ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳಬೇಡಿ; ಕೇಂದ್ರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ

ವಿದೇಶದಲ್ಲಿ ಸಿಲುಕಿದ್ದವರನ್ನು ಉಚಿತವಾಗಿ ಕರೆತರಲಾಗುತ್ತಿದೆ. ಆದರೆ, ವಲಸೆ ಕಾರ್ಮಿಕರಿಂದ ಹಣ ಕೇಳಲಾಗುತ್ತಿರುವುದು ಎಷ್ಟು ಸರಿ? ಜನರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದು ಸುಬ್ರಮಣಿಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:May 4, 2020, 12:21 PM IST
ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳಬೇಡಿ; ಕೇಂದ್ರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ
ಸುಬ್ರಮಣ್ಯ ಸ್ವಾಮಿ.
  • Share this:
ನವ ದೆಹಲಿ (ಮೇ 04); ಸತತ ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳುವ ಕೇಂದ್ರ ಸರ್ಕಾರ ಎಂಥಾ ದುರವಸ್ತೆಯಲ್ಲಿದೆ? ಎಂದು ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಸಾಧ್ಯವಾಗದೆ, ಮತ್ತೊಂದೆಡೆ ಕೆಲಸ ಮತ್ತು ಊಟ ಇಲ್ಲದೆ ದೇಶದ ನಾನಾ ಮೂಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಆದರೆ, ಅದಕ್ಕೆ ಹಣ ನೀಡಬೇಕು ಎಂದು ತಾಕೀತು ಮಾಡಿದೆ.

ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಕಿಡಿಕಾರಿರುವ ಸುಬ್ರಹ್ಮಣ್ಯ ಸ್ವಾಮಿ, "ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳಬೇಡಿ. ಇಂತಹ ಸಂದರ್ಭದಲ್ಲಿ ಬಡ ವಲಸೆ ಕಾರ್ಮಿಕರಿಂದಲೂ ಹಣ ಕೇಳುವ ಕೇಂದ್ರ ಸರ್ಕಾರ ಎಂಥಾ ದುರವಸ್ತೆಯಲ್ಲಿದೆ?

ವಿದೇಶದಲ್ಲಿ ಸಿಲುಕಿದ್ದವರನ್ನು ಉಚಿತವಾಗಿ ಕರೆತರಲಾಗುತ್ತಿದೆ. ಆದರೆ, ವಲಸೆ ಕಾರ್ಮಿಕರಿಂದ ಹಣ ಕೇಳಲಾಗುತ್ತಿರುವುದು ಎಷ್ಟು ಸರಿ? ಜನರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಬೇಕಿರುವುದು ಸರ್ಕಾರದ ಕರ್ತವ್ಯ. ರೈಲ್ವೆ ಇಲಾಖೆ ಹಣ ಕೊಡದಿದ್ದರೆ ಬಜೆಟ್ PM CARES ಫಂಡ್ ನಿಂದ ತುಂಬಿ. ಕೇಂದ್ರ ಸರ್ಕಾರ 85% ಮತ್ತು ರಾಜ್ಯ ಸರ್ಕಾರ 15% ಹಣ ಪಾವತಿಸಿ" ಎಂದು ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ಈ ನಡುವೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದಾದ್ಯಂತ ವಲಸೆ ಕಾರ್ಮಿಕರ ರೈಲ್ವೆ ಟಿಕೆಟ್‌ ದರವನ್ನು ಕಾಂಗ್ರೆಸ್‌ ಪಕ್ಷವೇ ನೀಡಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇದಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್‌ ರಾಜ್ಯ ಘಟಕಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : LockDown News: ದೇಶದಾದ್ಯಂತ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರ ತುಂಬುವುದಾಗಿ ಘೊಷಿಸಿದ ಕಾಂಗ್ರೆಸ್
First published: May 4, 2020, 10:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading