ಚಳಿಗಾಲದಲ್ಲಿ ದ್ವಿಗುಣವಾಗಲಿದೆಯೇ ಕೊರೋನಾ ಸೋಂಕಿನ ತೀವ್ರತೆ?; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ಮಾಹಿತಿ!

ವಾತಾವರಣದಲ್ಲಿ ತಾಪಮಾನದ ಇಳಿಕೆ, ಮಳೆ ಮತ್ತು ಚಳಿಯಿಂದಾಗಿ ವಾತಾವರಣ ತಂಪಾದರೆ ಕೊರೋನಾ ವೈರಸ್ ಹರಡಲು ಸಹಕಾರಿಯಾಗುತ್ತದೆ. COVID-19 ದೇಶದಲ್ಲಿ ಮತ್ತಷ್ಟು ವ್ಯಾಪಕವಾಗಿ ಹರಡಲು ಹವಾಮಾನವೇ ಅನುಕೂಲ ಮಾಡಿಕೊಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

MAshok Kumar | news18india
Updated:July 20, 2020, 9:33 AM IST
ಚಳಿಗಾಲದಲ್ಲಿ ದ್ವಿಗುಣವಾಗಲಿದೆಯೇ ಕೊರೋನಾ ಸೋಂಕಿನ ತೀವ್ರತೆ?; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ಮಾಹಿತಿ!
ಸಾಂದರ್ಭಿಕ ಚಿತ್ರ.
  • Share this:
ನವ ದೆಹಲಿ (ಜುಲೈ 20); ಮಾರಣಾಂತಿಕ ಕೊರೋನಾ ವೈರಸ್ ಈಗಾಗಲೇ ದೇಶದಲ್ಲಿ ಸಾಮೂದಾಯಿಕವಾಗಿ ಹರಡಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಮಳೆ ಮತ್ತು ಚಳಿಗಾಲದ ಸಂದರ್ಭದಲ್ಲಿ ವೈರಸ್ ಹರಡುವ ವೇಗ ಪಾದರಸದಂತೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮತ್ತೊಂದು ಆಘಾತಕಾರಿ ವಿಚಾರವನ್ನು ಭುವನೇಶ್ವರ್ ಐಐಟಿ ಮತ್ತು ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

"ವಾತಾವರಣದಲ್ಲಿ ತಾಪಮಾನದ ಇಳಿಕೆ, ಮಳೆ ಮತ್ತು ಚಳಿಯಿಂದಾಗಿ ವಾತಾವರಣ ತಂಪಾದರೆ ಕೊರೋನಾ ವೈರಸ್ ಹರಡಲು ಸಹಕಾರಿಯಾಗುತ್ತದೆ. COVID-19 ದೇಶದಲ್ಲಿ ಮತ್ತಷ್ಟು ವ್ಯಾಪಕವಾಗಿ ಹರಡಲು ಹವಾಮಾನವೇ ಅನುಕೂಲ ಮಾಡಿಕೊಡುತ್ತದೆ" ಎಂದು ಹವಾಮಾನ ವಿಜ್ಞಾನಗಳ ಸಹಾಯಕ ಪ್ರಾಧ್ಯಾಪಕ ವಿ. ವಿನೋಜ್ ನೇತೃತ್ವದ ಭುವನೇಶ್ವರ ಐಐಟಿ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.

"ಭಾರತದಲ್ಲಿ COVID-19 ಹರಡುವಿಕೆ ಅದರ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆಯ ಮೇಲೆ ಅವಲಂಬಿತವಾಗಿದೆ" ಎಂಬ ಶೀರ್ಷಿಕೆಯಲ್ಲಿ ಭುವನೇಶ್ವರ್ ಐಐಟಿ ಮತ್ತು ಏಮ್ಸ್ ಸಂಶೋಧಕರ ಕಳೆದ ಎರಡು ತಿಂಗಳ ಹಿಂದೆ ಅಧ್ಯಯನಕ್ಕೆ ಮುಂದಾಗಿದ್ದರು. ಈ ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮಾದರಿಯಾಗಿ ಏಪ್ರಿಲ್ ಮತ್ತು ಜೂನ್ ನಡುವೆ 28 ರಾಜ್ಯಗಳಲ್ಲಿ ದಾಖಲಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು.

ಆದರೆ, ಅಂತಿಮವಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚಳವು ವೈರಸ್ ಹರಡುವಿಕೆಯ ಕುಸಿತಕ್ಕೆ ಕಾರಣವಾಗುತ್ತದೆ. ಅದೇ ರೀತಿ ತಾಪಮಾನ ಕಡಿಮೆಯಾದಷ್ಟು ಸೋಂಕಿನ ಪ್ರಮಾಣ ಮತ್ತಷ್ಟು ವೇಗವಾಗಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ದ್ವಿಗುಣವಾಗಲಿದೆ” ಎಂದು ಅಧ್ಯಯನವು ಬಹಿರಂಗಪಡಿಸಿದೆ ಎಂದು ವಿನೋಜ್ ತಿಳಿಸಿದ್ದಾರೆ.

ಆದಾಗ್ಯೂ, ಮಾನ್ಸೂನ್ ಮತ್ತು ಚಳಿಗಾಲದ ಆರಂಭದಿಂದ ಹೆಚ್ಚಿನ ಆರ್ದ್ರತೆಯ ಅವಧಿಯಲ್ಲಿ ಈ ಅಧ್ಯಯನವನ್ನು ನಡೆಸಲಾಗಿಲ್ಲವಾದ್ದರಿಂದ, ಕೊರೋನಾ ವೈರಸ್ ಈ ಅವಧಿಯಲ್ಲಿ ಉಂಟು ಮಾಡಬಹುದಾದ ಪರಿಣಾಮವನ್ನು ನಿಖರವಾಗಿ ಅಂದಾಜಿಸಲು ಮತ್ತಷ್ಟು ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಮ ಮಂದಿರ ನಿರ್ಮಾಣವಾದರೆ ಕೊರೋನಾದಿಂದ ದೇಶ ಮುಕ್ತವಾಗುತ್ತದೆಯೇ? ಶರದ್ ಪವಾರ್ ಪ್ರಶ್ನೆ


ಭಾರತದಲ್ಲಿ ಈಗಾಗಲೇ ಕೊರೋನಾ ವೈರಸ್‌ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ನೀಡುವ ಮಾಹಿತಿಯಂತೆ ಭಾರತದಲ್ಲಿ ಈಗಾಗಲೇ 10,77,618 ಜನರಿಗೆ ಕೊರೋನಾ ಸೋಂಕು ತಗುಲಿದೆ. 26,816 ಜನ ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ. ಮುಂಬೈ, ದೆಹಲಿ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಸಂಶೋಧಕರ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಹೊರಹಾಕಿರುವುದು ಆತಂಕಕ್ಕೆ ಕಾರಣವಾಗಿದೆ.
Published by: MAshok Kumar
First published: July 20, 2020, 9:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading