ಇದೇ ಮೊದಲ ಬಾರಿಗೆ ಮಾಸ್ಕ್​ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಡೊನಾಲ್ಡ್​ ಟ್ರಂಪ್​!

ಡಿಸೆಂಬರ್​ ವೇಳೆಗೆ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ ಫೆಬ್ರವರಿ ಕೊನೆಯಲ್ಲಿ ಅಮೆರಿಕಕ್ಕೆ ಲಗ್ಗೆ ಇಟ್ಟಿತ್ತು. ಸದ್ಯ, ಅಮೆರಿಕದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಿದ್ದರೂ ಡೊನಾಲ್ಡ್​ ಟ್ರಂಪ್​ ಮಾಸ್ಕ್​ ಧರಿಸಿರಲಿಲ್ಲ.

Rajesh Duggumane | news18-kannada
Updated:July 12, 2020, 8:03 AM IST
ಇದೇ ಮೊದಲ ಬಾರಿಗೆ ಮಾಸ್ಕ್​ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಡೊನಾಲ್ಡ್​ ಟ್ರಂಪ್​!
ಡೊನಾಲ್ಡ್​ ಟ್ರಂಪ್​
  • Share this:
ವಾಷಿಂಗ್ಟನ್​ (ಜು.12): ಕೊರೋನಾ ವೈರಸ್​ ಕಾಣಿಸಿಕೊಂಡ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಿರಂತರವಾಗಿ ಚೀನಾ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಈ ಮಧ್ಯೆಯೇ ಅವರು ಚುನಾವಣಾ ಪ್ರಚಾರದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇಷ್ಟಾದರೂ ಅವರು ಮಾಸ್ಕ್​ ಧರಿಸಿದ್ದನ್ನು ಮಾತ್ರ ಯಾರೂ ನೋಡಿರಲಿಲ್ಲ. ಕೊನೆಗೂ ಡೊನಾಲ್ಡ್​ ಟ್ರಂಪ್​ ಮಾಸ್ಕ್​ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್​ ವೇಳೆಗೆ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ ಫೆಬ್ರವರಿ ಕೊನೆಯಲ್ಲಿ ಅಮೆರಿಕಕ್ಕೆ ಲಗ್ಗೆ ಇಟ್ಟಿತ್ತು. ಸದ್ಯ, ಅಮೆರಿಕದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಿದ್ದರೂ ಡೊನಾಲ್ಡ್​ ಟ್ರಂಪ್​ ಮಾಸ್ಕ್​ ಧರಿಸಿರಲಿಲ್ಲ. ಇದಕ್ಕೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಟ್ರಂಪ್​ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಟ್ರಂಪ್ ಕೊನೆಗೂ ಮಾಸ್ಕ್​ ಹಾಕಿದ್ದಾರೆ. ಶನಿವಾರ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಮಾಸ್ಕ್​ ಹಾಕಿ ಧರಿಸಿ ಕಾಣಿಸಿಕೊಂಡಿದ್ದಾರೆ. ಸದ್ಯ, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಚಾರವಾಗಿದೆ. ಮಾಸ್ಕ್​ ಧರಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಕೊರೋನಾ ವೈರಸ್ ಹರಡುತ್ತಿದೆ. ಅದಕ್ಕೆ ಮಾಸ್ಕ್​ ಧರಿಸಬೇಕು. ಅದರಲ್ಲೂ ಆಸ್ಪತ್ರೆಗೆ ಭೇಟಿ ನೀಡುವ ವೇಳೆ ಮಾಸ್ಕ್​​ ಧರಿಸೋದು ಕಡ್ಡಾಯ ಎಂದಿದ್ದಾರೆ.

ಈ ಮೊದಲು ಟ್ರಂಪ್​ ಮಾಸ್ಕ್​ ಧರಿಸದೇ ಇರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಅವರ ಆಪ್ತರು ಸಮಜಾಯಿಶಿ ನೀಡಿದ್ದರು. ಮಾಸ್ಕ್​ ಧರಿಸುವುದರಿಂದ ಉಸಿರಾಟ ಸರಿಯಾಗಿ ಮಾಡಲು ಆಗದೆ ಆರೋಗ್ಯದ ಮೇಲೆ ಪರಿಣಾಂ ಬೀರುವ​ ಆಗುವ ಭಯ ಟ್ರಂಪ್​ಗೆ ಇದೆ. ಹೀಗಾಗಿ, ಟ್ರಂಪ್​ ಮಾಸ್ಕ್​ ಧರಿಸುತ್ತಿಲ್ಲ ಎಂದು ಟ್ರಂಪ್​ ಆಪ್ತರು ಹೇಳಿದ್ದರು.

ಅಮೆರಿಕದಲ್ಲಿ ಹೆಚ್ಚುತ್ತಿದೆ ಕೊರೋನಾ:

ಕೊರೋನಾ ಸೋಂಕು ಅಮೆರಿಕದಲ್ಲಿ ತಹಬದಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಕಾಡ್ಗಿಚ್ಚಿನಂತೆ ಹರಡಿರುವ ವೈರಸ್​ ಅನ್ನು ನಿಯಂತ್ರಣ ಮಾಡುವುದು ಅಸಾಧ್ಯ ಎಂಬಂತಾಗಿಬಿಟ್ಟಿದೆ. ಅಮೆರಿಕ ಒಂದರಲ್ಲೇ 33 ಲಕ್ಷ ಜನರಿಗೆ ಕೊರೋನಾ ವೈರಸ್ ಬಂದಿದೆ. 1.37 ಲಕ್ಷ ಜನರು ಮೃತಪಟ್ಟಿದ್ದಾರೆ. ವಿಚಿತ್ರ ಎಂದರೆ ಶನಿವಾರ ಒಂದೇ ದಿನ 45 ಸಾವಿರ ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊರೋನಾ ನಿಯಂತ್ರಣದಲ್ಲಿ ಟ್ರಂಪ್​ ವಿಫಲರಾಗಿರುವ ವಿಚಾರವನ್ನು ವಿರೋಧ ಪಕ್ಷದವರು ಚುನಾವಣಾ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
Published by: Rajesh Duggumane
First published: July 12, 2020, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading