ಆಹಾರ ಇಲ್ಲದೆ ಒದ್ದಾಡುತ್ತಿರುವ ಮೂಕ ಪ್ರಾಣಿಗಳ ಹಸಿವು ನೀಗಿಸುತ್ತಿದ್ದಾರೆ ದೊಡ್ಡಬಳ್ಳಾಪುರದ ಯುವಕರು

Thank You Coronavirus Helpers: ದೊಡ್ಡಬಳ್ಳಾಪುರ-ಗೌರಿಬಿದನೂರು ರಾಜ್ಯ ಹೆದ್ದಾರಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಪ್ರಾಣಿಗಳು ಲಾಕ್​ಡೌನ್​ ಹೊಡೆತಕ್ಕೆ ನಲುಗಿವೆ. ಇವರಿಗೆ ಸ್ಥಳೀಯ ಯುವಕರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ರಾಕಿ

ಪ್ರಾಣಿಗಳಿಗೆ ಆಹಾರ ನೀಡುತ್ತಿರುವ ರಾಕಿ

  • Share this:
ದೊಡ್ಡಬಳ್ಳಾಪುರ (ಏ.13): ಕೊರೋನಾ ವೈರಸ್​ ಇಡೀ ಜಗತ್ತನ್ನೇ ನಲುಗಿಸುತ್ತಾ ಇರೋದು ಸುಳ್ಳಲ್ಲ. ಕೊರೋನಾ ಭೀತಿಯಿಂದ ಅದೆಷ್ಟೋ ಜನ ಆಹಾರ, ನೀರು ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಅಂಥವರಿಗೆ ಕೆಲವರು ಅನ್ನ, ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಮಾತು ಬರುವ ಮನುಷ್ಯ ಅಳಲನ್ನು ಹೇಳಿಕೊಳ್ಳುತ್ತಾನೆ. ಆದರೆ, ಮೂಕ ಪ್ರಾಣಿಗಳ ಗತಿ? ಈಗ ದೊಡ್ಡಬಳ್ಳಾಪುರದಲ್ಲಿ ಮೂಕ ಪ್ರಾಣಿಗಳ ಸಹಾಯಕ್ಕೆ ಕೆಲವರು ಮುಂದೆ ಬಂದಿದ್ದಾರೆ.

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಘಾಟಿ ಸುಭ್ರಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಪ್ರತಿ ನಿತ್ಯ ಸಾವಿರಾರು ಭಕ್ತರು ಸೇರಿದಂತೆ ಪ್ರವಾಸಿಗರ ದಂಡೇ ಬರುತ್ತಿತ್ತು. ಲಾಕ್ ಡೌನ್ ನಿಂದಾಗಿ ಇತ್ತ ಕಡೆಗೆ ಜನರು ಸುಳಿಯದ ಪರಿಸ್ಥಿತಿ ಉಂಟಾಗಿದೆ. ಈ ಮೊದಲು ಪ್ರವಾಸಿಗರು ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಆದರೆ, ಈಗ ದೊಡ್ಡಬಳ್ಳಾಪುರ-ಗೌರಿಬಿದನೂರು ರಾಜ್ಯ ಹೆದ್ದಾರಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಪ್ರಾಣಿಗಳು ಲಾಕ್​ಡೌನ್​ ಹೊಡೆತಕ್ಕೆ ನಲುಗಿವೆ.

ಇದನ್ನು ಅರಿತ ಸ್ಥಳೀಯ ಯುವಕ ರಾಕಿ ಮತ್ತು ತಂಡ ಪ್ರತಿ ದಿನ ಬಾಳೆ ಹಣ್ಣು, ಟೊಮ್ಯಾಟೋ, ಬಿಸ್ಕತ್ತು, ಬ್ರೆಡ್ ಹಾಗೂ ನೀರನ್ನು ಪೂರೈಸುತ್ತಿದ್ದು ಮೂಕ ಪ್ರಾಣಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 15 ಕೊರೋನಾ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ

ರಾಕಿ ಮತ್ತು ತಂಡ ತಮ್ಮತೋಟದಲ್ಲಿ ಬೆಳೆದಿರುವ ಹಣ್ಣು ತರಕಾರಿಗಳು ತಂದು ಪ್ರಾಣಿಗಳಿಗೆ ನೀಡುತ್ತಿದ್ದಾರೆ. ಇಲ್ಲಿನ ಗೊಂಡಾರಣ್ಯದಲ್ಲಿ ಕರಡಿ, ಸೀಳುನಾಯಿ, ತೋಳ ಮೊದಲಾದ ಪ್ರಾಣಿಗಳ ಜೊತೆ ನವಿಲುಗಳು ಹೇರಳವಾಗಿವೆ. ಅಲ್ಲಲ್ಲಿ ನೀರಿನ ಬಾಟಲಿ ಸೇರಿದಂತೆ ಸರ್ಕಾರ ನಿರ್ಮಿಸಿರುವ ತೊಟ್ಟಿಗಳಲ್ಲಿ ನೀರು ತುಂಬಿಸುವ ಕಾಯಕವನ್ನು ರಾಕಿ ಮತ್ತು ಆತನ ತಂಡ ಮಾಡುತ್ತಿದೆ. ಈ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.
First published: