ್ಟೊಂದು ಪರಿಚಿತವಲ್ಲ. ಇವರು ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ‘ಐ ಲವ್ ಯು’ ಚಿತ್ರದ ಸಂಗೀತ ನಿರ್ದೇಶಕ.

news18-kannada
Updated:July 8, 2020, 3:31 PM IST
ಹೆಂಡತಿ, ಮಕ್ಕಿಳಿಂದ ದೂರವಿದ್ದು ಕೊರೋನಾ ವಾರಿಯರ್ ಆದ ಸ್ಯಾಂಡಲ್​ವುಡ್ ಸಂಗೀತ ನಿರ್ದೇಶಕ
ಡಾ. ಕಿರಣ್ ತೋಟಂಬೈಲು
  • Share this:
ಕರ್ನಾಟಕದಲ್ಲಿ ಈಗಾಗಲೇ ಮಾರಕ ಕೊರೋನಾ ವೈರಸ್​​ ಸೋಂಕಿತರ ಸಂಖ್ಯೆ 26 ಸಾವಿರದ ಗಡಿ ದಾಟಿದೆ. ಇದುವರೆಗೂ 416 ಜನರು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 15 ಮಂದಿ ಸಾವನ್ನಪ್ಪಿದ್ದಾರೆ. 1, 498 ಪ್ರಕರಣಗಳು ದಾಖಲಾಗಿವೆ. ಕೊರೋನಾ ಸೋಂಕು ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ ಬಹುಬೇಗ ತಗುಲುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಹಿರಿಯ ಬದಲಾಗಿ 30ರಿಂದ 40 ವರ್ಷದೊಳಗಿನವರನ್ನು ಕೊರೋನಾ ಹೆಚ್ಚಾಗಿ ಕಾಡುತ್ತಿದೆ.

ಈ ನಡುವೆ ಕೆಲವೊಂದು ವೈದ್ಯರು ಹಾಗೂ ನರ್ಸ್​ಗಳು ಕೂಡಾ ತಮಗೂ ಕೊರೋನಾ ಬರಬಹುದು, ನಮಗೆ ಸೂಕ್ತ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಸೇವೆಗೆ ಹಾಜರಾಗುತ್ತಿಲ್ಲ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಸ್ಯಾಂಡಲ್​ವುಡ್​​ ಸಂಗೀತ ನಿರ್ದೇಶಕರೊಬ್ಬರು ಸ್ಟೆತಸ್ಕೋಪ್ ಹಿಡಿದು ಪಿಪಿಇ ಕಿಟ್ ಧರಿಸಿ ಕೊರೋನಾ ರೋಗಿಗಳ ಸೇವೆಗೆ ನಿಂತಿದ್ಧಾರೆ. ಅವರೇ ಡಾ. ಕಿರಣ್ ತೋಟಂಬೈಲು.

Susheel Gowda Suicide: ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​: ಭಾವುಕರಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ದುನಿಯಾ ವಿಜಿ..!

ಕನ್ನಡ ಚಿತ್ರರಂಗದಲ್ಲಿ ಡಾ. ಕಿರಣ್ ತೋಟಂಬೈಲು ಹೆಸರು ಅಷ್ಟೊಂದು ಪರಿಚಿತವಲ್ಲ. ಇವರು ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ‘ಐ ಲವ್ ಯು’ ಚಿತ್ರದ ಸಂಗೀತ ನಿರ್ದೇಶಕ. ಕಿರಣ್ ವೃತ್ತಿಯಲ್ಲಿ ವೈದ್ಯರು. ಜೊತೆಗೆ ಸಿನಿಮಾಗಳಿಗೆ ಮ್ಯೂಸಿಕ್ ಮಾಡುವುದು ಇವರ ಹವ್ಯಾಸ. ಸಂಗೀತದಲ್ಲಿ ಸಕ್ಸಸ್ ಕಾಣುತ್ತಿರುವ ಹಾಗೆ ವೈದ್ಯ ವೃತ್ತಿಯನ್ನ ಬಿಟ್ಟು ಸಂಪೂರ್ಣವಾಗಿ ಸಂಗೀತದಲ್ಲಿ ನಿರತರಾಗಿದ್ದರು.

ಹಾಟ್ ವಿಡಿಯೋಗಳ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿರುವ ಬಿ-ಟೌನ್​ ನಟಿ..!

ಆದರೆ ಈಗ ದೇಶಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ಕಿರಣ್ ತಮ್ಮ ಕೈಯಲ್ಲಿದ್ದ ಗಿಟಾರ್ ಬಿಟ್ಟು, ಮತ್ತೆ ಸ್ಟೆತಸ್ಕೋಪ್ ಹಿಡಿದಿದ್ದಾರೆ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ಕೊವಿಡ್ ಕ್ಲಿನಿಕ್​ನಲ್ಲಿ, ಡಾಕ್ಟರ್ ಕಿರಣ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ನನ್ನ ಸೇವೆ ಬಹಳ ಅವಶ್ಯಕತೆ ಇದ್ದಿದ್ದರಿಂದ ಕಳೆದ 15 ದಿನಗಳಿಂದ ನಾನು ಇಲ್ಲೇ ನೆಲೆಸಿದ್ದೇನೆ ಎಂದಿರುವ ಕಿರಣ್, ಇಬ್ಬರು ಮುದ್ದಾದ ಮಕ್ಕಳು, ಪತ್ನಿ, ಮನೆಯಿಂದ ದೂರವಿದ್ದು ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ.
Published by: Vinay Bhat
First published: July 8, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories