ಹಸಿರು ವಲಯಗಳಲ್ಲಿ ಮಾತ್ರ ದೇಶೀಯ ವಿಮಾನ ಸೇವೆ ಆರಂಭ; ವಿಮಾನಯಾನ ಸಚಿವ ಪುರಿ ಸ್ಪಷ್ಟನೆ

Domestic Flights: ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವಾಲಯ ಸೂಚನೆ  ನೀಡಿದೆ. ಆದರೆ, ಈ ವಿಷಯದಲ್ಲಿ ಇನ್ನು ಅಂತೀಮ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿ ಅವರು ಈ ಬಗ್ಗೆ ಅಂತಿಮ ತೀರ್ಮಾನ  ತೆಗೆದುಕೊಳ್ಳಲಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಆಗಮನ ಮತ್ತು ನಿರ್ಗಮನ ನಗರಗಳು ಹಸಿರು ವಲಯದಲ್ಲಿದ್ದಾಗ ಮಾತ್ರ ದೇಶೀಯ ವಿಮಾನ ಸೇವೆಗಳು ಪುನರಾರಂಭಗೊಳ್ಳುತ್ತವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ಸ್ಪಷ್ಟಪಡಿಸಿದ್ದಾರೆ. ಸಿಎನ್​ಎನ್​-ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೇ 17ರಂದು ಲಾಕ್​ಡೌನ್​ ಮುಗಿದ ಬಳಿಕ ಕೊರೋನಾ ಪ್ರಕರಣಗಳನ್ನು ನೋಡಿಕೊಂಡು ಎಲ್ಲೆಡೆ ಸ್ಥಳೀಯವಾಗಿ ವಿಮಾನ ಸೇವೆ ಆರಂಭಿಸುವುದಾಗಿಯೂ ತಿಳಿಸಿದ್ದಾರೆ.

  ಲಾಕ್​ಡೌನ್​ ಮುಗಿದ ಬಳಿಕ ಮೇ 17ರ ನಂತರ ವಿಮಾನ ಸೇವೆ ಆರಂಭಿಸುವ ಸಂಬಂಧ ಎಲ್ಲ ವಾಣಿಜ್ಯ ವಿಮಾನಯಾನ ಸಂಸ್ಥೆಗಳೊಂದಿಗೆ ಸರ್ಕಾರ ಮಾತುಕತೆ ನಡೆಸಿದೆ. ವಿಮಾನ ಸೇವೆಗಳು ಯಾವಾಗ ಬೇಕಾದರೂ ಆರಂಭವಾಗಬಹುದು. ಪ್ರಾಥಮಿಕ ಹಂತದಲ್ಲಿ ಸ್ಥಳೀಯವಾಗಿ ವಿಮಾನ ಸೇವೆಗಳನ್ನು ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

  ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್​ ಇಂಡಿಯಾದ 64 ವಿಮಾನಗಳ ವ್ಯವಸ್ಥೆ ಮಾಡಿರುವುದಾಗಿ ಸಚಿವ ಪುರಿ ತಿಳಿಸಿದ್ದಾರೆ. 1.9 ಲಕ್ಷ ನಾಗರಿಕರನ್ನು ಭಾರತಕ್ಕೆ ಕರೆತರುವ ಬಹುದೊಡ್ಡ ಕಾರ್ಯಾಚರಣೆ ಈ ಸಮಯದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

  ವಿಮಾನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸರ್ಕಾರ ಚರ್ಚೆ ನಡೆಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಮಾನದಲ್ಲಿ ಒಂದು ಆಸನ ತೆಗೆಯಲು ಹಾಗೂ ವಿಮಾನ ಪ್ರಯಾಣ ದರವನ್ನು ಹೆಚ್ಚಿಸುವ ಸಲಹೆಯನ್ನು ವಿಮಾನಯಾನ ಸಂಸ್ಥೆಗಳು ನೀಡಿವೆ. ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷೆ ದೃಷ್ಟಿಯಿಂದ ಯಾವುದೇ ರಾಜೀ ಮಾಡಿಕೊಳ್ಳದಂತೆ ವಿಮಾನಯಾನ ಸಂಸ್ಥೆಗಳು ಹಾಗೂ ಸಚಿವಾಲಯ ಕೆಲಸ ಮಾಡಲು ತೀರ್ಮಾನಿಸಿವೆ. ಆದರೆ, ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವಾಲಯ ಸೂಚನೆ  ನೀಡಿದೆ. ಆದರೆ, ಈ ವಿಷಯದಲ್ಲಿ ಇನ್ನು ಅಂತೀಮ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿ ಅವರು ಈ ಬಗ್ಗೆ ಅಂತಿಮ ತೀರ್ಮಾನ  ತೆಗೆದುಕೊಳ್ಳಲಿದ್ದಾರೆ.

  ಇದನ್ನು ಓದಿ: Killer Hornets - ಕೊರೋನಾ ಆಯ್ತು, ಅಮೆರಿಕ ಪ್ರವೇಶಿಸಿದ ಚೀನಾದ ಮಾರಕ ಕಿಲ್ಲರ್ ಕಡಜಗಳು
  First published: