HOME » NEWS » Coronavirus-latest-news » DOCTORS SUGGEST PEOPLE NOT TO HAVE PREGNANCY UNTIL CORONA MEDICINE FOUND SNVS

ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಗರ್ಭಪಾತ ಆಗುತ್ತಿರುವುದೇಕೆ? ವೈದ್ಯರು ಏನ್ ಹೇಳ್ತಾರೆ?

ಜ್ವರ ಬಂದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ವೈರಸ್ ಪ್ರಭಾವದಿಂದ ದೇಹದ ರೋಗನಿರೋಧಕ ವ್ಯವಸ್ಥೆ ಶಕ್ತಿಮೀರಿ ಕೆಲಸ ಮಾಡುತ್ತದೆ. ವೈರಸ್ ಮತ್ತು ರೋಗನಿರೋಧಕ ವ್ಯವಸ್ಥೆ ಹೋರಾಟದಲ್ಲಿ ಮಗು ಬಲಿಯಾಗುತ್ತದೆ ಎನ್ನುತ್ತಾರೆ ವೈದ್ಯರು.

news18-kannada
Updated:June 3, 2020, 11:40 AM IST
ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಗರ್ಭಪಾತ ಆಗುತ್ತಿರುವುದೇಕೆ? ವೈದ್ಯರು ಏನ್ ಹೇಳ್ತಾರೆ?
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜೂನ್ 03): ಕೊರೊನಾ ಸೋಂಕು ಗರ್ಭಿಣಿ ಮಹಿಳೆಯರ ಪಾಲಿನ ಅತಿದೊಡ್ಡ ವಿಲನ್ ಆಗ್ತಿದೆ. ದೇಶದ ಉದ್ದಗಲದಲ್ಲಿ ಅನೇಕ ಗರ್ಭಿಣಿಯರಿಗೆ ಮೊದಲ ಮೂರು ತಿಂಗಳೊಳಗೆ ಗರ್ಭಪಾತವಾಗುತ್ತಿರುವುನ್ನು ವೈದ್ಯರು ಗಮನಿಸಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಈ ಅನಾಹುತ ಆಗುತ್ತಿರೋದು ಯಾಕೆ ಎನ್ನುವ ಪ್ರಶ್ನೆಗೆ ವೈದ್ಯರು ಒಂದಷ್ಟು ಗಂಭೀರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಕೊರೋನಾ ಸೋಂಕಿತರಿಗೆ ಗರ್ಭಪಾತ ಆಗುತ್ತಿರುವುದಕ್ಕೆ ವೈರಸ್ ಪ್ರಭಾವ ಮತ್ತು ಜ್ವರವೇ ಮೂಲ ಕಾರಣವಂತೆ. ಗರ್ಭಿಣಿ ಮಹಿಳೆಗೆ ಮೊದಲ ಮೂರು ತಿಂಗಳಲ್ಲಿ ಗರ್ಭಚೀಲದಲ್ಲಿ ಪ್ಲಾಸೆಂಟಾ ಇನ್ನೂ ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲ. ಜ್ವರ ಬಂದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ವೈರಸ್ ಪ್ರಭಾವದಿಂದ ದೇಹದ ರೋಗನಿರೋಧಕ ವ್ಯವಸ್ಥೆ ಶಕ್ತಿಮೀರಿ ಕೆಲಸ ಮಾಡುತ್ತದೆ. ಆಗ ಮಗುವನ್ನು ಕಾಪಾಡುವ ಪ್ಲಾಸೆಂಟಾ ಇನ್ನೂ ಬೆಳೆಯದೇ ಇರೋದರಿಂದ ವೈರಸ್ ಮತ್ತು ರೋಗನಿರೋಧಕ ವ್ಯವಸ್ಥೆಯ ನಡುವಿನ ಹೋರಾಟದಲ್ಲಿ ಮಗು ಬಲಿಯಾಗುತ್ತದೆ ಎನ್ನುತ್ತಾರೆ ವೈದ್ಯರು.

ಮಗುವನ್ನು ತಾಯಿಯ ಗರ್ಭದೊಳಗೆ ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಪ್ಲಾಸೆಂಟಾ ಮಾಡುತ್ತದೆ. ತಾಯಿಯ ದೇಹದಿಂದ ಆಹಾರ, ಆಕ್ಸಿಜನ್ ಎಲ್ಲವೂ ಮಗುವನ್ನು ತಲುಪುವುದು ಪ್ಲಾಸೆಂಟಾ ಮೂಲಕವೇ. ಕೊರೋನಾ ಸೋಂಕು ತಗುಲಿದ ಗರ್ಭಿಣಿಯರಲ್ಲಿ ಪ್ಲಾಸೆಂಟಾ ಮೊದಲ 3 ತಿಂಗಳಲ್ಲಿ ಸರಿಯಾಗಿ ಬೆಳವಣಿಗೆ ಆಗಿರುವುದಿಲ್ಲವಾದ್ದರಿಂದ ಗರ್ಭಪಾತವಾಗುತ್ತದೆ.

ಇದನ್ನೂ ಓದಿ: ಸಿಎಂ ಸಂಧಿಸಿದ ಕತ್ತಿ; ಯಡಿಯೂರಪ್ಪ ಮೇಲಿನ ಮುನಿಸು ಮರೆತರಾ ಹುಕ್ಕೇರಿ ಶಾಸಕ?

ಹಾಗಾಗಿ ಕನಿಷ್ಠ ಕೊರೊನಾಗೆ ಲಸಿಕೆ ಸಿಗುವವರೆಗೆ ಅಥವಾ ಈ ಅಪಾಯದ ಸಮಯ ಕಳೆಯುವವರೆಗೆ ಗರ್ಭ ಧರಿಸುವುದನ್ನು ಮುಂದೂಡಿ ಎನ್ನುತ್ತಾರೆ ವೈದ್ಯರು. ಈಗಾಗಲೇ ಜೈಪುರ ಮತ್ತು ಮುಂಬೈನಲ್ಲಿ ಕರೊನಾದಿಂದಾಗಿ ಗರ್ಭಪಾತವಾದ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಬೆಗಳೂರಿನ ವೈದ್ಯರು ಈ ಬಗ್ಗೆ ತಮ್ಮ ರೋಗಿಗಳಿಗೂ ಮಾಹಿತಿ ನೀಡುತ್ತಿದ್ದಾರೆ.

Youtube Video
Published by: Vijayasarthy SN
First published: June 3, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories