ಕೊರೋನಾ ಆರ್ಭಟದ ನಡುವೆ ಕಣ್ಣು ಕುಕ್ಕುತ್ತಿದೆ ಮಡ್ರಾಸ್ ಐ; ನಿರ್ಲಕ್ಷ್ಯ ಮಾಡಬೇಡಿ ಎನ್ನುತ್ತಾರೆ ವೈದ್ಯರು

ಬೇಸಿಗೆ ಕಾಲದಲ್ಲಿ ತಪ್ಪದೇ ಬರೋ ಈ ಸೋಂಕಿನ ಮೂಲ ಬ್ಯಾಕ್ಟೀರಿಯಾ. ಒಬ್ಬರಿಂದ ಒಬ್ಬರಿಗೆ ಬೇಗನೇ ಹರಡೋ ಇದು ಶಾಲಾ ಮಕ್ಕಳ ಪಾಲಿಗೆ ದೊಡ್ಡ ವಿಲನ್ ಆಗ್ತಿತ್ತು.

ಮಡ್ರಾಸ್​ ಹೈ

ಮಡ್ರಾಸ್​ ಹೈ

  • Share this:
ಬೆಂಗಳೂರು(ಮೇ.16): ಕಾಲಕ್ಕೆ ತಕ್ಕಂತೆ ಖಾಯಿಲೆಗಳೂ ಮನುಷ್ಯರನ್ನ ಕಾಡ್ತಾನೇ ಇರುತ್ತೆ. ಬೇಸಿಗೆಯಲ್ಲೊಂದಿಷ್ಟು, ಮಳೆಗಾಲಕ್ಕೆ ಮತ್ತೊಂದಿಷ್ಟು, ಚಳಿಗಾಲದಲ್ಲಿ ಬೇರೆಯದ್ದು ಹೀಗೆ. ಆದರೆ ಈ ಬಾರಿ ಎಲ್ಲಾ ಕಡೆ ಕೊರೋನಾ ವೈರಸ್ ಹಾವಳಿ ಜೋರಾಗಿರೋದರಿಂದ ಬೇರೆ ಎಲ್ಲಾ ಖಾಯಿಲೆಗಳೂ ಸ್ವಲ್ಪ ಸೈಡಿಗೆ ಹೋದಂತಾಗಿದೆ.

ಹೌದು, ಎಲ್ಲೆಡೆಯೂ ಕೊರೋನಾ ವೈರಸ್​ನದ್ದೇ ಹಾವಳಿ. ಇದೆಲ್ಲದರ ನಡುವೆಯೂ ಸ್ವಲ್ಪ ಹೆಚ್ಚೇ ಎನಿಸುವಂತೆ ಕಂಡು ಬರುತ್ತಿರೋದು ಮಡ್ರಾಸ್ ಐ ಅಥವಾ ಕಂಜಂಕ್ಟಿವೈಟಿಸ್. ಕಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಸುರು ತುಂಬಿದಂತಾಗೋದು, ನೆಯಾಗೋದು, ದೃಷ್ಟಿ ಮಬ್ಬಾಗೋದು, ಕಣ್ಣು ಊದಿಕೊಳ್ಳೋದು ಇವೆಲ್ಲಾ ಇದ್ರೆ ಅದು ಖಂಡಿತಾ ಮಡ್ರಾಸ್ ಐ.

ಬೇಸಿಗೆ ಕಾಲದಲ್ಲಿ ತಪ್ಪದೇ ಬರೋ ಈ ಸೋಂಕಿನ ಮೂಲ ಬ್ಯಾಕ್ಟೀರಿಯಾ. ಒಬ್ಬರಿಂದ ಒಬ್ಬರಿಗೆ ಬೇಗನೇ ಹರಡೋ ಇದು ಶಾಲಾ ಮಕ್ಕಳ ಪಾಲಿಗೆ ದೊಡ್ಡ ವಿಲನ್ ಆಗ್ತಿತ್ತು.

ಇದನ್ನೂ ಓದಿ: ನಾಲ್ಕನೇ ಬಾರಿಗೆ ಮೇ 31ರವರೆಗೂ ಲಾಕ್​ಡೌನ್​​ ವಿಸ್ತರಣೆ ಸಾಧ್ಯತೆ: ಏನಿರಬಹುದು? ಯಾವುದಕ್ಕೆ ನಿರ್ಬಂಧ?

ಇನ್ನು, ಈ ಬಾರಿ ಲಾನ್​​ಡೌನ್​​ನಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿರೋದ್ರಿಂದ ಮಕ್ಕಳಲ್ಲಿ ಮಡ್ರಾಸ್ ಐ ಹರಡುವ ಅಪಾಯವಿಲ್ಲ. ಆದರೆ, ಅನೇಕರಲ್ಲಿ ಈ ಸೋಂಕಿನ ಹಾವಳಿ ಶುರುವಾಗಿದೆ. ಒಬ್ಬ ವ್ಯಕ್ತಿಗೆ ಮಡ್ರಾಸ್ ಐ ಉಂಟಾಗಿ ಆತ ಕಣ್ಣು ಮುಟ್ಟಿದ ಕೈಯಲ್ಲಿ ಮೇಜನ್ನು ಮುಟ್ಟಿರುತ್ತಾನೆ ಎಂದುಕೊಳ್ಳಿ. ಅದೇ ಮೇಜನ್ನು ಮತ್ತೊಬ್ಬ ಮುಟ್ಟಿ ತಿಳಿಯದೇ ಆ ಕೈಯಲ್ಲಿ ತನ್ನ ಕಣ್ಣು ಮುಟ್ಟಿಕೊಂಡ್ರೆ ಸೋಂಕು ಹರಡೋದು ಪಕ್ಕಾ.

ಹೀಗೆ ಒಬ್ಬರಿಂದ ಒಬ್ಬರಿಗೆ ಹರಡುವ ಕಣ್ಣಿನ ಈ ಸೋಂಕು ಸಂಪೂರ್ಣವಾಗಿ ಗುಣವಾಗಬಲ್ಲದು. ನಿರ್ಲಕ್ಷ್ಯ ಮಾಡಿ ವೈದ್ಯರ ಬಳಿ ಹೋಗದೇ ಇದ್ದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಮಡ್ರಾಸ್ ಐ ಅಥವಾ ಕಂಜಂಕ್ಟಿವೈಟಿಸ್ ಇದೆ ಎಂದು ಅನುಮಾನ ಬಂದರೆ ಅಥವಾ ಕಣ್ಣಿನಲ್ಲಿ ಯಾವುದೇ ಬದಲಾವಣೆ ಉಂಟಾದ್ರೂ ತಪ್ಪದೇ ವೈದ್ಯರನ್ನು ಕಾಣುವುದು ಒಳಿತು.
First published: