ಸರ್ಕಾರದ ಕಾನೂನು ಆರ್​ಎಸ್​ಎಸ್​ಗೆ ಅನ್ವಯಿಸುವುದಿಲ್ಲವೇ?; ಸಂಘಪರಿವಾರ ಸಮಾವೇಶದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಶುಕ್ರವಾರ ರಾಜ್ಯದಲ್ಲಿ ಎಮರ್ಜೆನ್ಸಿ ಘೋಷಿಸಿರುವ ರಾಜ್ಯ ಸರ್ಕಾರ ಮುಂದಿನ ಒಂದು ವಾರಗಳ ಕಾಲ ಸಾರ್ವಜನಿಕ ಸಭೆ ಸಮಾರಂಭಗಳು ನಡೆಯುವುದನ್ನು ನಿಷೇಧಿಸಿತ್ತು. ಆದರೆ, ಮಾರ್ಚ್.15 ರಂದು ನಗರದಲ್ಲಿ ಮೂರು ದಿನಗಳ ಕಾಲ ಆರ್​ಎಸ್​ಎಸ್​ ಮಹಾ ಸಮಾವೇಶ ನಡೆಯಲಿದೆ. ಇದಕ್ಕೆ ಸರ್ಕಾರವೂ ಅನುಮತಿ ನೀಡಿದೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
ಬೆಂಗಳೂರೂ (ಮಾರ್ಚ್ 14); ಮಾರಣಾಂತಿಕ ಕೊರೋನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಶುಕ್ರವಾರ ರಾಜ್ಯದಲ್ಲಿ ಎಮರ್ಜೆನ್ಸಿ ಘೋಷಿಸಿರುವ ರಾಜ್ಯ ಸರ್ಕಾರ ಮುಂದಿನ ಒಂದು ವಾರಗಳ ಕಾಲ ಸಾರ್ವಜನಿಕ ಸಭೆ ಸಮಾರಂಭಗಳು ನಡೆಯುವುದನ್ನು ನಿಷೇಧಿಸಿತ್ತು. ಆದರೆ, ಮಾರ್ಚ್.15 ರಂದು ನಗರದಲ್ಲಿ ಮೂರು ದಿನಗಳ ಕಾಲ ಆರ್​ಎಸ್​ಎಸ್​ ಮಹಾ ಸಮಾವೇಶ ನಡೆಯಲಿದೆ. ಇದಕ್ಕೆ ಸರ್ಕಾರವೂ ಅನುಮತಿ ನೀಡಿದೆ. ಹೀಗಾಗಿ ಸರ್ಕಾರದ ಇಬ್ಬಗೆಯ ನೀತಿಯ ವಿರುದ್ಧ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟರ್​ನಲ್ಲಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿದ್ದರಾಮಯ್ಯ, “ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾವೇಶ-ಸಮಾರಂಭಗಳ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ಆದರೆ, ನಗರದಲ್ಲಿ ಆರ್​ಎಸ್​ಎಸ್​ ಮಹಾ ಸಮಾವೇಶ ಇದೇ 15ರಿಂದ ಅನಿರ್ಬಂಧಿತವಾಗಿ ನಡೆಯಲಿದೆ. ಸನ್ಮಾನ್ಯ ಮುಖ್ಯಮಂತ್ರಿಗಳೇ ಆರ್​ಎಸ್​ಎಸ್​ ಗೆ ಸರ್ಕಾರಿ ಆದೇಶಗಳು ಅನ್ವಯಿಸುವುದಿಲ್ಲವೇ?” ಎಂದು ಕಿಡಿಕಾರಿದ್ದಾರೆ.ಮತ್ತೊಂದು ಟ್ವಿಟ್​ನಲ್ಲಿ “ಇದೇ 15ರಿಂದ ನಡೆಯಲಿರುವ ಆರ್​ಎಸ್​ಎಸ್​ ಸಮಾವೇಶದಲ್ಲಿ ದೇಶದ ಬೇರೆ ಕಡೆಗಳಿಂದ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕನಿಷ್ಠ ಈ ಪ್ರತಿನಿಧಿಗಳ ಆರೋಗ್ಯದ ಕಾಳಜಿ ದೃಷ್ಟಿಯಿಂದಾದರೂ ಮಹಾ ಸಮಾವೇಶವನ್ನು ಮುಂದೂಡಿ ಯಾವ ಸಿದ್ದಾಂತವೂ ಮನುಷ್ಯನ ಪ್ರಾಣಕ್ಕಿಂತ ಹೆಚ್ಚಲ್ಲ” ಎಂದು ಒತ್ತಾಯಿಸಿದ್ದಾರೆ.ಆದರೆ, ಸಿದ್ದರಾಮಯ್ಯ ಹೀಗೆ ಟ್ವಿಟ್ ಮೂಲಕ ಆರ್​ಎಸ್​ಎಸ್​ ಸಮಾವೇಶದ ಕುರಿತು ಪ್ರಶ್ನೆ ಮಾಡುತ್ತಿದ್ದಂತೆ ರಾಜ್ಯ ಸರ್ಕಾರ ಮತ್ತು ಸಂಘಪರಿವಾರ ಈ ಸಮಾವೇಶವನ್ನ ಮುಂದೂಡಿದೆ ಎಂದು ಹೇಳಲಾಗುತ್ತಿದೆ.
First published: