news18 Updated:April 7, 2021, 2:07 PM IST
ಸೋನು ಸೂದ್
- News18
- Last Updated:
April 7, 2021, 2:07 PM IST
ಮುಂಬೈ(ಏ. 07): ನೆಟ್ವರ್ಕ್18 ಮತ್ತು ಫೆಡರಲ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೊರೋನಾ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶ ಇರುವ ಸಂಜೀವನಿ ಅಭಿಯಾನ ಇಂದು ಚಾಲನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುಭಾಷಾ ನಟ ಸೋನು ಸೂದ್ ಇಂದೇ ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಾಗೃತಿ ಸಂದೇಶ ಮೆರೆದಿದ್ದಾರೆ. ವಿಶ್ವ ಆರೋಗ್ಯ ದಿನದ ಸಂದರ್ಭ, ಇಂದು ಬೆಳಗ್ಗೆ ಅಪೋಲೋ ಆಸ್ಪತ್ರೆಗೆ ತೆರಳಿ ಅವರು ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ನಂತರ ಸಂಜೀವನಿ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಜನರು ಯಾವುದೇ ವಿಳಂಬ ಮಾಡದೇ ಇಂದೇ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
“ಕಳೆದ ವರ್ಷ ವಲಸೆ ಕಾರ್ಮಿಕರು ತಮ್ಮತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದ ಸನ್ನಿವೇಶಗಳು ನ ನೆನಪಾಗುತ್ತಿವೆ. ಸಮಾಧಾನದಿಂದಿರಿ, ಸುರಕ್ಷಿತವಾಗಿರಿ ಎಂದಷ್ಟೇ ನಾವು ಅವರಿಗೆ ಹೇಳಲು ಸಾಧ್ಯವಿತ್ತು. ಈಗ ನಮಗೆ ಕೋವಿಡ್ ವಿರುದ್ಧ ಲಸಿಕೆ ಸಿಕ್ಕಿದೆ. ಈಗ ನನ್ನ ಮಾತುಗಳನ್ನ ಕೇಳಿಸಿಕೊಳ್ಳುತ್ತಿರುವ ಎಲ್ಲರಿಗೂ ನಾನು ಮಾಡುವ ಮನವಿ ಎಂದರೆ, ಅದು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂಬುದು” ಎಂದು ಸೋನು ಸೂದ್ ಹೇಳಿದ್ಧಾರೆ.
ಲಸಿಕೆ ಹಾಕಿಸಿಕೊಳ್ಳುವ ಪ್ರಾಯೋಗಿಕ ಅನುಭವ ಹಂಚಿಕೊಂಡ ಅವರು, “ನೀವು ಒಂದು ವಿಚಾರ ನೆನಪಲ್ಲಿಟ್ಟುಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ಕೂಡಲೇ ಆಸ್ಪತ್ರೆಯಿಂದ ಹೊರಬರಬಾರದು. 30 ನಿಮಿಷಗಳ ಕಾಲ ವೈದ್ಯರ ಬಳಿಯೇ ಇರಬೇಕಾಗುತ್ತದೆ” ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ‘Sanjeevani – A Shot Of Life’: ನಟ ಸೋನು ಸೂದ್ ಅವರೊಂದಿಗೆ ನೆಟ್ವರ್ಕ್ 18 ಸಂಜೀವನಿ ಅಭಿಯಾನ..!
ಹಾಗೆಯೇ, ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಮಂದಿಗೂ ಅವರು ಕಿವಿ ಮಾತು ಹೇಳಿದ್ಧಾರೆ. “ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೋ ಬೇಡವೋ ಎಂದು ಜನರಲ್ಲಿ ಇರುವ ಗೊಂದಲವನ್ನು ಮೊದಲು ನಿವಾರಣೆ ಮಾಡಬೇಕು. ಯಾವುದೇ ಯೋಚನೆ ಮಾಡದೇ ಮೊದಲು ಲಸಿಕೆ ಹಾಕಿಸಿಕೊಳ್ಳಿ…. ನೀವು ನಿಮ್ಮ ಕುಟುಂಬದ ಹಿರಿಯರಾಗಿ ಲಸಿಕೆ ಹಾಕಿಸಿಕೊಂಡರೆ ಬೇರೆಯವರಿಗೆ ಮಾದರಿ ಹಾಕಿಕೊಟ್ಟಂತೆ. ಆದ್ದರಿಂದ ನಾಳೆ ಎಂದು ಮುಂದೂಡುವ ಬದಲು ಇವತ್ತೇ ವ್ಯಾಕ್ಸಿನ್ ಪಡೆಯಿರಿ” ಎಂದು ಸೋನು ಸೂದ್ ಕರೆ ನೀಡಿದ್ಧಾರೆ.
ಸಂಜೀವಿನಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಸಿಕೆ ಪಡೆದ ಮೊದಲ ವ್ಯಕ್ತಿ ಎನಿಸಿರುವ ಮನೀಶ್ ಕುಮಾರ್ ಎಂಬುವರ ಜೊತೆ ಸೋನು ಸೂದ್ ಸಂವಾದ ಕೂಡ ಮಾಡಿದರು. ತಮ್ಮ ಸಹೋದ್ಯೋಗಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ಧಾಗ ತಾನು ಮುಂದೆ ಹೋಗಿ ಮೊದಲು ವ್ಯಾಕ್ಸಿನ್ ಹಾಕಿಸಿಕೊಂಡ ಸಂದರ್ಭವನ್ನು ಮನೀಶ್ ಕುಮಾರ್ ಮೆಲುಕು ಹಾಕಿದರು.
Published by:
Vijayasarthy SN
First published:
April 7, 2021, 2:07 PM IST