• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾಗೆ ಹಸುವಿನ ಸಗಣಿ, ಗಂಜಲವೇ ರಾಮಬಾಣ ಎನ್ನುತ್ತಿವೆ ಆಶ್ರಮಗಳು; ವೈದ್ಯರಿಂದ ಎಚ್ಚರಿಕೆ

ಕೊರೋನಾಗೆ ಹಸುವಿನ ಸಗಣಿ, ಗಂಜಲವೇ ರಾಮಬಾಣ ಎನ್ನುತ್ತಿವೆ ಆಶ್ರಮಗಳು; ವೈದ್ಯರಿಂದ ಎಚ್ಚರಿಕೆ

ಚಿಕಿತ್ಸೆಗೆ ಬರುವವರಿಗೆ ಸಗಣಿ ಮೂತ್ರವನ್ನು ಮಿಶ್ರಣ ಮಾಡಿ ಅವರ ದೇಹಕ್ಕೆ ಹಚ್ಚಲಾಗುತ್ತದೆ. ಅದು ಒಣಗಿದ ಬಳಿಕ ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ

ಚಿಕಿತ್ಸೆಗೆ ಬರುವವರಿಗೆ ಸಗಣಿ ಮೂತ್ರವನ್ನು ಮಿಶ್ರಣ ಮಾಡಿ ಅವರ ದೇಹಕ್ಕೆ ಹಚ್ಚಲಾಗುತ್ತದೆ. ಅದು ಒಣಗಿದ ಬಳಿಕ ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ

ಚಿಕಿತ್ಸೆಗೆ ಬರುವವರಿಗೆ ಸಗಣಿ ಮೂತ್ರವನ್ನು ಮಿಶ್ರಣ ಮಾಡಿ ಅವರ ದೇಹಕ್ಕೆ ಹಚ್ಚಲಾಗುತ್ತದೆ. ಅದು ಒಣಗಿದ ಬಳಿಕ ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ

  • Share this:

ಅಹಮದಾಬಾದ್ (ಮೇ. 11): ಕೊರೋನಾ ಸೋಂಕು ತಡೆಗೆ ಅಹಮದಬಾದ್​ನಲ್ಲಿ ಆಶ್ರಮವೊಂದರಲ್ಲಿ ಹಸುವಿನ ಪಂಚ ಗವ್ಯಗಳಿಂದ ತಯಾರಿಸಿರುವ ಆಯುರ್ವೇದ ಔಷಧಿಗಳನ್ನು ಪ್ರಯೋಗ ಮಾಡಲಾಗುತ್ತಿದೆ. ಹಸುವಿನ ಸಗಣಿ, ಹಾಲು ತುಪ್ಪದಂತಹ ವಸ್ತುಗಳ ಮೂಲಕ ಈ ಔಷಧಿ ತಯಾರಿ ಕೊರೋನಾಗೆ ಮದ್ದು ನೀಡುವ ಪ್ರಯೋಗ ನಡೆಯುತ್ತಿದ್ದು, ಹಸುವಿನ ಸಗಣಿ ಇದಕ್ಕೆ ಉತ್ತಮ ಔಷಧಿ ಎನ್ನಲಾಗಿದೆ. ಅಲ್ಲದೇ ಈ ಔಷಧಗಳು ಸೋಂಕಿತರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಇಲ್ಲಿನ ಕೆಲವು​ ಗೋಶಾಲೆ ಆಶ್ರಮ ತಿಳಿಸಿದೆ. ಈ ಕುರಿತು ಎಚ್ಚರಿಕೆ ನೀಡಿರುವ ವೈದ್ಯರು, ಈ ಕುರಿತು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಲ್ಲದೇ ಇವು ಸೋಂಕು ಹೆಚ್ಚಳದ ಅಪಾಯವನ್ನು ಹೊಂದಿದೆ ಎಂದಿದ್ದಾರೆ.


ಗುಜರಾತ್​ನ ಹಲವು ಗೋಶಾಲೆಗಳಲ್ಲಿ ವಾರಕ್ಕೊಮ್ಮೆ ಸಗಣಿಯನ್ನು ದೇಹಕ್ಕೆ ಹಚ್ಚಿಕೊಂಡು ಕೆಲವು ಗಂಟೆಗಳ ಇರಬೇಕು. ಜೊತೆಗೆ ಗೋ ಮೂತ್ರ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಕೊರೋನಾ ವೈರಸ್​​ ಸೋಂಕಿನಿಂದ ಚೇತರಿಸಿಕೊಳ್ಳಬಹುದು ಎಂದು ತಿಳಿಸಲಾಗುತ್ತಿದೆ.


ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ಹಸುವಿನ ಸಗಣಿ ಮತ್ತು ಮೂತ್ರವನ್ನು ಪವಿತ್ರ ಎಂದು ಭಾವಿಸಲಾಗುತ್ತಿದೆ. ಅಲ್ಲದೇ, ಮನೆ ಸ್ವಚ್ಛತೆಯಲ್ಲಿ ಸಗಣಿಯನ್ನು ಬಳಕೆ ಮಾಡಲಾಗುತ್ತಿರುವುದರಿಂದ ಇದು ಚಿಕಿತ್ಸಕ ಗುಣ ಹೊಂದಿದ್ದು, ನಂಜು ನಿರೋಧಕ ಎಂದು ಭಾವಿಸಲಾಗಿದೆ. ವೈದ್ಯರು ಸಹ ಇಲ್ಲಿಗೆ ಬರುತ್ತಾರೆ. ಈ ರೋಗ ಚಿಕಿತ್ಸೆ ಅವರ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಔಷಧ ಕಂಪನಿಯ ವ್ಯವಸ್ಥಾಪಕ ಗೌತಮ್​ ಮನಿಲಾಲ್​ ಬೋರಿಸಾ ತಿಳಿಸುತ್ತಾರೆ.


ಇನ್ನು ಇಲ್ಲಿನ ಸ್ವಾಮಿನಾರಾಯಣ ಗುರುಕುಲ ವಿಶ್ವ ವಿದ್ಯಾಲಯ ಪ್ರತಿಷ್ಟಾನಂಗೆ ಚಿಕಿತ್ಸೆಗೆ ಬರುವವರಿಗೆ ಸಗಣಿ ಮೂತ್ರವನ್ನು ಮಿಶ್ರಣ ಮಾಡಿ ಅವರ ದೇಹಕ್ಕೆ ಹಚ್ಚಲಾಗುತ್ತದೆ. ಅದು ಒಣಗಿದ ಬಳಿಕ ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ. ಇಲ್ಲಿ ಬರುವವರು ಆಶ್ರಮದ ಹಸುಗಳನ್ನು ಗೌರವದಿಂದ ಕಂಡು ತಬ್ಬಿಕೊಳ್ಳಿತ್ತಾರೆ, ಅವರ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಯೋಗ ಅಭ್ಯಾಸ ಕೂಡ ನಡೆಸಲಾಗುತ್ತಿದೆ.


ಸಗಣಿಯ ಮೂಲಕ ಕೋವಿಡ್​ ಚಿಕಿತ್ಸೆ ಪಡೆಯುವ ವಿಧಾನವನ್ನು ಮುಂಚಿನಿಂದಲೂ ಜಗತ್ತಿನ ವೈದ್ಯರು ಮತ್ತು ತಜ್ಞರು ವಿರೋಧಿಸಿದ್ದು, ಎಚ್ಚರಿಸುತ್ತಲೇ ಇದ್ದಾರೆ. ಇದು ಜನರಲ್ಲಿ ಸುಳ್ಳು ನಂಬಿಕೆ ಬೆಳೆಸುವ ತಂತ್ರವಾಗಿದೆ. ಅಲ್ಲದೇ ಇದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆ ಬಿಗಾಡಯಿಸಲಿದೆ ಎಂದು ಎಚ್ಚರಿಸಿದ್ದಾರೆ.


ಇದನ್ನು ಓದಿ: ಸರ್ಕಾರ ನಡೆಸುವುದೇ ಕಷ್ಟ, ವಿಶೇಷ ಪ್ಯಾಕೇಜ್​ ಹೇಗೆ ನೀಡುವುದು; ಎಂಪಿ ರೇಣುಕಾಚಾರ್ಯ


ಹಸುವಿನ ಸಗಣಿ, ಮೂತ್ರದಿಂದ ಸೋಂಕು ದೂರಾಗುತ್ತದೆ ಎಂಬ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಇದು ಕೇವಲ ಜನರ ನಂಬಿಕೆ ಆಧಾರಿತ. ಇದರಿಂದ ಆರೋಗ್ಯ ಸಮಸ್ಯೆ ಎದರಾಗುರವ ಜೊತೆಗೆ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ರಾಷ್ಟ್ರೀಯ ಅಧ್ಯಕ್ಷ ಡಾ ಜೆಎ ಜಯಲಾಲ್​ ತಿಳಿಸಿದ್ದಾರೆ.


ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮತ್ತೊಂದು ಆಶ್ರಮದ ಮೇಲ್ವಿಚಾರಕರು, ಜನರು ಹೆಚ್ಚಾಗಿ ಸೇರುವುದರಿಂದ ಸೋಂಕು ಹರಡುವ ಆತಂಕ ಇದೆ. ಇದೆ ಕಾರಣ ತಮ್ಮ ಆಶ್ರಮದಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರ ಈ ರೀತಿಯ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

First published: