ಅಮೆರಿಕಕ್ಕೆ ವಲಸಿಗರಿಗೆ ಭಾಗಶಃ ನಿಷೇಧ ಹೇರುವ ಆದೇಶಕ್ಕೆ ಸಹಿ ಹಾಕುವುದನ್ನು ಖಚಿತಪಡಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಆರ್ಥಿಕ ಸ್ಥಿತಿ ಕುಸಿದಿದ್ದು, ಹಿದೆಂದೂ ಕಾಣದಂತಹ ನಿರುದ್ಯೋಗ ಸಮಸ್ಯೆ ಉಂಟಾಗಬಹುದು ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಅಮೆರಿಕದ ಕೆಲಸಗಳು ಇತರರ ಪಾಲಾಗುವುದನ್ನು ತಡೆಯುವ ಸಲುವಾಗಿ ಡೊನಾಲ್ಡ್‌ ಟ್ರಂಪ್ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

 • Share this:
  ವಾಷಿಂಗ್ಟನ್: ಮಾರಕ ಕೊರೋನಾ ವೈರಸ್​ನಿಂದಾಗಿ ಜಗತ್ತು ತತ್ತರಿಸಿಹೋಗಿದ್ದು, ಅಮೆರಿಕ ಸಹ ಈ ಸಾಂಕ್ರಾಮಿಕ ಭೀಕರತೆಗೆ ಈಡಾಗಿ, ಆರ್ಥಿಕವಾಗಿ ಕುಸಿಯಲಾರಂಭಿಸಿದೆ. ಇಂತಹ ಸಮಯದಲ್ಲಿ ಅಮೆರಿಕದ ಸ್ಥಳೀಯರಿಗೆ ಉದ್ಯೋಗ ಭದ್ರತೆ ನೀಡುವ ದೃಷ್ಟಿಯಿಂದ ಯುನೈಟೆಡ್ ಸ್ಟೇಟ್ಸ್​ಗೆ ವಲಸಿಗರಿಗೆ ಭಾಗಶಃ ನಿರ್ಬಂಧ ಹೇರುವ ಪ್ರಸ್ತಾವನೆಗೆ ಸಹಿ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಖಚಿತ ಪಡಿಸಿದ್ದಾರೆ.

  ನಮ್ಮ ದೇಶಕ್ಕೆ ಬರುವ ವಲಸಿಗರಿಗೆ ನಿರ್ಬಂಧ ಹೇರುವ ಆದೇಶಕ್ಕೆ ಇಂದು ಸಹಿ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ.  "ಅದೃಶ್ಯ ಶತ್ರುವಿನ ವಿರುದ್ದದ ದಾಳಿಯ ನಡುವೆ ನಮ್ಮ ಗ್ರೇಟ್ ಅಮೆರಿಕನ್ ನಾಗರಿಕರ ಉದ್ಯೋಗಗಳನ್ನು ರಕ್ಷಿಸುವ ಅಗತ್ಯತೆಯ ದೃಷ್ಟಿಯಿಂದ, ಅಮೆರಿಕಕ್ಕೆ ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಕ್ಕೆ ನಾನು ಸಹಿ ಹಾಕುತ್ತೇನೆ" ಎಂದು ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ತಿಳಿಸಿದ್ದರು.

  ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಕೊರೋನಾ ವೈರಸ್​ ಬೆಂಬಿಡದೆ ಕಾಡುತ್ತಿದೆ. ಈ ವೈರಸ್​ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೊರೋನಾ ಮಿತಿಮೀರಿ ಬೆಳೆಯುತ್ತಿದೆ. ಈಗಾಗಲೇ 42 ಸಾವಿರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 7.92 ಲಕ್ಷ ದಾಟಿದೆ. ಜನ ನಿಬಿಡ ನಗರಗಳಾದ ನ್ಯೂಯಾರ್ಕ್​ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಪರಿಣಾಮ ಈ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

  ಈ ನಡುವೆ ಕೊರೋನಾ ಪರಿಸ್ಥಿತಿ ತಿಳಿಯಾದ ನಂತರವೂ ಅಮೆರಿಕದಲ್ಲಿ ಆರ್ಥಿಕ ಸ್ಥಿತಿ ಕುಸಿದಿದ್ದು, ಹಿದೆಂದೂ ಕಾಣದಂತಹ ನಿರುದ್ಯೋಗ ಸಮಸ್ಯೆ ಉಂಟಾಗಬಹುದು ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಅಮೆರಿಕದ ಕೆಲಸಗಳು ಇತರರ ಪಾಲಾಗುವುದನ್ನು ತಡೆಯುವ ಸಲುವಾಗಿ ಡೊನಾಲ್ಡ್‌ ಟ್ರಂಪ್ ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  ಇದನ್ನು ಓದಿ: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಸಂವಾದ
  First published: