HOME » NEWS » Coronavirus-latest-news » DONT FEAR IF CORONA TESTED POSITIVE SAYS DISCHARGED PATIENT IN KODAGU LG

ಕೊರೋನಾ ಬಂದರೆ ಹೆದರುವ ಅಗತ್ಯವಿಲ್ಲ; ಕೊಡಗಿನಲ್ಲಿ ಗುಣಮುಖರಾದ ವ್ಯಕ್ತಿಯ ಆತ್ಮಸ್ಥೈರ್ಯದ ನುಡಿ 

ಕೊರೋನಾ ವೈರಸ್ ಅಟ್ಯಾಕ್ ಆದಲ್ಲಿ ಯಾವುದೇ ಆತಂಕ ಬೇಡ ಎಂದಿದ್ದಾರೆ. ನಮಗೆ ಬೇರಾವುದೇ ಮಾರಣಾಂತಿಕ ಕಾಯಿಲೆ ಇಲ್ಲದಿದ್ದರೆ, ಕೊರೋನಾ ಬಂದಲ್ಲಿ ನಾವು ಗುಣಮುಖರಾಗುತ್ತೇವೆ. ಒಂದು ವೇಳೆ ನಮಗೆ ಆರೋಗ್ಯದ ಗಂಭೀರವಾದ ಸಮಸ್ಯೆಗಳಿದ್ದರೆ ಮಾತ್ರ ಸಾವು ಸಂಭವಿಸಬಹುದೇನೋ ಅಷ್ಟೇ- ಮೋಹನ್ ಕುಮಾರ್

news18-kannada
Updated:July 20, 2020, 8:38 PM IST
ಕೊರೋನಾ ಬಂದರೆ ಹೆದರುವ ಅಗತ್ಯವಿಲ್ಲ; ಕೊಡಗಿನಲ್ಲಿ ಗುಣಮುಖರಾದ ವ್ಯಕ್ತಿಯ ಆತ್ಮಸ್ಥೈರ್ಯದ ನುಡಿ 
ಕೊರೋನಾದಿಂದ ಗುಣಮುಖರಾದ ವ್ಯಕ್ತಿ
  • Share this:
ಕೊಡಗು(ಜು.20): ಯಾರಿಗಾದರೂ ಮಹಾಮಾರಿ ಕೊರೋನಾ ಬಂತೆಂದರೆ ಸಾಕು, ನಮ್ಮ ಕಥೆ ಮುಗಿದೇ ಹೋಯ್ತು ಎನ್ನುವ ತರ ಜನ ಯೋಚನೆ ಮಾಡುತ್ತಾರೆ. ಆದರೆ ಕೊರೋನಾದಿಂದ ಗುಣಮುಖರಾದ ಕೊಡಗು ಜಿಲ್ಲೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆಯ ನಿವಾಸಿ ಮೋಹನ್ ಕುಮಾರ್, ಕೊರೋನಾ ಅಂದರೆ ಹೆದರಿಕೊಳ್ಳಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿರುವ ಮೋಹನ್ ಕುಮಾರ್, ಕೊರೋನಾ ಅಂದರೆ ಮಾರಣಾಂತಿಕ ಕಾಯಿಲೆ ಏನೂ ಅಲ್ಲ. ಬದಲಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ಎಲ್ಲರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ದೇಶದಲ್ಲಿ ಕೊರೋನಾ ಹರಡಲು ಆರಂಭವಾದ ದಿನಗಳಲ್ಲೇ ಮನೆಯವರಿಗೆ ಧೈರ್ಯ ತುಂಬಿದ್ದೆ. ಆದರೂ ನನಗೆ ಪಾಸಿಟಿವ್ ಅಂತ ಗೊತ್ತಾದಾಗ ಸ್ವಲ್ಪ ಅಳಕು ಉಂಟಾಯಿತು. ಅದಕ್ಕಿಂತ ಮುಖ್ಯವಾಗಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ರೀತಿಯೇ ನನ್ನ ಮತ್ತು ನನ್ನ ಸುತ್ತ ಮುತ್ತಲಿನ ಮನೆಯವರಿಗೆ ನಾನೊಬ್ಬ ಅಪರಾಧಿ ಎನ್ನುವ ರೀತಿ ಇತ್ತು. ಆ ಸ್ಥಿತಿ ಮಾತ್ರ ನನಗೆ ಬಹಳ ಬೇಸರವಾಯಿತು. ಇದು ಬದಲಾಗಬೇಕಾಗಿದೆ ಎನ್ನುವುದು ಕೊರೋನಾದಿಂದ ಗುಣಮುಖರಾಗಿರುವ ಮೋಹನ್ ರವರ ಬೇಸರದ ನುಡಿ.

Karnataka SSLC Result 2020: ಆಗಸ್ಟ್ ಮೊದಲ ವಾರದಲ್ಲೇ ಎಸ್​ಎಸ್​ಎಲ್​​ಸಿ ಫಲಿತಾಂಶ - ಸಚಿವ ಸುರೇಶ್ ಕುಮಾರ್

ಕೊರೋನಾ ವೈರಸ್ ಅಟ್ಯಾಕ್ ಆದಲ್ಲಿ ಯಾವುದೇ ಆತಂಕ ಬೇಡ ಎಂದಿದ್ದಾರೆ. ನಮಗೆ ಬೇರಾವುದೇ ಮಾರಣಾಂತಿಕ ಕಾಯಿಲೆ ಇಲ್ಲದಿದ್ದರೆ, ಕೊರೋನಾ ಬಂದಲ್ಲಿ ನಾವು ಗುಣಮುಖರಾಗುತ್ತೇವೆ. ಒಂದು ವೇಳೆ ನಮಗೆ ಆರೋಗ್ಯದ ಗಂಭೀರವಾದ ಸಮಸ್ಯೆಗಳಿದ್ದರೆ ಮಾತ್ರ ಸಾವು ಸಂಭವಿಸಬಹುದೇನೋ ಅಷ್ಟೇ. ಆದ್ದರಿಂದ ಕೊರೊನಾ ವೈರಸ್ ಬಂದ ಕೂಡಲೇ ಎಲ್ಲಾ ಮುಗಿದು ಹೋಯಿತು ಎಂದು ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಮೋಹನ್ ಕುಮಾರ್ ಜನರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಉತ್ತಮ ಆಹಾರ ವಸತಿ ಸೌಲಭ್ಯಗಳಿವೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿಯ ವ್ಯವಸ್ಥೆ ಇದೆ. ಸಂಜೆ ಒಂದು ಬಾರಿ ಸೂಪ್ ಕೂಡ ಕೊಡಲಾಗುತ್ತದೆ. ವೈದ್ಯರು, ದಾದಿಯರು ತುಂಬಾ ಜವಾಬ್ದಾರಿಯಿಂದ ನಮ್ಮನ್ನು ನೋಡಿಕೊಳ್ಳುತ್ತಾರೆ.
ಹೀಗಾಗಿ ಕೊರೋನಾ ಬಂದು ಕೂಡಲೇ ಎಲ್ಲವೂ ಮುಗಿದು ಹೋಯಿತು ಎಂದು ಚಿಂತಿಸಬೇಡಿ. ಆದರೆ ಆರೋಗ್ಯ ಬಗ್ಗೆ, ಸ್ವಚ್ಛತೆ ಬಗ್ಗೆ ಹೆಚ್ಚಿನ ಜವಾಬ್ದಾರಿ ಇರಲಿ ಎನ್ನುವ ಸಲಹೆಯನ್ನು ನೀಡಿದ್ದಾರೆ.
Published by: Latha CG
First published: July 20, 2020, 8:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading