HOME » NEWS » Coronavirus-latest-news » DONT BELIEVE THE MYTHS ABOUT THE COVID VACCINE HERES THE TRUTH FROM THE MINISTRY OF HEALTH MAK

Corona Vaccine| ಕೋವಿಡ್​ ಲಸಿಕೆ ಕುರಿತ ಕಟ್ಟುಕಥೆಗಳನ್ನು ನಂಬಬೇಡಿ; ಇಲ್ಲಿದೆ ಆರೋಗ್ಯ ಸಚಿವಾಲಯ ನೀಡಿರುವ ಸತ್ಯಾಂಶ!

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಇಂದು ಕೋವಾಕ್ಸಿನ್ ಲಸಿಕೆಯ ಸಂಯೋಜನೆಯ ಕುರಿತ ಅಸಲಿ ಅಂಶವನ್ನು ಹೊರಹಾಕಿದೆ. ಅಲ್ಲದೆ, ಜನ ಕಟ್ಟುಕಥೆಗಳನ್ನು ನಂಬದೆ ವಾಸ್ತವವನ್ನು ತಿಳಿಯಿರಿ ಎಂದು ಮನವಿ ಮಾಡಿದೆ.

news18-kannada
Updated:June 16, 2021, 4:33 PM IST
Corona Vaccine| ಕೋವಿಡ್​ ಲಸಿಕೆ ಕುರಿತ ಕಟ್ಟುಕಥೆಗಳನ್ನು ನಂಬಬೇಡಿ; ಇಲ್ಲಿದೆ ಆರೋಗ್ಯ ಸಚಿವಾಲಯ ನೀಡಿರುವ ಸತ್ಯಾಂಶ!
ಕೋವಾಕ್ಸಿನ್ ಲಸಿಕೆ.
  • Share this:
ನವ ದೆಹಲಿ (ಜೂನ್ 16); ಕೊರೋನಾ ಮೊದಲ ಮತ್ತು ಎರಡನೇ ಅಲೆ ಇಡೀ ದೇಶವನ್ನು ಇನ್ನಿಲ್ಲದಂತೆ ಕಾಡಿದೆ ಮತ್ತು ಕಾಡುತ್ತಿದೆ. ಮೂರನೇ ಅಲೆಯೂ ಶೀಘ್ರದಲ್ಲೇ ದಾಳಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಭಾರತದಲ್ಲಿ ಲಕ್ಷಾಂತರ ಜನ ಈ ಸೋಂಕಿಗೆ ಬಲಿಯಾಗಿದ್ದಾರೆ. ಕೊರೋನಾದಿಂದಾಗಿ ಸಾವಿರಾರು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಮಕ್ಕಳ ಹಕ್ಕು ಆಯೋಗ ಇತ್ತೀಚೆಗೆ ಅಂಕಿಅಂಶ ನೀಡಿತ್ತು. ಹೀಗಾಗಿ ದೇಶದಲ್ಲಿರುವ ಎಲ್ಲರಿಗೂ ಕೊರೋನಾ ಲಸಿಕೆ ನೀಡುವುದೊಂದೆ ಈ ಸೋಂಕನ್ನು ಸೋಲಿಸುವ ದಾರಿ ಎನ್ನಲಾಗುತ್ತಿದೆ. ಅಲ್ಲದೆ, ಲಸಿಕೆ ನೀಡುವ ಕೆಲಸವೂ ಜೋರಾಗಿಯೇ ನಡೆಯುತ್ತಿದೆ. ಆದರೆ, ಈ ಲಸಿಕೆಯನ್ನು ಎಳೆ ಕರುವಿನ ರಕ್ತದ ಕಣಗಳಿಂದ ತಯಾರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದ್ದು, ಜನ ಸಹ ಕೆಲವೆಡೆ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಕೋವಾಕ್ಸಿನ್ ಲಸಿಕೆಯ ಸಂಯೋಜನೆಗೆ ಸಂಬಂಧಿಸಿದಂತೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಪೋಸ್ಟ್​ಗಳು ಹಡಿದಾಡುತ್ತಿವೆ. ಅದರಲ್ಲಿ ಕೋವಾಕ್ಸಿನ್ ಲಸಿಕೆ ನವಜಾತ ಕರು ರಕ್ತದ ಕಣವನ್ನು ಹೊಂದಿರುತ್ತದೆ ಎಂದು ಸೂಚಿಸಲಾಗಿದೆ. ಅಸಲಿಗೆ ಈ ಪೋಸ್ಟ್‌ಗಳಲ್ಲಿ ಸತ್ಯಗಳನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಇಂದು ಕೋವಾಕ್ಸಿನ್ ಲಸಿಕೆಯ ಸಂಯೋಜನೆಯ ಕುರಿತ ಅಸಲಿ ಅಂಶವನ್ನು ಹೊರಹಾಕಿದೆ. ಅಲ್ಲದೆ, ಜನ ಕಟ್ಟುಕಥೆಗಳನ್ನು ನಂಬದೆ ವಾಸ್ತವವನ್ನು ತಿಳಿಯಿರಿ ಎಂದು ಮನವಿ ಮಾಡಿದೆ.

ಆರೋಗ್ಯ ಇಲಾಖೆ ಪ್ರಕಟಣೆ.


ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ, "ನವಜಾತ ಕರುಗಳ ರಕ್ತದ ಕಣಗಳನ್ನು (ಸೀರಮ್​ಗಳು) ವೆರೋ ಕೋಶಗಳ ತಯಾರಿಕೆ ಅಥವಾ ಬೆಳವಣಿಗೆಗೆ ಮಾತ್ರ ಬಳಸಲಾಗುತ್ತದೆ. ವಿವಿಧ ರೀತಿಯ ಗೋವಿನ ಮತ್ತು ಇತರ ಪ್ರಾಣಿ ಸೀರಮ್​ಗಳು ವೆರೋ ಕೋಶಗಳ ಬೆಳವಣಿಗೆಗೆ ಜಾಗತಿಕವಾಗಿ ಬಳಸುವ ಪ್ರಮಾಣಿತ ಪುಷ್ಟೀಕರಣದ ಘಟಕಾಂಶವಾಗಿದೆ. ಲಸಿಕೆಗಳ ಉತ್ಪಾದನೆಗೆ ಸಹಾಯ ಮಾಡುವ ಕೋಶ ರೇಖೆಗಳನ್ನು ಸ್ಥಾಪಿಸಲು ವೆರೋ ಕೋಶಗಳನ್ನು ಬಳಸಲಾಗುತ್ತದೆ. ಈ ತಂತ್ರವನ್ನು ದಶಕಗಳಿಂದ ಪೋಲಿಯೊ, ರೇಬೀಸ್ ಮತ್ತು ಇನ್​ಫ್ಲುಯೆನ್ಸ್​ ಲಸಿಕೆಗಳಲ್ಲಿ ಬಳಸಲಾಗುತ್ತದೆ.

ಈ ವೆರೋ ಕೋಶಗಳನ್ನು, ಬೆಳವಣಿಗೆಯ ನಂತರ, ನೀರಿನಿಂದ ತೊಳೆದು, ರಾಸಾಯನಿಕಗಳೊಂದಿಗೆ (ತಾಂತ್ರಿಕವಾಗಿ ಬಫರ್ ಎಂದೂ ಕರೆಯುತ್ತಾರೆ) ನವಜಾತ ಕರು ಸೀರಮ್‌ನಿಂದ ಮುಕ್ತವಾಗಿಸಲು ಹಲವು ಬಾರಿ ಶುದ್ಧಿ ಮಾಡಲಾಗುತ್ತದೆ. ತದನಂತರ ಈ ವೆರೋ ಕೋಶಗಳು ವೈರಲ್ ಬೆಳವಣಿಗೆಗೆ ಕೊರೋನಾ ವೈರಸ್ ಸೋಂಕಿಗೆ ಬಳಸಲಾಗುತ್ತದೆ.

ಇದನ್ನೂ ಓದಿ: ಮುಸ್ಲೀಂ ವೃದ್ಧನ ಮೇಲೆ ಹಲ್ಲೆ ಪ್ರಕರಣ; ಪ್ರಶ್ನಿಸಿದ್ದ ಪತ್ರಕರ್ತರು, ಕಾಂಗ್ರೆಸ್ ನಾಯಕರು, ಟ್ವಿಟರ್​ ಮೇಲೆ ಕೇಸ್!

ವೈರಸ್ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ವೆರೋ ಕೋಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅದರ ನಂತರ ಈ ಬೆಳೆದ ವೈರಸ್ ಅನ್ನು ಸಹ ಕೊಲ್ಲಲಾಗುತ್ತದೆ (ನಿಷ್ಕ್ರಿಯಗೊಳಿಸಲಾಗಿದೆ) ಮತ್ತು ಶುದ್ಧೀಕರಿಸಲಾಗುತ್ತದೆ. ಈ ಕೊಲ್ಲಲ್ಪಟ್ಟ ವೈರಸ್ ಅನ್ನು ಅಂತಿಮ ಲಸಿಕೆ ತಯಾರಿಸಲು ಬಳಸಲಾಗುತ್ತದೆ ಮತ್ತು ಅಂತಿಮ ಲಸಿಕೆ ಸೂತ್ರೀಕರಣದಲ್ಲಿ ಯಾವುದೇ ಕರು ಸೀರಮ್ ಅನ್ನು ಬಳಸಲಾಗುವುದಿಲ್ಲ.ಇದನ್ನೂ ಓದಿ: Gujarat Road Accident: ಭೀಕರ ರಸ್ತೆ ಅಪಘಾತ: ಮಗು ಸೇರಿ 10 ಮಂದಿ ಸ್ಥಳದಲ್ಲೇ ಸಾವು

ಆದ್ದರಿಂದ, ಅಂತಿಮ ಲಸಿಕೆ (ಕೋವಾಕ್ಸಿನ್) ನವಜಾತ ಕರು ಸೀರಮ್ ಅನ್ನು ಹೊಂದಿರುವುದಿಲ್ಲ ಮತ್ತು ಕರು ಸೀರಮ್ ಅಂತಿಮ ಲಸಿಕೆ ಉತ್ಪನ್ನದ ಘಟಕಾಂಶವಲ್ಲ" ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 16, 2021, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories