Domestic Flights: ಇಂದಿನಿಂದ ಭಾರತದಲ್ಲಿ ವಿಮಾನ ಹಾರಾಟ; ಇಲ್ಲಿದೆ ಹೊಸ ಮಾರ್ಗಸೂಚಿ ಪಟ್ಟಿ

India Domestic Flights Resume: ಭಾರತದಲ್ಲಿ ಇಂದಿನಿಂದ ದೇಶೀಯ ವಿಮಾನ ಸಂಚಾರ ಆರಂಭಿಸಲಾಗಿದೆ. ಕರ್ನಾಟಕಕ್ಕೆ ವಿಮಾನದಲ್ಲಿ ಬರುವವರು 1 ವಾರಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾದ್ದು ಕಡ್ಡಾಯ.

Sushma Chakre | news18-kannada
Updated:May 25, 2020, 7:00 AM IST
Domestic Flights: ಇಂದಿನಿಂದ ಭಾರತದಲ್ಲಿ ವಿಮಾನ ಹಾರಾಟ; ಇಲ್ಲಿದೆ ಹೊಸ ಮಾರ್ಗಸೂಚಿ ಪಟ್ಟಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 25): ಎರಡು ತಿಂಗಳ ಲಾಕ್​ಡೌನ್​ನಿಂದಾಗಿ ಜನರು ತಮ್ಮ ಊರುಗಳಿಗೆ ಹೋಗಲಾರದೆ ಪರದಾಟ ನಡೆಸಿದ್ದರು. ಅನಿವಾರ್ಯ ಸ್ಥಿತಿಯಲ್ಲಿದ್ದ ಜನರಿಗೆ ತಮ್ಮ ಊರು ಸೇರಿಕೊಳ್ಳಲು ಸರ್ಕಾರದಿಂದಲೇ ರೈಲು, ಬಸ್​ಗಳ ವ್ಯವಸ್ಥೆ ಮಾಡಲಾಗಿತ್ತು. ಹಾಗೇ, ವಿದೇಶದಲ್ಲಿದ್ದ ಭಾರತೀಯರನ್ನು ಕೂಡ ವಿಶೇಷ ವಿಮಾನ, ಹಡಗಿನ ಮೂಲಕ ವಾಪಾಸ್​ ಕರೆತರಲಾಗಿತ್ತು. ಇಂದಿನಿಂದ ಭಾರತದಲ್ಲಿ ದೇಶೀಯ ವಿಮಾನಗಳ ಸಂಚಾರ ಶುರುವಾಗಲಿದೆ. ಆದರೆ, ವಿಮಾನಗಳಲ್ಲಿ ತಮ್ಮ ರಾಜ್ಯಗಳನ್ನು ಸೇರಿಕೊಳ್ಳಬೇಕೆಂದಿರುವವರಿಗೆ ಆರೋಗ್ಯ ಇಲಾಖೆ ಇಂದು ಕೆಲವು ಮಾರ್ಗಸೂಚಿಗಳನ್ನು ನೀಡಿದೆ.

ಇದರ ಜೊತೆಗೆ, ಕೊರೋನಾ ಆತಂಕ ಹೆಚ್ಚಾಗಿರುವ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್​ ಮುಂತಾದ ಕೆಲವು ರಾಜ್ಯಗಳು ಕೂಡ ತಮ್ಮ ರಾಜ್ಯಕ್ಕೆ ವಿಮಾನಗಳಲ್ಲಿ ಬರುವವರಿಗೆ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯ ನೀಡಿರುವ ಆದೇಶದಂತೆ ದೇಶೀಯ ವಿಮಾನಗಳ ಮೂಲಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳುವ ಪ್ರಯಾಣಿಕರು ಹೋಮ್ ಕ್ವಾರಂಟೈನ್​ನಲ್ಲಿರಬೇಕಾದುದು ಅನಿವಾರ್ಯ. ಈ ಹೋಂ​ ಕ್ವಾರಂಟೈನ್​ ಅವಧಿಯನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಅದರಂತೆ ಆಯಾ ರಾಜ್ಯಗಳಲ್ಲಿ ಬೇರೆ ರೀತಿಯ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Heatwave: ಬಿಸಿಗಾಳಿಯಿಂದ ಉತ್ತರ ಭಾರತದಲ್ಲಿ ರೆಡ್ ಅಲರ್ಟ್​ ಘೋಷಣೆ; ಕರ್ನಾಟಕದಲ್ಲೂ ಎಚ್ಚರಿಕೆ!

ಕರ್ನಾಟಕ:

ಕರ್ನಾಟಕದಲ್ಲಿ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖವಾಗಿ 7 ರಾಜ್ಯಗಳಿಂದ ಕರ್ನಾಟಕಕ್ಕೆ ವಿಮಾನದಲ್ಲಿ ಬರುವವರು 1 ವಾರಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾದ್ದು ಕಡ್ಡಾಯ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್​ ಮುಂತಾದ ಅತಿಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಇರುವ ರಾಜ್ಯಗಳಿಂದ ಆಗಮಿಸುವವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಹಾಗೇ, ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ಪ್ರಯಾಣಿಕರು ಬಳಸುವ ಟ್ಯಾಕ್ಸಿಗಳನ್ನು ಕೂಡ ಸಂಪೂರ್ಣ ಸ್ಯಾನಿಟೈಸ್​ಗೊಳಿಸಲಾಗುವುದು. ಟ್ಯಾಕ್ಸಿಗಳಲ್ಲಿ ಸಂಚರಿಸುವ ಟ್ರೈವರ್ ಮತ್ತು ಪ್ರಯಾಣಿಕರಿಗೆ ಮಾಸ್ಕ್​ ಕಡ್ಡಾಯ. ಅಲ್ಲದೆ, ಕರ್ನಾಟಕದ ಏರ್​ಪೋರ್ಟ್​ಗಳಿಂದ ಟ್ಯಾಕ್ಸಿ, ಕ್ಯಾಬ್​ ಸೇವೆ ಒದಗಿಸುವವರು ಕೂಡ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲೇಬೇಕು.

ದೆಹಲಿ:ದೆಹಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ, ದೆಹಲಿಗೆ ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರು ಹೋಂ ಕ್ವಾರಂಟೈನ್​ನಲ್ಲಿರಬೇಕಾದ ಅಗತ್ಯವಿಲ್ಲ. ಒಂದುವೇಳೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ವೇಳೆ ಕೊರೋನಾ ಲಕ್ಷಣಗಳು ಕಂಡುಬಂದರೆ ಅವರು ಹೋಂ ಕ್ವಾರಂಟೈನ್​, ಸರ್ಕಾರಿ ಅಥವಾ ಖಾಸಗಿ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ನಂತರ ಅವರಿಗೆ ಕೊರೋನಾ ತಪಾಸಣೆ ಮಾಡಲಾಗುತ್ತದೆ. ಆಗ ಅವರಿಗೆ ಪಾಸಿಟಿವ್ ಕಂಡುಬಂದರೆ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತದೆ.

ಇದನ್ನೂ ಓದಿ: Murder News: ಮಹಾರಾಷ್ಟ್ರದ ಆಶ್ರಮದಲ್ಲಿ ಬಳ್ಳಾರಿ ಮೂಲದ ಸಾಧು ಬರ್ಬರ ಹತ್ಯೆ

ಉತ್ತರ ಪ್ರದೇಶ:
ವಿಮಾನದ ಮೂಲಕ ಉತ್ತರ ಪ್ರದೇಶ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ 14 ದಿನಗಳ ಹೋಮ್ ಕ್ಯಾರಂಟೈನ್‌ ಕಡ್ಡಾಯಗೊಳಿಸಲಾಗಿದೆ. ಒಂದುವೇಳೆ ಮನೆಯಲ್ಲಿ ಕ್ವಾರಂಟೈನ್ ಆಗಲು ಅವಕಾಶ ಇಲ್ಲದಿದ್ದರೆ ಅಂಥವರಿಗೆ ಸರ್ಕಾರದ ಕ್ವಾರಂಟೈನ್​ ಕೇಂದ್ರಗಳಲ್ಲಿ ಇರಿಸಲಾಗುವುದು. ಹಾಗೇ, ಎಲ್ಲ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳುವುದು ಕಡ್ಡಾಯ.

ತಮಿಳುನಾಡು:
ತಮಿಳುನಾಡಿನಲ್ಲಿ ಕೂಡ ಹೊರ ರಾಜ್ಯಗಳ ಪ್ರಯಾಣಿಕರಿಗೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯ. ಎಲ್ಲ ಪ್ರಯಾಣಿಕರೂ ತಮಿಳುನಾಡಿನ ವಿಶೇಷ ಪೋರ್ಟಲ್​ನಲ್ಲಿ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿಕೊಂಡು, ಸಂಪೂರ್ಣ ಮಾಹಿತಿ ನೀಡಬೇಕು.

ಪಂಜಾಬ್:
ಪಂಜಾಬ್ ಹಾಗೂ ಜಮ್ಮು ಕಾಶ್ಮೀರಗಳಲ್ಲಿ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಎಲ್ಲ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುವುದು. ಈ ವೇಳೆ ಅವರಿಗೆ ಕೊರೋನಾ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ಕರೆದೊಯ್ಯಲಾಗುವುದು.
First published: May 25, 2020, 7:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading