• ಹೋಂ
  • »
  • ನ್ಯೂಸ್
  • »
  • Corona
  • »
  • Lockdown: ಸಂಪೂರ್ಣ ಲಾಕ್​ಡೌನ್​ ಜಾರಿ ಮಾಡುವಂತೆ ಮಾಡಬೇಡಿ; ಜನರಿಗೆ ಎಚ್ಚರಿಕೆ ನೀಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್!

Lockdown: ಸಂಪೂರ್ಣ ಲಾಕ್​ಡೌನ್​ ಜಾರಿ ಮಾಡುವಂತೆ ಮಾಡಬೇಡಿ; ಜನರಿಗೆ ಎಚ್ಚರಿಕೆ ನೀಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್!

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

ಪಂಜಾಬ್​ ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆಯ 157 ಕೋವಿಡ್ -19 ಸಾವುಗಳು ಸಂಭವಿಸಿವೆ. ಮತ್ತು 7,327 ಹೊಸ ಪ್ರಕರಣಗಳು ವರದಿಯಾಗಿವೆ. ಕೊರೋನಾದಿಂದಾಗಿ ಪಂಜಾಬ್‌ನ ಸಾವಿನ ಸಂಖ್ಯೆ 9,317ಕ್ಕೆ ಏರಿಕೆಯಾಗಿದೆ. ಮತ್ತು ಸೋಂಕಿತರ ಸಂಖ್ಯೆ 3,85,270 ಕ್ಕೆ ಹೆಚ್ಚಿದೆ ಎಂದು ವೈದ್ಯಕೀಯ ಇಲಾಖೆ ಭಾನುವಾರ ಪ್ರಕಟಣೆ ಬಿಡುಗಡೆ ಮಾಡಿದೆ.

ಮುಂದೆ ಓದಿ ...
  • Share this:

    ಪಂಜಾಬ್​ ರಾಜ್ಯದಲ್ಲೂ ಕೊರೋನಾ ಪರಿಸ್ಥಿತಿ ಮಿತಿಮೀರಿ ಹೋಗುತ್ತಿದೆ. ಈ ವಿಚಾರವಾಗಿ ಮಾತನಾಡಿರುವ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಒಂದು ಜನರು ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದ ಆದಲ್ಲಿ ರಾಜ್ಯವನ್ನು ಸಂಪೂರ್ಣ ಲಾಕ್​ಡೌನ್​ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ರಾಜ್ಯದಲ್ಲಿ ವಿಧಿಸಲಾದ ನಿಯಮಗಳನ್ನು ಜನರು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.


    ಪಂಜಾಬ್‌ನಲ್ಲಿ ಲಾಕ್​ಡೌನ್​ ಬಹಳ ದೂರದಲ್ಲಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಏಕೆಂದರೆ ಲಾಕ್​ಡೌನ್​ ಮಾಡುವುದರಿಂದ ಬಡವರ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಮತ್ತು ವಲಸೆ ಕಾರ್ಮಿಕರ ವಲಸೆ ಹೋಗುತ್ತಾರೆ. ಕೈಗಾರಿಕೆಗಳನ್ನು ಮತ್ತೆ ಅವ್ಯವಸ್ಥೆಗೆ ದೂಡುತ್ತದೆ. ಆದಾಗ್ಯೂ, ಜನರು ಇರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.


    ರಾಜ್ಯವು ಪ್ರಸ್ತುತ ಕಡಿಮೆ ಪ್ರಮಾಣದ ಲಾಕ್ ಡೌನ್ ಪರಿಸ್ಥಿತಿಯಲ್ಲಿದೆ. ಕೆಲವು ಪ್ರದೇಶಗಳಲ್ಲಿ ಕಠಿಣ ನಿಯಮಗಳನ್ನು ತರಲಾಗಿದೆ. ಭಾನುವಾರದಿಂದ ಹೆಚ್ಚುವರಿವಾಗಿ ಕೆಲವು ನಿರ್ಬಂಧಗಳನ್ನು ಸರ್ಕಾರ ಹೇರಿದೆ.


    ಇದನ್ನು ಓದಿ: Corona Pandemic: ಈ ತಿಂಗಳು ನಿಗದಿಯಾಗಿದ್ದ ಎಲ್ಲ ಆಫ್​ಲೈನ್​ ಪರೀಕ್ಷೆಗಳನ್ನು ಮುಂದೂಡಿದ ಕೇಂದ್ರ ಸರ್ಕಾರ


    ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎಂ ಅಮರಿಂದರ್ ಸಿಂಗ್, ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್​ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಇದರಿಂದ ಯುವಕರು ಮನೆಗಳಿಂದ ಹೊರಹೋಗುವ ನೆಪವಾಗಿ ಬಳಸುತ್ತಿದ್ದರು. "ಹೋಮ್ ಡೆಲಿವರಿ ವಿತರಣೆಯನ್ನು ಮಾತ್ರ ಅನುಮತಿಸಬೇಕು" ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು. ಆದಾಗ್ಯೂ, ರಸಗೊಬ್ಬರಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿರಲು ಅವರು ಅನುಮತಿ ನೀಡಿದರು.


    ಪಂಜಾಬ್​ ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆಯ 157 ಕೋವಿಡ್ -19 ಸಾವುಗಳು ಸಂಭವಿಸಿವೆ. ಮತ್ತು 7,327 ಹೊಸ ಪ್ರಕರಣಗಳು ವರದಿಯಾಗಿವೆ. ಕೊರೋನಾದಿಂದಾಗಿ ಪಂಜಾಬ್‌ನ ಸಾವಿನ ಸಂಖ್ಯೆ 9,317ಕ್ಕೆ ಏರಿಕೆಯಾಗಿದೆ. ಮತ್ತು ಸೋಂಕಿತರ ಸಂಖ್ಯೆ 3,85,270 ಕ್ಕೆ ಹೆಚ್ಚಿದೆ ಎಂದು ವೈದ್ಯಕೀಯ ಇಲಾಖೆ ಭಾನುವಾರ ಪ್ರಕಟಣೆ ಬಿಡುಗಡೆ ಮಾಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶನಿವಾರ 58,229 ರಿಂದ 60,108 ಕ್ಕೆ ಏರಿದೆ ಎಂದು ಅದು ಹೇಳಿದೆ.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು