Domestic Flights: ಬೆಂಗಳೂರಿಗೆ ಹಲವು ವಿಮಾನಗಳ ಹಾರಾಟ ರದ್ದು; ರಾಜ್ಯದಲ್ಲಿ ಎಲ್ಲೆಲ್ಲಿ ವಿಮಾನ ಸಂಚಾರ?

Domestic Flights: ಕೊರೋನಾ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿಯೊಬ್ಬ ವೈಮಾನಿಕ ಪ್ರಯಾಣಿಕರಿಗೂ ಆರೋಗ್ಯ ಸೇತು ಆ್ಯಪ್ ಕಡ್ಡಾಯಪಡಿಸಲಾಗಿದೆ.

news18-kannada
Updated:May 25, 2020, 8:42 AM IST
Domestic Flights: ಬೆಂಗಳೂರಿಗೆ ಹಲವು ವಿಮಾನಗಳ ಹಾರಾಟ ರದ್ದು; ರಾಜ್ಯದಲ್ಲಿ ಎಲ್ಲೆಲ್ಲಿ ವಿಮಾನ ಸಂಚಾರ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ 25): ಇವತ್ತಿನಿಂದ ದೇಶಾದ್ಯಂತ ಸಾರ್ವಜನಿಕ ವಿಮಾನ ಹಾರಾಟ ಮತ್ತೆ ಚಾಲನೆಗೆ ಬಂದಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಲ್ಲಿ ಕೊರೋನಾ ಆತಂಕದ ನಡುವೆ ವೈಮಾನಿಕ ಸೇವೆ ನಡೆದಿದೆ. ಬೆಂಗಳೂರಿಗೆ ಇವತ್ತು 97 ವಿಮಾನಗಳು ಬರಲು ನಿಗದಿಯಾಗಿದೆ. ಹಾಗೆಯೇ, ಬೆಂಗಳೂರಿನಿಂದ ವಿವಿಧೆಡೆಗೆ 95 ವಿಮಾನಗಳು ಹೋಗುತ್ತಿವೆ ಆದರೆ, ಮೊದಲ ದಿನವೇ ಹಲವು ವಿಮಾನಗಳು ರದ್ದಾಗಿವೆ. ಬೆಂಗಳೂರಿಗೆ ಬರಬೇಕಿದ್ದ 25ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ ಎಂಬ ಮಾಹಿತಿ ಲಭಿಸಿದೆ.

ಕೊರೋನಾ ವೈರಸ್ ಭೀತಿ ನಡುವೆ ಇವತ್ತು ಬೆಳಗ್ಗೆ 5:15ಕ್ಕೆ ಬೆಂಗಳೂರಿನಿಂದ ಮುಂಬೈಗೆ ಮೊದಲ ವಿಮಾನ ಸಂಚಾರ ಆಗಿದೆ. ಇನ್ನು, ರಾತ್ರಿ 1:10ಕ್ಕೆ ಬೆಂಗಳೂರಿಗೆ ಬರಬೇಕಿದ್ದ ಒಂದು ವಿಮಾನ ರದ್ದಾಗಿದೆ. ಇವತ್ತು ಬೆಂಗಳೂರಿನಿಂದ ದೇಶದ ವಿವಿಧೆಡೆ ನಗರಗಳಿಗೆ ವಿಮಾನ ಹಾರಾಟ ನಡೆಯುತ್ತಿರುವಂತೆಯೇ ರಾಜಧಾನಿಯಿಂದ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ ಮತ್ತು ಬೀದರ್ ನಗರಗಳಿಗೂ ವಿಮಾನಗಳು ಹೋಗಿ ಬಂದು ಮಾಡಲಿವೆ.

ಇದನ್ನೂ ಓದಿ: Domestic Flights: ಇಂದಿನಿಂದ ಭಾರತದಲ್ಲಿ ವಿಮಾನ ಹಾರಾಟ; ಇಲ್ಲಿದೆ ಹೊಸ ಮಾರ್ಗಸೂಚಿ ಪಟ್ಟಿ

ಏರ್ ಇಂಡಿಯಾ, ಇಂಡಿಗೋ, ಏರ್ ಏಷ್ಯಾ, ವಿಸ್ತಾರಾ, ಸ್ಪೈಸ್ ಜೆಟ್, ಟ್ರೂ ಜೆಟ್, ಸ್ಟಾರ್ ಏರ್, ಅಲೈನ್ಸ್ ಏರ್ ಸಂಸ್ಥೆಗಳ ವಿಮಾನಗಳ ಸಂಚಾರ ಆಗುತ್ತಿದೆ.

ಮುಂಬೈ, ರಾಂಚಿ, ಚೆನ್ನೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್ ನಗರಗಳಿಂದ ವಿಮಾನಗಳು ಬರುತ್ತಿವೆ. ಬೆಂಗಳೂರಿನಿಂದ ಮುಂಬೈ, ರಾಂಚಿ, ಚೆನ್ನೈ, ದೆಹಲಿ, ಇಂದೋರ್, ವಿಜಯವಾಡ, ಪುಣೆ, ಕೋಲ್ಕತಾ, ಕೊಚ್ಚಿ, ಅಹ್ಮದಾಬಾದ್ ನಗರಗಳಿಗೆ ವಿಮಾನಗಳ ಸಂಚಾರ ಇದೆ.

ರಾಜ್ಯದೊಳಗೆ ಎಲ್ಲೆಲ್ಲಿ ವಿಮಾನ ಸಂಚಾರ?
ಬೆಂಗಳೂರು-ಮಂಗಳೂರುಬೆಂಗಳೂರು-ಮೈಸೂರು
ಬೆಂಗಳೂರು-ಹುಬ್ಬಳ್ಳಿ
ಬೆಂಗಳೂರು-ಬೆಳಗಾವಿ
ಬೆಂಗಳೂರು-ಕಲಬುರ್ಗಿ
ಬೆಂಗಳೂರು-ಬೀದರ್
ಮೈಸೂರು-ಬೆಳಗಾವಿ

ಇದನ್ನೂ ಓದಿ: ಎಲ್ಲೆಡೆ ಇಂದು ರಂಜಾನ್ ಹಬ್ಬ; ಈದ್ ಶುಭಾಶಯ ತಿಳಿಸಿದ ರಾಜ್ಯ ರಾಜಕೀಯ ನಾಯಕರು

ಹಾಗೆಯೇ, ಬೆಂಗಳೂರು, ಮೈಸೂರು ಮತ್ತು ಮಂಗಳೂರು ಮಧ್ಯೆ ವಿಮಾನ ಸಂಚಾರ ಇದೆ. ಮೈಸೂರಿನಿಂದ ಬೆಂಗಳೂರಿಗೆ ವಿಮಾನ ಬರಲಿದೆ. ಇನ್ನು, ರಾಜ್ಯದೊಳಗೂ ಕೆಲ ವಿಮಾನಗಳು ರದ್ದಾಗಿವೆ. ಬೆಳಗಾವಿಯಿಂದ ಮೈಸೂರಿಗೆ ಬರಬೇಕಿದ್ದ ಟ್ರೂಜೆಟ್ ವಿಮಾನ ಪ್ರಯಾಣಿಕರ ಕೊರತೆಯಿಂದ ರದ್ದಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿಯೊಬ್ಬ ವೈಮಾನಿಕ ಪ್ರಯಾಣಿಕರಿಗೂ ಆರೋಗ್ಯ ಸೇತು ಆ್ಯಪ್ ಕಡ್ಡಾಯಪಡಿಸಲಾಗಿದೆ. ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್​ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತೀ ಎರಡು ಗಂಟೆಗೊಮ್ಮೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಫಾಗ್ ಮೆಷಿನ್ ಮೂಲಕ ಪರಿಸರಸ್ನೇಹಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.
First published: May 25, 2020, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading