• Home
  • »
  • News
  • »
  • coronavirus-latest-news
  • »
  • ಮಾಧ್ಯಮಗಳ ವರದಿಗೆ ತಲೆಕೆಡಿಸಿಕೊಳ್ಳಬೇಡಿ, ಒಗ್ಗಟ್ಟಾಗಿ ಕೆಲಸ ಮಾಡಿ; ಆರೋಗ್ಯ ಅಧಿಕಾರಿಗಳಿಗೆ ಸಚಿವ ರಾಮುಲು ಸೂಚನೆ

ಮಾಧ್ಯಮಗಳ ವರದಿಗೆ ತಲೆಕೆಡಿಸಿಕೊಳ್ಳಬೇಡಿ, ಒಗ್ಗಟ್ಟಾಗಿ ಕೆಲಸ ಮಾಡಿ; ಆರೋಗ್ಯ ಅಧಿಕಾರಿಗಳಿಗೆ ಸಚಿವ ರಾಮುಲು ಸೂಚನೆ

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

ರಾಜ್ಯದಲ್ಲಿ 5061  ಜನರನ್ನು ಕಫಾ ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 144 ಜನರ ಪ್ರಕರಣ ಪಾಸಿಟಿವ್ ಆಗಿದೆ. ಈ ನಡುವೆ ಆರೋಗ್ಯ ಇಲಾಖೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂಬಂತೆ ಮಾಧ್ಯಮಗಳಲ್ಲೂ ಸಾಕಷ್ಟು ಸುದ್ದಿಗಳು ಬಿತ್ತರವಾಗುತ್ತಿವೆ. ಆದರೆ, ನೀವ್ಯಾರು ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಈ ಕೆಲಸವನ್ನು ದೇವರ ಕೆಲಸ ಎಂಬಂತೆ ಒಗ್ಗಟ್ಟಾಗಿ ಮಾಡಿ ಎಂದು ಸಚಿವ ಶ್ರೀರಾಮುಲು ವಿನಂತಿಸಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ರಾಯಚೂರು (ಏಪ್ರಿಲ್ 05); ಕೊರೋನಾ ಚಿಕಿತ್ಸೆ ಕುರಿತು ಏನೇ ವರದಿ ಬಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸವನ್ನು ಒಗ್ಗಟ್ಟಾಗಿ ಮಾಡಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ರಾಯಚೂರಿಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ಇಲಾಖೆ ವ್ಯವಸ್ಥೆಯನ್ನು ಅವಲೋಕಿಸಿದ ನಂತರ ಅಧಿಕಾರಿಗಳನ್ನು ಶ್ಲಾಘಿಸಿ ಮಾತನಾಡಿರುವ ಸಚಿವ ಶ್ರೀರಾಮುಲು, "ಕಲಬುರಗಿಯಲ್ಲಿ ಮೊದಲ ಕೊರೋನಾ ಸಾವು ದಾಖಲಾದ ನಂತರ ಇಡೀ ರಾಜ್ಯ ತಲ್ಲಣವಾಗಿತ್ತು. ನನಗೂ ಕಣ್ಣೀರು ಬಂದಿತ್ತು. ಆದರೆ, ನಾವು ತ್ವರಿತಗತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದೆವು.

ರಾಜ್ಯದಲ್ಲಿ 5061  ಜನರನ್ನು ಕಫಾ ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 144 ಜನರ ಪ್ರಕರಣ ಪಾಸಿಟಿವ್ ಆಗಿದೆ. ಈ ನಡುವೆ ಆರೋಗ್ಯ ಇಲಾಖೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂಬಂತೆ ಮಾಧ್ಯಮಗಳಲ್ಲೂ ಸಾಕಷ್ಟು ಸುದ್ದಿಗಳು ಬಿತ್ತರವಾಗುತ್ತಿವೆ. ಆದರೆ, ನೀವ್ಯಾರು ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಈ ಕೆಲಸವನ್ನು ದೇವರ ಕೆಲಸ ಎಂಬಂತೆ ಒಗ್ಗಟ್ಟಾಗಿ ಮಾಡಿ" ಎಂದು ವಿನಂತಿಸಿಕೊಂಡಿದ್ದಾರೆ.

 

ರಾಜ್ಯದಲ್ಲಿ ಈವರೆಗೆ 144 ಜನರಿಗೆ ಮಾರಣಾಂತಿಕ ಕೊರೋನಾ ಸೋಂಕು ಹರಡಿದ್ದು, ಈ ಪೈಕಿ 4 ಜನ  ಮೃತಪಟ್ಟಿದ್ದಾರೆ. ಆದರೆ, ಭಾರತದಾದ್ಯಂತ ಸುಮಾರು 3000 ಜನರಲ್ಲಿ ಈಗಾಗಲೇ ಸೋಂಕು ಕಾಣಿಸಿಕೊಂಡಿದ್ದು 76 ಜನ ಮೃತಪಟ್ಟಿದ್ದಾರೆ. ಲಾಕ್‌ಡೌನ್ ನಡುವೆಯೂ ಸಾವಿನ ಸಂಖ್ಯೆ ಅಧಿಕವಾಗುತ್ತಿರುವುದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ.

ಇದನ್ನೂ ಓದಿ : ಕೊರೋನಾ ಕಾರಣಕ್ಕೆ ಸಂಕಷ್ಟದಲ್ಲಿ ಅನಾನಸ್ ಬೆಳೆದ ಮಲೆನಾಡಿನ ರೈತ; ಜಿಲ್ಲಾಡಳಿತದಿಂದ ಸಹಾಯ ಹಸ್ತದ ಭರವಸೆ

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು